Site icon Vistara News

Maharudra Yaga: ಲೋಕ ಕಲ್ಯಾಣಾರ್ಥವಾಗಿ ಮತ್ತೂರು ಕೇಶವ ಅವಧಾನಿ ಅರ್ಚಕತ್ವದಲ್ಲಿ ಮಹಾರುದ್ರ ಯಾಗ

Maharudra Yaga sagara Mattur Keshava Avadhani

#image_title

ಸಾಗರ: ಇಲ್ಲಿನ ಅಗ್ರಹಾರದ ದತ್ತ ಮಂದಿರದ ಆವರಣದಲ್ಲಿ ಮಹಾರುದ್ರ ಯಾಗ (Maharudra Yaga) ಸಮಿತಿಯ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಭಾನುವಾರ (ಫೆ.೨೬) ಹಮ್ಮಿಕೊಂಡಿದ್ದ ಮಹಾರುದ್ರ ಯಾಗವನ್ನು ಮತ್ತೂರು ಕೇಶವ ಅವಧಾನಿ ಅರ್ಚಕತ್ವದಲ್ಲಿ ನಡೆಸಲಾಯಿತು. ಸುಮಾರು 200ಕ್ಕೂ ಹೆಚ್ಚು ಅರ್ಚಕರು 11 ಹೋಮ ಕುಂಡಗಳ ಮೂಲಕ ಯಶಸ್ವಿಯಾಗಿ ನಡೆಸಿದರು. 1131 ರುದ್ರ ಪಠಣದೊಂದಿಗೆ 2,26,391 ಆಹುತಿಯನ್ನು 11 ಕುಂಡಗಳಲ್ಲಿ ಹವಿಸ್ಸಾಗಿ ಅರ್ಪಿಸಲಾಯಿತು.

ಶಾಸಕ ಹರತಾಳು ಹಾಲಪ್ಪ ಅವರು ಮಹಾರುದ್ರ ಯಾಗದಲ್ಲಿ ಪಾಲ್ಗೊಂಡು ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಮಹಾರುದ್ರ ಯಾಗ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಸರ್ವಧರ್ಮೀಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಂತೋಷ ತಂದಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಪರಸ್ಪರ ಸಾಮರಸ್ಯ ಸಾಧಿಸಲು ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: Kedarnath Temple: ಚಿನ್ನದ ದೇಗುಲವಾದ ಕೇದಾರನಾಥ; ಯಾತ್ರೆ ಸಮಯದಲ್ಲಿಯೇ ಚಿನ್ನದ ಕಳಸ ಪ್ರತಿಷ್ಠಾಪನೆ

ಮಹಾರುದ್ರ ಯಾಗ ಸಮಿತಿಯ ಅಧ್ಯಕ್ಷ ಅಬಸೆ ದಿನೇಶ ಕುಮಾರ್ ಎನ್.ಜೋಷಿ ಮಾತನಾಡಿ, “ಕೊರೊನಾ ಸಂದರ್ಭದಲ್ಲಿ ರುದ್ರ ಪಾರಾಯಣವನ್ನು ಮನೆ ಮನೆಯಲ್ಲಿ ನಡೆಸುವ ಮೂಲಕ ಜನರನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಾರ್ಥನೆ ಸಲ್ಲಿಸಲಾಗಿತ್ತು. 200ಕ್ಕೂ ಹೆಚ್ಚು ರುದ್ರ ಪಾರಾಯಣವನ್ನು ಮನೆ ಮನೆಯಲ್ಲಿ ನಡೆಸಲಾಗಿತ್ತು. ಗುರು ಹಿರಿಯರ ಸಲಹೆಯಂತೆ ಮಹಾರುದ್ರ ಯಾಗದ ಮೂಲಕ ರುದ್ರ ಪಾರಾಯಣವನ್ನು ಸಮಾಪ್ತಿಗೊಳಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿರುವುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Rashmika Mandanna: ಅವಾರ್ಡ್ ಫಂಕ್ಷನ್‌ನಲ್ಲಿ ಶಾರ್ಟ್ ಡ್ರೆಸ್‌ ಧರಿಸಿದ್ದ ರಶ್ಮಿಕಾ ಮಂದಣ್ಣ: ಉರ್ಫಿ-2 ಎಂದ ನೆಟ್ಟಿಗರು!

ಕಾರ್ಯಕ್ರಮದಲ್ಲಿ ಬಿ.ಆರ್.ಜಯಂತ್, ಹರನಾಥ ರಾವ್ ಮತ್ತಿಕೊಪ್ಪ, ಟಿ.ವಿ.ಪಾಂಡುರಂಗ, ಮಾ.ಸ. ನಂಜುಂಡಸ್ವಾಮಿ, ನವೀನ್ ಜೋಯ್ಸ್, ಅಶ್ವಿನಿ ಕುಮಾರ್, ಗೋಪಿ ದೀಕ್ಷಿತ್, ಎಂ.ಎಸ್.ಸತೀಶ್, ವಿ.ಮಹೇಶ್, ಬಿ.ಎಚ್.ಲಿಂಗರಾಜ್, ವೈ.ಮೋಹನ್, ಸತ್ಯನಾರಾಯಣ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: BS Yediyurappa : ಯಡಿಯೂರಪ್ಪರನ್ನು ಹಸುವಿನ ಥರ ಹಾಲು ಹಿಂಡಿ ಮನೆಗೆ ಕಳುಹಿಸುತ್ತಾರೆ ಎಂದ ಬಿ.ಕೆ. ಹರಿಪ್ರಸಾದ್‌

Exit mobile version