Site icon Vistara News

Muharram 2023 : ಮೊಹರಂ ಹಬ್ಬ; ಶನಿವಾರ ಬೆಂಗಳೂರಿನ ಈ ಮಾರ್ಗಗಳಲ್ಲಿ ವಾಹನ ಸಂಚಾರ ಬದಲು

Muharram 2023

ಬೆಂಗಳೂರು: ಮೊಹರಂ ಹಬ್ಬದ (Muharram 2023) ಭಾಗವಾಗಿ ಮುಸ್ಲಿಮರು ಮೆರವಣಿಗೆ (Moharram procession) ನಡೆಸುವ ಹಿನ್ನೆಲೆಯಲ್ಲಿ ಜುಲೈ 29ರಂದು ಮಧ್ಯಾಹ್ನ 1 ರಿಂದ 4.30 ರವರೆಗೆ ನಗರದ ಕೆಲವು ರಸ್ತೆಗಳ ಸಂಚಾರ (Traffic Advisory) ಸ್ಥಗಿತಗೊಳಿಸಲಾಗಿದೆ.

ಪರ್ಯಾಯ ವ್ಯವಸ್ಥೆಯನ್ನು ಬೆಂಗಳೂರು ನಗರ ಸಂಚಾರಿ ಪೊಲೀಸರು ಕಲ್ಪಿಸಿದ್ದಾರೆ. ಹಬ್ಬದ ಮೆರವಣಿಗೆ ವೇಳೆ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇರುವುದರಿಂದ ಈ ಕೆಳಕಂಡ ಮಾರ್ಗಗಳಲ್ಲಿ ಬದಲಿ ವ್ಯವಸ್ಥೆ ಮಾಡಲಾಗಿದೆ.

*ಬ್ರಿಗೇಡ್ ರಸ್ತೆ ಮೂಲಕ ಹೊಸೂರು ರಸ್ತೆ ಕಡೆಗೆ ವೆಲ್ಲಾರಾ ಜಂಕ್ಷನ್ (ಶೂಲೆ ವೃತ್ತ) ಮುಖಾಂತರ ತೆರಳುವ ಸವಾರರು ಇಂದು ರಿಚ್ಮಂಡ್ ರಸ್ತೆ ಮೂಲಕ ರೀನಿಯಸ್ ಕ್ರಾಸ್, ನಂಜಪ್ಪ ವೃತ್ತ, ಲಾಂಗ್ ಪೋರ್ಡ್ ರಸ್ತೆ, ಸಿಎಂಪಿ ಜಂಕ್ಷನ್‌ ಮೂಲಕ ಸಂಚರಿಸಬೇಕು.

*ಹೊಸೂರು ರಸ್ತೆ ಆಡುಗೋಡಿ ಕಡೆಯಿಂದ ಬರುವ ಸವಾರರು ಸಿಮೆಂಟ್ರಿ ಕ್ರಾಸ್, ಬರ್ಲಿ ಸ್ಟ್ರೀಟ್, ಲಾಂಗ್ ಪೋರ್ಡ್ ರಸ್ತೆ, ನಂಜಪ್ಪ ವೃತ್ತದ ಮೂಲಕ ರೀನಿಯಸ್ ಸ್ಟ್ರೀಟ್ ಮೂಲಕ ರಿಚ್ಮಂಡ್ ರಸ್ತೆಗೆ ಬಂದು ಮುಂದಕ್ಕೆ ಸಂಚರಿಸಬೇಕು.

*ಹೊಸೂರು ರಸ್ತೆ ಕಡೆಯಿಂದ ಬರುವ ಭಾರಿ ವಾಹನಗಳು ಆಡುಗೋಡಿ ಜಂಕ್ಷನ್, ಮೈಕೋ ಜಂಕ್ಷನ್, 8ನೇ ಮೈನ್, ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆಯಿಂದ ಸಿದ್ಧಯ್ಯ ರಸ್ತೆ ಮೂಲಕ ಸಂಚಾರಿಸಬೇಕು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version