Site icon Vistara News

Sagara Marikamba Jatra : ಭಾರತೀಯ ಪರಂಪರೆಗೆ ಈಗ ಜಾಗತಿಕ ಮನ್ನಣೆ; ಟಿ.ಎಸ್.ನಾಗಾಭರಣ ಸಂತಸ

T S Nagabharana Marikamba Jatra sagara

#image_title

ಸಾಗರ: “ಭಾರತೀಯ ಪರಂಪರೆಯು ವಿಶ್ವದ ಶ್ರೇಷ್ಠ ಪರಂಪರೆಯಾಗಿದ್ದು, ಪ್ರಸ್ತುತ ದಿನಗಳಲ್ಲಿ ಭಾರತೀಯ ಶ್ರೇಷ್ಠ ಪರಂಪರೆಯನ್ನು ವಿಶ್ವವೇ ಒಪ್ಪಿಕೊಳ್ಳುತ್ತಿದೆʼ ಎಂದು ರಂಗಕರ್ಮಿ, ನಟ ಟಿ.ಎಸ್.ನಾಗಾಭರಣ (Marikamba Jatra) ಹೇಳಿದರು.

ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಗರದ ನಗರಸಭೆ ಆವರಣದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: Heart attack : ಗಡಿ ಗುರುತಿಗೆ ಬಂದ ಅರಣ್ಯ ಅಧಿಕಾರಿಗಳು, ಜಮೀನು ಕಳೆದುಕೊಳ್ಳುವ ಭಯದಲ್ಲಿ ಹೃದಯಾಘಾತದಿಂದ ರೈತ ಸಾವು

ʼಇಡೀ ಜಗತ್ತಿಗೆ ವಿಶ್ವಮಾನವ ತತ್ತ್ವವನ್ನು ಸಾರಿದ್ದು ಕನ್ನಡಿಗರು. ಆದಿಕವಿ ಪಂಪನಿಂದ ಇವತ್ತಿನವರೆಗೂ ಎಲ್ಲರೂ ವಿಶ್ವಮಾನವ ಸಂದೇಶಗಳನ್ನು ಸಾರಿದರು. ಭಾರತ ದೇಶ ವಿಶ್ವಗುರು ಆಗುವ ದಿಸೆಯಲ್ಲಿ ಭಾರತೀಯ ಪರಂಪರೆ ಹಾಗೂ ಶ್ರದ್ಧೆಯ ಕೇಂದ್ರಗಳಲ್ಲಿನ ಆಚರಣೆ ಕೂಡ ಇದಕ್ಕೆ ಬಹುಮುಖ್ಯ ಕಾರಣʼ ಎಂದರು.

ʼಧಾರ್ಮಿಕ ಶ್ರದ್ಧಾ ಕೇಂದ್ರಗಳ ಸುತ್ತ ಸಮುದಾಯಗಳ ಒಳಗೊಳ್ಳುವಿಕೆ ಸಾಧಿಸುವುದನ್ನು ಭಾರತೀಯ ಪರಂಪರೆ ನಮಗೆಲ್ಲರಿಗೂ ಉತ್ತಮವಾಗಿ ಕಲಿಸಿಕೊಟ್ಟಿದೆ. ವ್ಯಕ್ತಿನಿಷ್ಠ, ಆತ್ಮ ಸಂವೇದನೆ ಇದ್ದರೆ ಸಮಾಜಮುಖಿ ಚಿಂತನೆ ಉಂಟು ಮಾಡಬಹುದು. ಸಮಷ್ಟಿಗೆ ಬೇಕಾದ ಆಲೋಚನೆ ಮೂಡಿಸುವುದು. ಇಡೀ ಸಮಾಜವನ್ನು ಜೀವನ್ಮುಖಿಯಾಗಿಸುವುದೇ ಜಾತ್ರೆಯ ಉದ್ದೇಶವಾಗಿದೆʼ ಎಂದು ಹೇಳಿದರು.

ಇದನ್ನೂ ಓದಿ: Sara Ali Khan: ಉದಯಪುರದಲ್ಲಿ ಸಾರಾ ಅಲಿ ಖಾನ್-ಕಾರ್ತಿಕ್ ಆರ್ಯನ್; ʻಸಾರ್ತಿಕ್ʼ ಒಂದಾಗಲಿದ್ದಾರೆ ಎಂದ ನೆಟ್ಟಿಗರು

ʼಸಂಸ್ಕೃತಿಯ ಅನ್ವರ್ಥ ನಾಮ ಸಾಗರ. ಸಂಸ್ಕೃತಿ, ಸಾಹಿತ್ಯ, ಧಾರ್ಮಿಕ, ಪ್ರಾಕೃತಿಕವಾಗಿಯೂ ಸಾಗರ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಸಾಂಸ್ಕೃತಿಕ ವೇದಿಕೆಗಳ ಮುಖಾಂತರ ಸ್ಥಳೀಯ ಯುವ ಪ್ರತಿಭಾವಂತ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಮುಂದಿನ ದಿನಗಳಲ್ಲಿ ಅತ್ಯದ್ಭುತ ವೇದಿಕೆಯಾಗಿ ಮಾರ್ಪಾಡಾಗಲಿʼ ಎಂದು ತಿಳಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ʼಸಾಗರ ಮಾರಿಕಾಂಬಾ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ಜರುಗುತ್ತಿದ್ದು, ಸಾಂಸ್ಕೃತಿಕ ವೇದಿಕೆಯ ಮುಖಾಂತರ ಕಲಾವಿದರಿಗೆ ಪ್ರೋತ್ಸಾಹಿಸುತ್ತಿರುವ ಕಾರ್ಯ ಅಭಿನಂದನೀಯ. ಸಾವಿರಾರು ಭಕ್ತರು ಸಾಗರ ಜಾತ್ರೆಗೆ ಆಗಮಿಸುತ್ತಿದ್ದಾರೆʼ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ʼರಾಜ್ಯದ ಅತಿ ದೊಡ್ಡ ಜಾತ್ರೆಗಳ ಪೈಕಿ ಸಾಗರದ ಮಾರಿಕಾಂಬಾ ಜಾತ್ರೆಯು ಪ್ರಮುಖ. ಶಿರಸಿ ಜಾತ್ರೆಯನ್ನು ಹೊರತುಪಡಿಸಿ ಅದ್ಧೂರಿಯಾಗಿ ವೈಭವಯುತವಾಗಿ ಮಾರಿಕಾಂಬಾ ಜಾತ್ರೆ ನಡೆಯುವುದು ಸಾಗರದಲ್ಲಿ. ಧಾರ್ಮಿಕ ಶಕ್ತಿ ಕೇಂದ್ರ ಇದುʼ ಎಂದು ಹೇಳಿದರು.

ಇದನ್ನೂ ಓದಿ: IND VS AUS: ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಬಳಿಕ ತಾಯಿಯನ್ನು ಅಪ್ಪಿಕೊಂಡ ಶ್ರೀಕರ್​ ಭರತ್​

ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಖಜಾಂಚಿ ನಾಗೇಂದ್ರ ಕುಮಟಾ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಲೋಕೇಶ್ ಕುಮಾರ್ ಗುಡಿಗಾರ್, ಉಪಾಧ್ಯಕ್ಷ ವಿ.ಶಂಕರ್, ಸಹ ಕಾರ್ಯದರ್ಶಿ ಆನಂದ್, ವಸ್ತು ಪ್ರದರ್ಶನ ಸಮಿತಿಯ ಸಂಚಾಲಕ ತಾರಾಮೂರ್ತಿ, ಪ್ರಮುಖರಾದ ಲಲಿತಮ್ಮ, ಭಾವನಾ ಸಂತೋಷ್, ವಿ.ಮಹೇಶ್, ತುಕಾರಾಂ ಮತ್ತಿತರರು ಉಪಸ್ಥಿತರಿದ್ದರು.

ʼಕೆಳದಿ ಶಿವಪ್ಪನಾಯಕನ ಕುರಿತು ನಾಲ್ಕು ವರ್ಷಗಳ ಅಧ್ಯಯನ ನಡೆಸಿ ಸಿನಿಮಾ ಮಾಡಲು ಸ್ಕ್ರಿಪ್ಟ್‌ ಸಿದ್ಧಪಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಕೆಳದಿ ಶಿವಪ್ಪನಾಯಕನ ಕುರಿತ ಸಿನಿಮಾ ಮಾಡುತ್ತೇನೆ ಎಂಬ ನಂಬಿಕೆಯಿದೆ. ಕೆಳದಿ ಚೆನ್ನಮ್ಮನ 25 ವರ್ಷಗಳ ಆಡಳಿತ ಇಂದಿಗೂ ಸ್ಫೂರ್ತಿದಾಯಕʼ ಎಂದು ರಂಗಕರ್ಮಿ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.

ಇದನ್ನೂ ಓದಿ: Ukg student fail: ಯುಕೆಜಿ ಕ್ಲಾಸಿನ ಮಗುವನ್ನು ಫೇಲ್‌ ಮಾಡಿದ ಶಾಲೆ! ; ಆಡಳಿತ ಮಂಡಳಿ ವಿರುದ್ಧ ಎಲ್ಲೆಡೆ ಆಕ್ರೋಶ

ಕಲಾಸಿರಿ ಕಾರ್ಯಕ್ರಮ ಫೆ. 10ಕ್ಕೆ

ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಿರ್ಮಿಸಿರುವ ನಗರ ಸಭೆ ಆವರಣದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಫೆ. 10ರ ಸಂಜೆ ಕಲಾಸಿರಿ ಕಾರ್ಯಕ್ರಮ ನಡೆಯಲಿದೆ. ಫೆ. 10ರ ಸಂಜೆ 5.30ರಿಂದ 6ರವರೆಗೆ ಹುಲಿದೇವರಬನದ ಕೊಡಚಾದ್ರಿ ಚಾರಿಟೆಬಲ್ ಟ್ರಸ್ಟ್ ಅವರಿಂದ ಮಲ್ಲಗಂಬ ಪ್ರದರ್ಶನ, ಸಂಜೆ 6ರಿಂದ 7ರವರೆಗೆ ಬೆಂಗಳೂರು ಅಶ್ವಿನ್ ಮೋಹನ್ ಅವರಿಂದ ಸುಗಮ ಸಂಗೀತ, 7.45ರವರೆಗೆ ಶಿವಮೊಗ್ಗ ನವಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ರಸ ಮಂಜರಿ, ರಾತ್ರಿ 7.45ರಿಂದ 8 ರವರೆಗೆ ಶಿಗ್ಗಾವ್ ನಟರಾಜ ನಾಟ್ಯ ಕಲಾ ಸಂಸ್ಥೆಯಿಂದ ಭರತನಾಟ್ಯ, 8ರಿಂದ 9.45ರವರೆಗೆ ಉಡುಪಿ ಸ್ಮಾರ್ಟ್ ಗೈಸ್ ಡ್ಯಾನ್ಸ್ ತಂಡದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ, ನಂತರ ಮ್ಯೂಸಿಕಲ್ ಸ್ಟಾರ್ ನೈಟ್ ಅವರಿಂದ ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ.

ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಫೆ. 10ಕ್ಕೆ

ಸಾಗರ ನಗರದ ಸಂತ ಜೋಸೆಫರ ಶಾಲೆಯ ಎದುರಿನ ಮೈದಾನದಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಫೆ. 10ರ ಮಧ್ಯಾಹ್ನ 3ಕ್ಕೆ ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸುವರು. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್, ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ಎನ್.ಗುರುಮೂರ್ತಿ, ಸಾಗರ ತಹಶೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಅಗ್ನಿಶಾಮಕ ದಳ ಸಹಾಯಕ ಠಾಣಾಧಿಕಾರಿ ಕೆ.ತಿಮ್ಮಪ್ಪ, ಸಿವಿಲ್ ಸರ್ಜನ್ ಪರಪ್ಪ, ಜಾತ್ರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಕುಸ್ತಿ ಸಮಿತಿಯ ಸಂಚಾಲಕ ಎಸ್.ಅಶೋಕ್, ಸಹ ಸಂಚಾಲಕ ಎಂ.ಎಸ್.ಶಶಿಕಾಂತ್, ಜಗನ್ನಾಥ್ ಜೇಡಿಕುಣಿ ಉಪಸ್ಥಿತರಿರುವರು. ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು.

ಇದನ್ನೂ ಓದಿ: Mrunal Thakur: ಅಕ್ಷಯ್‌ ಕುಮಾರ್‌ ಜತೆ ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ ನಟಿ ಮೃಣಾಲ್ ಠಾಕೂರ್

Exit mobile version