Site icon Vistara News

ಜು.15ರಿಂದ 3 ದಿನ ಕನಕ ಪುರಂದರದಾಸರ ಸಂಸ್ಮರಣೆ

ಬೆಂಗಳೂರು: ಶ್ರೀನಿವಾಸ ಉತ್ಸವ ಬಳಗದ ದಶಮಾನೋತ್ಸವದ ಅಂಗವಾಗಿ 15 ರಿಂದ 17ರವರೆಗೆ ಬಸವನಗುಡಿಯ ಉತ್ತರಾಧಿ ಮಠದ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ಶ್ರೀ ಕನಕ-ಪುರಂದರದಾಸರ ಸಂಸ್ಮರಣಾ ಮಹೋತ್ಸವ ಆಯೋಜಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಬುರಗಿಯ ದಾಸ ಸೌರಭ ಟ್ರಸ್ಟ್‌ ಸಹಯೋಗದಲ್ಲಿ ನಡೆಯಲಿರುವ ಉತ್ಸವದಲ್ಲಿ ‘ಜ್ಞಾನ-ಗಾನ-ಯಜ್ಞ’ ಧಾರ್ಮಿಕ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಜು. 15ರ ಸಂಜೆ 6.15ಕ್ಕೆ ಮುಳಬಾಗಿಲಿನ ಶ್ರೀ ಶ್ರೀಪಾದರಾಜ ಮಠದ ಶ್ರೀ 1008 ಸುಜಯನಿಧಿ ತೀರ್ಥ ಶ್ರೀಪಾಂದಗಳವರು ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ, ‘ಸ್ತುತಿಮಾಲಾ’ ನೆನಪಿನ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.

ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ. ಸತ್ಯಧ್ಯಾನಾಚಾರ ಕಟ್ಟಿ, ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ಪಾಲಿಕೆ ವಿಶೇಷ ಅಯುಕ್ತ ಕೆ.ಎಸ್. ರಂಗಪ್ಪ, ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಎಸ್. ಎನ್. ಶಂಕರ್, ಹರಿದಾಸವಾಹಿನಿ ಸಂಪಾದಕ ಡಾ. ಎ.ಬಿ. ಶ್ಯಾಮಾಚಾರ್, ಶ್ರೀವಾರಿ ಫೌಂಡೇಷನ್‌ನ ಎಸ್. ವೆಂಕಟೇಶಮೂರ್ತಿ ಭಾಗವಹಿಸಲಿದ್ದಾರೆ.

ಪ್ರಶಸ್ತಿ ಪ್ರದಾನ: ಪ್ರತಿದಿನ ಸಂಸ್ಕೃತಿಯ ಪ್ರಸರಣದಲ್ಲಿ ನಿರತರಾಗಿರುವ ಸಾಧಕರನ್ನು ಗುರುತಿಸಿ ‘ಹರಿದಾಸ ಅನುಗ್ರಹ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 17ರಂದು ನಡೆಯಲಿರುವ ಸಮಾರೋಪದಲ್ಲಿ ಉಡುಪಿಯ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಜಯತೀರ್ಥ ವಿದ್ಯಾಪೀಠದ ಕುಲಪತಿ ಪಂಡಿತ ರಂಗಾಚಾರ್ ಗುತ್ತಲ್ ಅವರಿಗೆ “ಮಧ್ವ ಪುರಂದರ ಪ್ರಶಸ್ತಿ” ಪ್ರದಾನ ಮಾಡಲಾಗುತ್ತದೆ.

ಇದನ್ನೂ ಓದಿ| ಸಚಿವ ಅಶೋಕ್‌ ಹೇಳಿದ್ದು ಅಸತ್ಯ: ಪಠ್ಯ ಪರಿಷ್ಕರಣೆ ಕುರಿತು ಬರಗೂರು ರಾಮಚಂದ್ರಪ್ಪ ಉತ್ತರ

Exit mobile version