Site icon Vistara News

Nagara Panchami | ಉಡುಪಿಯಲ್ಲಿ ಜೀವಂತ ಹಾವಿಗೆ ಪೂಜೆ; ಬೆಳಗಾವಿಯಲ್ಲಿ ಮನೆಗೇ ಬಂದ ನಾಗಪ್ಪ!

Nagara Panchami

ಉಡುಪಿ : ಜಿಲ್ಲೆಯ ಕಾಪು ಬಳಿಯ ಮಜೂರು ನಿವಾಸಿ ಗೋವರ್ಧನ್ ಭಟ್‌ರವರು ಈ ಬಾರಿಯೂ ನಾಗರ ಪಂಚಮಿಯಂದು ತಮ್ಮ ಮನೆಯಲ್ಲಿ ಶುಶ್ರೂಷೆ ಪಡೆಯುತ್ತಿರುವ ಜೀವಂತ ನಾಗರ ಹಾವಿಗೆ ಜಲಾಭಿಷೇಕ ನಡೆಸಿ, ದೀಪ ಬೆಳಗಿ ನಾಗರ ಪಂಚಮಿ (Nagara Panchami) ಹಬ್ಬ ಆಚರಿಸಿದರು.

ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್‌ ಆಗಿರುವ ಗೋವರ್ಧನ ಭಟ್‌ರವರು ಕ್ಯಾಟರಿಂಗ್ ಕೂಡ ನಡೆಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ನಾಗರ ಹಾವುಗಳನ್ನು ತಂದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ, ಅದು ಸಂಪೂರ್ಣ ಗುಣ ಮುಖವಾದಾಗ ಮತ್ತೆ ಅದನ್ನು ಕಾಡಿಗೆ ಬಿಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.

ಪೂಜೆಗೊಳಗಾದ ನಾಗರ ಹಾವು

ಎಲ್ಲೇ ಹಾವು ಗಾಯಗೊಂಡಿರುವ ಬಗ್ಗೆ ಯಾರೇ ದೂರವಾಣಿ ಕರೆ ಮಾಡಿದರೂ, ಯಾವುದೇ ಫಲಾಪೇಕ್ಷೆ ಇಲ್ಲದೆ ಅಲ್ಲಿಗೆ ಧಾವಿಸುವ ಗೋರ್ವಧನ ಭಟ್ ಅವರು ಹಾವಿನ ಚಿಕಿತ್ಸೆ ಆರಂಭಿಸುತ್ತಾರೆ. ಹೀಗಾಗಿ ಇವರನ್ನು ಸ್ಥಳೀಯರು ಹಾವಿನ ಡಾಕ್ಟರ್‌ ಎಂದು ಕರೆಯುತ್ತಾರೆ. ನಾಗರ ಪಂಚಮಿಯ ಹಬ್ಬದಂದು ಇವರು ಜೀವಂತ ಹಾವಿಗೆ ಪೂಜೆ ಮಾಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ.

ನಾಗರ ಪಂಚಮಿ ದಿನವೇ ನಾಗಪ್ಪ ಮನೆಗೆ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಕಿಲ್ಲಾಗಲಿಯ ಹಣಮಂತ ಬಡಿಗೇರ ಎಂಬುವವರ ಮನೆಯಲ್ಲಿ ನಾಗರ ಪಂಚಮಿ ಹಬ್ಬದ ದಿನವೇ ಹಾವು ಪ್ರತ್ಯಕ್ಷವಾಗಿದೆ. ಹಾವು ಕಂಡು ಗಲಿಬಿಲಿಗೊಂಡ ಹಣಮಂತ, ತಕ್ಷಣವೇ ಉರಗ ತಜ್ಞ ಶಂಕರಗೆ ಮಾಹಿತಿ ನೀಡಿದ್ದು, ಅವರು ಹಾವನ್ನು ರಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ನಾಗರಹಾವಿಗೆ ಹಾಲು ಎರೆದು, ನೈವೇದ್ಯ ನೀಡಿ ಪೂಜಿಸಿದರು. ಬಳಿಕ ಮುಳ್ಳೂರ ಅರಣ್ಯ ಪ್ರದೇಶದಲ್ಲಿ ಹಾವನ್ನು ಬಿಡಲಾಯಿತು.

ಇದನ್ನೂ ಓದಿ | ನಾಗರ ಪಂಚಮಿ | ಇಂದು ನಾಗದೇವರ ಪೂಜೆ ಮಾಡುವುದೇಕೆ?

Exit mobile version