Site icon Vistara News

Nagarahalli News | ಸಂಭ್ರಮದಿಂದ ನೆರವೇರಿದ ನಾಗರಹಳ್ಳಿ ಜಾತ್ರೋತ್ಸವ; ವರ್ಷಕ್ಕೆ ಎರಡು ಬಾರಿ ಜಾತ್ರೆ ನಡೆಯುವುದೇ ಇಲ್ಲಿನ ವಿಶೇಷ

Nagarahalli Fair hosanagara

ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಾಣ ಪ್ರಸಿದ್ಧ ನಾಗರಹಳ್ಳಿ ನಾಗೇಂದ್ರ ಸ್ವಾಮಿಯ ಕೂಳೆ ಪಂಚಮಿಯ ಜಾತ್ರೋತ್ಸವವು (Nagarahalli News) ಮಂಗಳವಾರ (ಡಿ.೨೭) ಸಂಭ್ರಮ ಸಡಗರದೊಂದಿಗೆ ಸಂಪನ್ನಗೊಂಡಿತು.

ವರ್ಷದಲ್ಲಿ ಎರಡು ಬಾರಿ, ಅಂದರೆ ಬೇಸಿಗೆ ಮತ್ತು ಮಳೆಗಾಲದಲ್ಲಿ ಈ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಮದುವೆಯಾಗದೇ ಇರುವ ಹೆಣ್ಣು ಮಕ್ಕಳು ಮದುವೆಯಾಗಲೆಂದು, ಸಂತಾನ ಭಾಗ್ಯವಾಗಿಲ್ಲ ಎನ್ನುವವರು ಸಂತಾನ ಭಾಗ್ಯಕ್ಕೆ, ಜಮೀನಿನಲ್ಲಿ ಹಾಕಲಾದ ಬೆಳೆ ಸಮೃದ್ಧಿಯಾಗಿ ಬರಲೆಂದು ಮತ್ತು ಕುಟುಂಬದಲ್ಲಿನ ಸಮಸ್ಯೆಗಳ ಪರಿಹಾರ, ಆರೋಗ್ಯ ಭಾಗ್ಯ ಕರುಣಿಸಲೆಂದು ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿ ನಾಗೇಂದ್ರ ಸ್ವಾಮಿಯಲ್ಲಿ ಹರಕೆ ಮಾಡಿಕೊಳ್ಳುವುದು ಇಲ್ಲಿನ ವಿಶೇಷ. ಹರಕೆ ಮಾಡಿಕೊಂಡು ಆರು ತಿಂಗಳಲ್ಲಿ ಪರಿಹಾರ ಕಂಡುಕೊಂಡ ಹಲವು ಭಕ್ತರು, ನವ ದಂಪತಿಗಳು, ಆರೋಗ್ಯದ ಸಮಸ್ಯೆ ಪರಿಹಾರ ಕಂಡವರು ಹೀಗೆ ನಾನಾ ಸಂಕಷ್ಟಗಳ ಪರಿಹಾರ ಸಿಕ್ಕವರು ಭಗವಂತನಿಗೆ ಪೂಜೆ ಸಲ್ಲಿಸಲು ಇಲ್ಲಿಗೆ ಆಗಮಿಸುತ್ತಾರೆ.

ಇದನ್ನೂ ಓದಿ | Vakri Budh 2022 | ನಾಳೆ ಬುಧನ ವಕ್ರಿ ಸಂಚಾರ; ಯಾವ ರಾಶಿಯ ಮೇಲೆ ಏನು ಪರಿಣಾಮ?


ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ನಾಗೇಂದ್ರ ಸ್ವಾಮಿಗೆ ಅಭಿಷೇಕ ಪೂಜೆ, ಪಂಚಾಮೃತ ಅಭಿಷೇಕ ನಂತರ ವಿಶೇಷ ಅಲಂಕಾರ ಪೂಜೆಯೊಂದಿಗೆ ಮಹಾಮಂಗಳಾರತಿ ಹಾಗೂ ಬರುವ ಭಕ್ತರಿಗೆ ಸಾಮೂಹಿಕ ಅನ್ನ ಸಂತರ್ಪಣೆ ಜರುಗಿತು. ಶ್ರೀನಾಗೇಂದ್ರ ಸ್ವಾಮಿಗೆ ಹಣ್ಣು- ಕಾಯಿ ಹರಕೆ ಸಮರ್ಪಿಸಿ ಪೂಜೆ ಸಲ್ಲಿಸಲು ಜಿಲ್ಲೆ, ಹೊರ ಜಿಲ್ಲೆ ಸೇರಿದಂತೆ ನಾಡಿನ ಹಲವು ಕಡೆಗಳಿಂದ ಭಕ್ತರ ದಂಡು ಹರಿದು ಬಂದಿತ್ತು. ದೇವಸ್ಥಾನದ ಪ್ರಧಾನ ಅರ್ಚಕರು ಮತ್ತವರ ತಂಡ ಹಾಗೂ ದೇವಸ್ಥಾನ ಧರ್ಮದರ್ಶಿ ಸಮಿತಿಯವರು ಪಾಲ್ಗೊಂಡಿದ್ದರು.

ಇದನ್ನೂ ಓದಿ | ಬೆಳಗಾವಿ ಕನ್ನಡ ಭವನದಲ್ಲಿ ಕಿತ್ತಾಟ | ಕನ್ನಡ- ಸಂಸ್ಕೃತಿ ಇಲಾಖೆ ಉಪನಿರ್ದೇಶಕಿಯನ್ನು ಹೊರಗೆ ಕಳುಹಿಸಿದ ನಾಯಕರು

Exit mobile version