Site icon Vistara News

Marikamba Fair | ಮಾರಿಕಾಂಬಾ ಜಾತ್ರೆಯ ಅಂಗವಾಗಿ ವಿಜೃಂಭಣೆಯಿಂದ ನಡೆದ ಮರ ಕಡಿಯುವ ಶಾಸ್ತ್ರ

Marikamba Fair sagara

ಸಾಗರ: ಇತಿಹಾಸ ಪ್ರಸಿದ್ಧವಾದ ಶ್ರೀ ಮಾರಿಕಾಂಬಾ ಜಾತ್ರೆಯ (Marikamba Fair) ಅಂಗವಾಗಿ ಮಂಗಳವಾರ (ಡಿ.೨೭) ಮರ ಕಡಿಯುವ ಶಾಸ್ತ್ರ ವಿಜೃಂಭಣೆಯಿಂದ ನಡೆಯಿತು.

ಮಾರಿಕಾಂಬಾ ದೇವಸ್ಥಾನದ ಗಂಡನ ಮನೆಯ ಪ್ರಧಾನ ಅರ್ಚಕರಾದ ರವಿ ಪೋತರಾಜ ಅವರನ್ನು ನೆಹರು ನಗರದ ಅವರ ಮನೆಯಿಂದ ಧಾರ್ಮಿಕ ವಿಧಿವಿಧಾನದ ಪ್ರಕಾರ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಮಾರ್ಗ ಮಧ್ಯೆ ಅಶೋಕ ರಸ್ತೆಯಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಪೂತರಾಜನಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಪೋತರಾಜನ ಮನೆಯಲ್ಲಿ ನಡೆದ ಪೂಜೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ |Lawyers Protest | ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ: ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ವಕೀಲರ ಪ್ರತಿಭಟನೆ

ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದ ನಂತರ ಆವಾಹನೆಗೊಂಡ ಪೋತರಾಜ ಕೈಯಲ್ಲಿದ್ದ ಚಾಟಿ ಬೀಸುತ್ತಾ ಹಲಸಿನ ಮರ ಹುಡುಕಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದನು. ನಂತರ ಶ್ರೀರಾಮಪುರ ಬಡಾವಣೆಯಲ್ಲಿರುವ ಕಾಲಭೈರವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಹಲಸಿನ ಮರಕ್ಕೆ ಪೋತರಾಜ ಚಾಟಿ ಹೊಡೆಯುವ ಮೂಲಕ ಮರವನ್ನು ಗುರುತಿಸುವ ಶಾಸ್ತ್ರ ಅಂತಿಮಗೊಂಡಿತು. ನಂತರ ಮರಕ್ಕೆ ವಿಶೇಷವಾದ ಪೂಜೆ ಸಲ್ಲಿಸಲಾಯಿತು.

ತವರುಮನೆಯಲ್ಲಿ ನಡೆದ ಪೂಜೆಯಲ್ಲಿ ನಗರಸಭೆಯ ಅಧ್ಯಕ್ಷೆ ಮಧುರಾ ಶಿವಾನಂದ್, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಉಪಾಧ್ಯಕ್ಷರಾದ ಸುಂದರ್ ಸಿಂಗ್, ಸಂಚಾಲಕರಾದ ಪುರುಷೋತ್ತಮ್, ಸಂತೋಷ್ ಶೇಟ್ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಆರ್‌ಎಸ್‌ಎಸ್‌ ವಿರುದ್ಧ ಹಾಗೂ ಕಾಂಗ್ರೆಸ್‌ ವಿರುದ್ಧ ಸದನಕ್ಕೆ ದಾಖಲೆ ನೀಡಿದ ಪ್ರಿಯಾಂಕ್‌ ಖರ್ಗೆ ಮತ್ತು ಸಿ.ಟಿ. ರವಿ

Exit mobile version