Site icon Vistara News

Ram Mandir : ಕೈಲಾಸದಿಂದ ನೇರವಾಗಿ ಅಯೋಧ್ಯೆಗೆ ಬರಲಿದ್ದಾರೆ ನಿತ್ಯಾನಂದ ಸ್ವಾಮಿ!

Nityananda swamy

ನವದೆಹಲಿ: ಸ್ವಯಂ ಘೋಷಿತ ದೇವಮಾನವ ಮತ್ತು ದೇಶಬಿಟ್ಟು ಹೋಗಿರುವ ಅತ್ಯಾಚಾರ ಆರೋಪಿ ನಿತ್ಯಾನಂದ ಸ್ವಾಮಿ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಭವ್ಯ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ನಾನು ನೇರವಾಗಿ ಅಲ್ಲಿಗೆ ಬರುತ್ತೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ.

‘ಕೈಲಾಸ’ ಎಂದು ಕರೆಯಲ್ಪಡುವ ದೇಶದಲ್ಲಿ “ಹಿಂದೂ ಧರ್ಮದ ಸರ್ವೋಚ್ಚ ಪೀಠ” ಎಂದು ಕರೆಯಲ್ಪಡುವ ನಿತ್ಯಾನಂದ, “ಈ ಐತಿಹಾಸಿಕ ಮತ್ತು ಅಪರೂಪದ ಸಂದರ್ಭವನ್ನು ತಪ್ಪಿಸಿಕೊಳ್ಳಬೇಡಿ! ಎಂದು ಹೇಳಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಪ್ರಾಣ ಪ್ರತಿಷ್ಠಾ ಸಮಯದಲ್ಲಿ ಭಗವಾನ್ ರಾಮನನ್ನು ಪ್ರಾರ್ಥಿಸಲಾಗುವುದು ಎಂದು ಹೇಳಿದ್ದಾರೆ.

ಕಾರ್ಯಕ್ರಮಕ್ಕಾಗಿ ಔಪಚಾರಿಕವಾಗಿ ಆಹ್ವಾನಿಸಲಾಗಿದ್ದು, ಹಿಂದೂ ಧರ್ಮದ ಸರ್ವೋಚ್ಚ ಪೀಠಾಧಿಪತಿ ಭಗವಾನ್ ಶ್ರೀ ನಿತ್ಯಾನಂದ ಪರಮಶಿವಂ ಈ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Ram Mandir: ಅಯೋಧ್ಯೆಗೆ ತೆರಳಿದ ಸೂಪರ್‌ ಸ್ಟಾರ್‌ ರಜನಿಕಾಂತ್‌, ಧನುಷ್‌, ಪವನ್‌ ಕಲ್ಯಾಣ್‌!

ಚಾಲಕನ ದೂರಿನ ಆಧಾರದ ಮೇಲೆ 2010 ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣವು ನಿತ್ಯಾನಂದನನ್ನು ಬಂಧಿಸಲು ಕಾರಣವಾಯಿತು. ಆದಾಗ್ಯೂ, ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. 2020ರಲ್ಲಿ ಅದೇ ಚಾಲಕ ಸ್ವಯಂ ಘೋಷಿತ ದೇವಮಾನವ ದೇಶದಿಂದ ಪಲಾಯನ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದ.

9,999 ವಜ್ರಗಳನ್ನು ಬಳಸಿ ರಾಮ ಮಂದಿರ ಪ್ರತಿಕೃತಿ ನಿರ್ಮಾಣ!

ನವದೆಹಲಿ: ಗುಜರಾತ್‌ನ (Gujarat) ಸೂರತ್‌ನ (Surat) ಕಲಾವಿದರೊಬ್ಬರು 9,999 ವಜ್ರಗಳನ್ನು (Ram Mandir With Diamonds) ಬಳಸಿ ಅಯೋಧ್ಯೆಯ ರಾಮಮಂದಿರದ ಕಲಾಕೃತಿಯನ್ನು ರಚಿಸಿದ್ದಾರೆ. ವಜ್ರಗಳನ್ನು ಬಳಸಿ ರಾಮ ಮಂದಿರ ಪ್ರತಿಕೃತಿಯನ್ನು ರಚಿಸುತ್ತಿರುವ ಭಾರೀ ವೈರಲ್ ಆಗಿದೆ. ಮೇಲ್ಭಾಗದಲ್ಲಿ “ಜೈ ಶ್ರೀ ರಾಮ್” ಎಂದು ಬರೆಯುವುದರೊಂದಿಗೆ, ವೀಡಿಯೊವು ರಾಮಮಂದಿರವನ್ನು ತೋರಿಸುವ ವಜ್ರಗಳಿಂದ ಹೊದಿಸಿದ ಗೋಡೆಯ ಚೌಕಟ್ಟನ್ನು ತೋರಿಸುತ್ತದೆ, ಮೇಲಿನ ಬಲ ಮೂಲೆಯಲ್ಲಿ ಭಗವಾನ್ ರಾಮನ (Bhagwan Shri Ram) ಛಾಯಾಚಿತ್ರವನ್ನೂ ಕಾಣಬಹುದು.

ದೇಶದ ಜವಳಿ ಕೇಂದ್ರವೂ ಆಗಿರುವ ಸೂರತ್‌ನಲ್ಲಿ ವಿಶೇಷ ಸೀರೆಯನ್ನು ನೇಯ್ಗೆ ಮಾಡಲಾಗಿದೆ. ಈ ಸೀರೆಯನ್ನು ಅಯೋಧ್ಯೆಗೆ ಕಳುಹಿಸಿ ಕೊಡಲಾಗುತ್ತದೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷವಾಗಿ ರೂಪಿಸಲಾಗಿರುವ ಈ ಸೀರೆಯ ಮೇಲೆ ಪ್ರಭು ಶ್ರೀರಾಮ ಹಾಗೂ ಅಯೋಧ್ಯೆ ರಾಮ ಮಂದಿರವನ್ನು ಚಿತ್ರಿಸಲಾಗಿದೆ. ಈ ಸೀರೆಯನ್ನು ಪ್ರಭು ಶ್ರೀರಾಮ ಪತ್ನಿ ಸೀತಾ ಮಾತೆಗೆ ಅರ್ಪಿಸಲಾಗುತ್ತದೆ. ವಜ್ರದ ನಗರಿ ಎಂದು ಖ್ಯಾತವಾಗಿರುವ ಸೂರತ್‌ನಲ್ಲಿ ಮತ್ತೊಬ್ಬರು 5000 ಅಮೆರಿಕನ್ ಡೈಮಂಡ್ಸ್ ಬಳಸಿಕೊಂಡು ರಾಮ ಮಂದಿರ ಥೀಮ್‌ನಲ್ಲಿ ಕುತ್ತಿಗೆ ಹಾರವನ್ನು ಸೃಷ್ಟಿಸಿ ಗಮನ ಸೆಳೆದಿದ್ದಾರೆ. ಈ ನೆಕ್ಲೇಸ್ ಅನ್ನು ರಾಮ ಮಂದಿರ ಟ್ರಸ್ಟ್‌ಗೆ ಕಾಣಿಕೆಯಾಗಿ ನೀಡಿದ್ದಾರೆ.

Exit mobile version