Site icon Vistara News

Muharram 2023 : ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಪವಾಡ; ಮುಸ್ಲಿಮ್ ಹಬ್ಬದಲ್ಲಿ ಹಿಂದೂಗಳ ಸಂಭ್ರಮ

Muharram 2023 at koppla

ಕೊಪ್ಪಳ/ಕಲಬುರಗಿ: ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬವನ್ನು (Muharram 2023) ಕೊಪ್ಪಳ ಜಿಲ್ಲೆಯಲ್ಲಿ (Koppal News) ಅದ್ಧೂರಿಯಾಗಿ ಆಚರಿಸಲಾಗಿದೆ. ಆಸ್ತಿಕರ ನಂಬಿಕೆಯಂತೆ ಹಲವು ಪವಾಡಗಳಿಗೆ ಸಾಕ್ಷಿಯಾಗಿದೆ.  ಶುಕ್ರವಾರ ಖತಲ್ ರಾತ್ರಿ ಹಿನ್ನೆಲೆಯಲ್ಲಿ ನಡೆದ ಆಚರಣೆಗಳಲ್ಲಿ ವಿವಿಧ ಗ್ರಾಮಗಳಲ್ಲಿ ವಿಶೇಷತೆಗೆ ಸಾಕ್ಷಿಯಾಯಿತು.

ಕೊಪ್ಪಳ ತಾಲೂಕಿನ ಬೋಚನಹಳ್ಳಿ ಗ್ರಾಮದಲ್ಲಿ ನಿಗಿನಿಗಿ ಕೆಂಡದ ಮೇಲೆ ಕಂಬಳಿ ಹಾಸಿ ಅದರ ಮೇಲೆ ಯುವಕನೊಬ್ಬ ಕುಣಿದಿದ್ದಾನೆ. ಬೋಚನಹಳ್ಳಿಯ ಅಲಾಯಿ ದೇವರ ಅಲಾಯಿ ಕುಣಿಯಲ್ಲಿನ ಕೆಂಡದ ಮೇಲೆ ಬಸವರಾಜ ಮೆಣೆಗೇರ ಎಂಬುವವರು ಕಂಬಳಿ ಹಾಸಿ ಕುಣಿದಿದ್ದಾರೆ. ಕಂಬಳಿ ಪವಾಡದ ನಂತರ ಬಸವರಾಜ ದೇವರ ಹೊತ್ತುಕೊಳ್ಳುತ್ತಾರೆ.

ಕೆಂಡ ತುಳಿದು ಮೊಹರಂ ಆಚರಣೆ

ಪ್ರತಿ ವರ್ಷ ಒಂದಿಲ್ಲೊಂದು ಪವಾಡದ ನಂತರ ದೇವರನ್ನು ಹೊರುತ್ತಾರೆ. ಅದರಲ್ಲೂ ವಿಶೇಷವಾಗಿ ಅಲಾಯಿ ದೇವರನ್ನು ಹಿಂದೂಗಳೇ ಹೊರುವ ಪದ್ಧತಿ ಇದೆ. ಮುಸ್ಲಿಂರ ಹಬ್ಬವನ್ನು ಹಿಂದೂಗಳು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಅಲಾಯಿ ದೇವರ ಪವಾಡ ನೋಡಲು ನೂರಾರು ಜನರು ಸೇರಿದ್ದರು.

ಕೆಂಡದಲ್ಲೇ ಕುಣಿದು ಕುಪ್ಪಳಿಸಿದ ಜನರು

ಅಲಾಯಿ ದೇವರಿಗೆ ಆಂಜನೇಯ ಹೂ ಪ್ರಸಾದ

ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ಅಲಾಯಿ ದೇವರಿಗೆ ಆಂಜನೇಯನೇ ಹೂ ಪ್ರಸಾದ ನೀಡುತ್ತಾನೆ. ಮೊಹರಂ ಹಬ್ಬದ ಖತ್ತಲ್ ರಾತ್ರಿ ಹಿನ್ನೆಲೆಯಲ್ಲಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಪ್ರತಿ ವರ್ಷ ಅಲಾಯಿ ದೇವರು ಹೋಗುತ್ತವೆ. ಅದರಂತೆ ನಿನ್ನೆ ಶುಕ್ರವಾರ ರಾತ್ರಿ ಆಂಜನೇಯ ದೇವಸ್ಥಾನಕ್ಕೆ ಅಲಾಯಿ ದೇವರು ಹೋಗಿದ್ದವು. ಅಲಾಯಿ ದೇವರು ಹೊರುವ ಅದೇ ಗ್ರಾಮದ ಅಜೀಮ್ ಸಾಬ್ ಆಂಜನೇಯನ ಮುಂದೆ ಕುಳಿತು ಪ್ರಾರ್ಥಿಸಿದಾಗ ಆಂಜನೇಯ ಹೂ ಪ್ರಸಾದ ನೀಡುತ್ತಾನೆ. ಆಂಜನೇಯ ಹೂ ನೀಡುವ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ.

ಇದನ್ನೂ ಓದಿ: Muharram 2023 : ಮೊಹರಂ ಹಬ್ಬ; ಶನಿವಾರ ಬೆಂಗಳೂರಿನ ಈ ಮಾರ್ಗಗಳಲ್ಲಿ ವಾಹನ ಸಂಚಾರ ಬದಲು

ಅಲಾಯಿ ದೇವರನ್ನು ಹೊರುವ ಹಿಂದೂಗಳು

ರೋಚಕ ಹೆಜ್ಜೆ ಕುಣಿತ

ಭಾವೈಕ್ಯತೆ ಸಂಕೇತ ಮೊಹರಂ ಹಬ್ಬವನ್ನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದ್ರಿಮೋತಿ ಹಾಗೂ ಕುಷ್ಟಗಿ ತಾಲೂಕಿನ ಹನುಮಸಾಗರ ತಾವರಗೇರಾದಲ್ಲಿ ಅದ್ಧೂರಿಯಾಗಿ ಆಚರಿಸಲಾಗಿದೆ. ಹುಲಿ ವೇಷಧಾರಿಗಳ ಕುಣಿತ, ರಿವಾಯತ್ ಪದಗಳೊಂದಿಗೆ ಹೆಜ್ಜೆ ಕುಣಿತ ಎಲ್ಲರ ಗಮನ ಸೆಳೆದವು. ಬೆಳಗಿನ ಜಾವ ಅಲಾಯಿ ದೇವರ ಮೆರವಣಿಗೆ ಮಾಡಿ, ಸಂಜೆ ವಿಸರ್ಜನೆ ಮಾಡಲಾಗುತ್ತದೆ.

ಕಲಬುರಗಿಯಲ್ಲೂ ಮೊಹರಂ ಆಚರಣೆ

ಕೆಂಡ ತುಳಿದು ಭಾವೈಕ್ಯತೆ ಸಾರುವ ಮೊಹರಂ

ಭಾವೈಕ್ಯತೆಯ ಮೊಹರಂ ಹಬ್ಬವನ್ನು ಕಲಬುರಗಿ ನಗರದಲ್ಲೂ ಅದ್ಧೂರಿಯಾಗಿ ಆಚರಿಸಲಾಗಿದೆ. ಅಫಜಲಪುರ ತಾಲೂಕಿನ ಹಿಂಚಗೇರ ಗ್ರಾಮದಲ್ಲಿ ಧರ್ಮ-ಜಾತಿ ಭೇದಭಾವವಿಲ್ಲದೇ ಮೊಹರಂ ಆಚರಣೆ ಮಾಡಲಾಗುತ್ತದೆ. ಹಿಂದೂ ಮುಸ್ಲಿಂ ಬಾಂಧವರು ಸೇರಿಕೊಂಡು ಕೆಂಡ ತುಳಿಯುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version