Site icon Vistara News

Marikamba Fair: ಸಾಗರದ ಮಾರಿಕಾಂಬ ಜಾತ್ರೆಯ ಧಾರ್ಮಿಕ ಪೂಜೆಗೆ ಚಾಲನೆ

Marikamba Fair sagara

#image_title

ಸಾಗರ: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆ (Marikamba Fair) ಮಂಗಳವಾರದಿಂದ (ಫೆ.೭) ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಭಾನುವಾರ (ಫೆ.೫) ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಸೋಮವಾರವೂ ವಿವಿಧ ಕಾರ್ಯಕ್ರಮಗಳು ನೆರವೇರಿದವು.

ಕಂಚಿಗಾರ್ ಸಮಾಜದ ವತಿಯಿಂದ ಶ್ರೀ ಮಾರಿಕಾಂಬ ದೇವಿಗೆ ಭಾನುವಾರ ಬೆಳಗ್ಗೆ (ಫೆ.೫) ಬಾಗಿನ ಸಮರ್ಪಿಸಲಾಯಿತು. ನಂತರ ದೇವರ ಗರ್ಭಗುಡಿಗೆ ಬಾಗಿನ ತರಲಾಯಿತು. ನಗರದ ಅಶೋಕ ರಸ್ತೆಯಲ್ಲಿ ಇರುವ ಗೋವಿಂದಪ್ಪ ಅವರ ಮನೆಯಿಂದ ಉತ್ಸವ ಮೂರ್ತಿಗೆ ಸೀರೆ ತರಲಾಯಿತು.

ಅಮ್ಮನವರ ಉತ್ಸವ ಮೂರ್ತಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ ದೇಣಿಗೆ ಮತ್ತು ದೈವಜ್ಞ ಬ್ರಾಹ್ಮಣ ಸಮಾಜ ಒಟ್ಟಾಗಿ ಸೇರಿ 672 ಗ್ರಾಂ ಬಂಗಾರದ ತಾಳಿಯನ್ನು ದೇವಸ್ಥಾನದ ಸುಪರ್ದಿಗೆ ವಹಿಸಲಾಯಿತು. ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಪ್ರಯುಕ್ತ ಅಮ್ಮನವರ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಜಯಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ ವತಿಯಿಂದ ಪಾಲಿಶ್ ಮಾಡಿ ದೇವಸ್ಥಾನಕ್ಕೆ ಹಿಂದಿರುಗಿಸಲಾಯಿತು.

ಗುಡಿಗಾರ್ ಸಮಾಜದ ಮುಖಂಡರಾಗಿದ್ದ ದಿ. ಗುಡಿಗಾರ್ ದೇವಪ್ಪ ಅವರ ಮನೆಯಿಂದ ಅಮ್ಮನವರಿಗೆ ಬಾಸಿಂಗ ತರಲಾಯಿತು. ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಯು ಎಲ್ಲ ಸಮಾಜದವರ ಪಾಲ್ಗೊಳ್ಳುವಿಕೆಯಿಂದ ಅತ್ಯಂತ ಯಶಸ್ವಿಯಾಗಿ ಜರುಗಲಿದೆ.

ಪ್ರತಿ ದಿನವು ಶ್ರೀ ಮಾರಿಕಾಂಬ ದೇವರ ಸನ್ನಿಧಿಯಲ್ಲಿ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೋಮವಾರ (ಫೆ. ೬) ರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೂ (ಫೆ. ೭) ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ:BKS Varma Death: ಬಿಕೆಎಸ್ ವರ್ಮಾ ಅವರಿಂದಲೇ ರಾಘವೇಂದ್ರ ಸ್ವಾಮಿಗಳ ಚಿತ್ರ ಬರೆಸಿದ್ದರು ರಜನಿಕಾಂತ್‌

ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಅತ್ಯಂತ ಅದ್ಧೂರಿಯಾಗಿ ಒಂಬತ್ತು ದಿನಗಳ ಕಾಲ ಧಾರ್ಮಿಕ ಪೂಜಾ ವಿಧಿ ವಿಧಾನಗಳು, ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವೈಶಿಷ್ಟ್ಯತೆಗಳೊಂದಿಗೆ ಸಾಗರದ ಶ್ರೀ ಮಾರಿಕಾಂಬ ಜಾತ್ರೆಯು ನಡೆಯಲಿದೆ. ಜಾನಪದ ಕಲಾ ತಂಡಗಳು ರಾಜಬೀದಿ ಉತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಇದನ್ನೂ ಓದಿ: Viral News: ನೀರಿನಂತೆಯೇ ಇರುವ ಮಂಜುಗಡ್ಡೆಯನ್ನು ತಯಾರಿಸಿದ ವಿಜ್ಞಾನಿಗಳು!

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ್ ಸಿಂಗ್, ವಿ.ಶಂಕರ್, ರಾಮಪ್ಪ, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಎಂ.ಡಿ.ಆನಂದ್, ಖಜಾಂಚಿ ನಾಗೇಂದ್ರ ಎಸ್.ಕುಮಟಾ, ವಿವಿಧ ಸಮಿತಿಯ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.

Exit mobile version