Site icon Vistara News

Puri Jagannath Yatra: ಪ್ರತಿ ವರ್ಷ ಹೊಸ ರಥ, ಜಗನ್ನಾಥನಿಗೆ ಜ್ವರ! ಪುರಿ ರಥ ಯಾತ್ರೆ ವಿಶೇಷ ಹಲವು!

Puri Jagannath Yatra

ಎಂದಿನಂತೆ 2024ರ (puri jagannath rath yatra 2024) ಒಡಿಶಾದ (odisha) ಜಗನ್ನಾಥ ಪುರಿ ರಥ ಯಾತ್ರೆ (Puri Jagannath Yatra) ಆರಂಭಗೊಂಡಿದೆ. ಪುರಿಯ ಭಗವಾನ್ ಜಗನ್ನಾಥನ ಗೌರವಾರ್ಥವಾಗಿ ನಡೆಯುವ ಈ ಯಾತ್ರಾ ಉತ್ಸವವು ಭಾರತದ (india) ಅತಿದೊಡ್ಡ ಆಚರಣೆಗಳಲ್ಲಿ ಒಂದಾಗಿದೆ. ಇದು ಭವ್ಯವಾದ ಪ್ರದರ್ಶನ, ಸಾಂಸ್ಕೃತಿಕ ಸಂಭ್ರಮ ಮತ್ತು ಅದ್ಭುತವಾದ ಆಚರಣೆಗಳಿಗೆ ಸಾಕ್ಷಿಯಾಗುತ್ತದೆ.

ಈ ವರ್ಷ ಜಗನ್ನಾಥ ಪುರಿ ರಥ ಯಾತ್ರೆಯ ಭವ್ಯ ರಥದ ಬಗ್ಗೆ ತಿಳಿದುಕೊಳ್ಳಬೇಕಾದ ಏಳು ಆಸಕ್ತಿದಾಯಕ ಸಂಗತಿಗಳಿವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

1. ವಿಭಿನ್ನ ರಥಗಳಲ್ಲಿ ಸವಾರಿ

ಜಗನ್ನಾಥ ದೇವಾಲಯದ ಮೂರು ದೇವರುಗಳಾದ ಜಗನ್ನಾಥ, ಬಲರಾಮ್ ಮತ್ತು ಸುಭದ್ರಾ ಮೂರು ವಿಭಿನ್ನ ರಥಗಳಲ್ಲಿ ಸವಾರಿ ಮಾಡುತ್ತಾರೆ. ಈ ಕಾರಣಕ್ಕಾಗಿ ರಥಯಾತ್ರೆಯನ್ನು ರಥೋತ್ಸವ ಎಂದು ಕರೆಯುತ್ತಾರೆ. ಅವರ ವಿಭಿನ್ನ ರಥಗಳನ್ನು ನಂದಿಘೋಷ, ತಾಳಧ್ವಜ ಮತ್ತು ದೇವದಳನ ಎಂದು ಕರೆಯಲಾಗುತ್ತದೆ. ಭಗವಾನ್ ಜಗನ್ನಾಥನ ನಂದಿಘೋಷ ರಥವು ಹದಿನೆಂಟು ಚಕ್ರಗಳನ್ನು ಹೊಂದಿದೆ. ಭಗವಾನ್ ಬಲರಾಮನ ತಾಳಧ್ವಜ ರಥವು ಹದಿನಾರು ಚಕ್ರಗಳನ್ನು ಹೊಂದಿದೆ ಮತ್ತು ಸುಭದ್ರೆಯ ಪದ್ಮಧ್ವಜ ರಥವು ಹದಿನಾಲ್ಕು ಚಕ್ರಗಳನ್ನು ಹೊಂದಿದೆ.


2. ದೇವಾಲಯದ ಇತಿಹಾಸ ಸಾರುವ ರಥ

ಭಗವಾನ್ ಜಗನ್ನಾಥ ಮತ್ತು ಇತರ ಎರಡು ದೇವತೆಗಳ ರಥಗಳ ಮೇಲ್ಭಾಗವನ್ನು ಈ ದೇವಾಲಯದ ನಿರ್ಮಾಣದ ಇತಿಹಾಸವನ್ನು ನೆನಪಿಸುತ್ತದೆ. ನೂರಾರು ಯಾತ್ರಿಕರು ಮತ್ತು ಭಕ್ತರು ರಥಗಳನ್ನು ಹಗ್ಗದಿಂದ ಎಳೆಯುತ್ತಾರೆ. ಉತ್ಸಾಹ ಮತ್ತು ಸಮರ್ಪಣೆಯ ಭಾವವನ್ನು ತೋರಿಸಿ ರೋಮಾಂಚಕ ಪ್ರದರ್ಶನವನ್ನು ಸೃಷ್ಟಿಸುತ್ತಾರೆ. ರಥದ ಮೇಲಾವರಣಗಳನ್ನು ತಯಾರಿಸಲು ಸುಮಾರು 1200 ಮೀಟರ್ ಬಟ್ಟೆಯನ್ನು ಬಳಸಲಾಗುತ್ತದೆ. ಇದಕ್ಕಾಗಿ 15 ದರ್ಜಿಗಳು ಒಟ್ಟಾಗಿ ಕೆಲಸ ಮಾಡುತ್ತಾರೆ.

3. ಪ್ರತಿ ವರ್ಷ ಹೊಸ ರಥ

ಪ್ರತಿ ವರ್ಷ ದೇವರ ರಥಗಳನ್ನು ಹೊಸದಾಗಿ ನಿರ್ಮಿಸಲಾಗುತ್ತದೆ ಎಂಬ ಅಂಶವು ರಥಯಾತ್ರೆಯ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದರಲ್ಲಿ ಬಳಸಲಾಗುವ ಹೊಸ ವಸ್ತುಗಳಲ್ಲಿ ಮರ ಕೂಡ ಒಂದಾಗಿದೆ. ಆದರೂ ರಥಗಳ ಪ್ರಕಾರ, ನಿರ್ಮಾಣ, ಶೈಲಿ ಮತ್ತು ಪ್ರಮಾಣಗಳು ಎಂದಿಗೂ ಬದಲಾಗುವುದಿಲ್ಲ. ವಿಶೇಷವೆಂದರೆ, ಪ್ರತಿ ರಥದ ಮುಂಭಾಗದಲ್ಲಿ ನಾಲ್ಕು ಮರದ ಕುದುರೆಗಳನ್ನು ಜೋಡಿಸಲಾಗುತ್ತದೆ.

4. ರಥ ಚಲಿಸಲು ಅಪಾರ ಶ್ರಮ ಬೇಕು

ಒಡಿಶಾ ರಥ ಯಾತ್ರಾ ಉತ್ಸವದಲ್ಲಿ ರಥಗಳನ್ನು ತಳ್ಳಲು ನೂರಾರು ಭಕ್ತರು ಸೇರುತ್ತಾರೆ. ಪ್ರಾರಂಭದಲ್ಲಿ ತೀವ್ರವಾದ ಒತ್ತಡ ಮತ್ತು ಎಳೆತದ ಹೊರತಾಗಿಯೂ ಭಗವಾನ್ ಜಗನ್ನಾಥನ ರಥವು ನಿಶ್ಚಲವಾಗಿರುತ್ತದೆ. ಹಲವಾರು ಗಂಟೆಗಳ ಶ್ರಮದ ಅನಂತರವೇ ರಥವು ಚಲಿಸಲು ಪ್ರಾರಂಭಿಸುತ್ತದೆ.

5. ದೇವರ ನೆಚ್ಚಿನ ಸಿಹಿತಿಂಡಿ

ಗುಂಡಿಚಾ ದೇವಸ್ಥಾನದಲ್ಲಿ ಒಂಬತ್ತು ದಿನಗಳನ್ನು ಕಳೆದ ಅನಂತರ, ಜಗನ್ನಾಥ ಮತ್ತು ಅವರ ಒಡಹುಟ್ಟಿದವರು ತಮ್ಮ ಸ್ವಂತ ಮನೆಗೆ ಮರಳುತ್ತಾರೆ. ಒಡಿಶಾದಲ್ಲಿ ವ್ಯಾಪಕವಾಗಿ ಸೇವಿಸಲ್ಪಡುವ ಪೋಡಾ ಪಿತಾ ದೇವರ ನೆಚ್ಚಿನ ಸಿಹಿತಿಂಡಿಯಾಗಿದೆ. ಹಿಂದಿರುಗುವ ದಾರಿಯಲ್ಲಿ, ಅದನ್ನು ವಿತರಿಸಲಾಗುತ್ತದೆ.


6. ಪರಿಸರ ಜಾಗೃತಿ ಮೂಡಿಸಿದ ರಥ ಯಾತ್ರೆ

ಒಡಿಶಾ ರಥ ಯಾತ್ರಾ ಉತ್ಸವ 2007ರಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಯಿತು. ಇದು ಸಾಂಪ್ರದಾಯಿಕ ಆಚರಣೆಗಳಿಂದ ಭಿನ್ನವಾಗಿತ್ತು. ಪರಿಸರ ಜಾಗೃತಿ, ಅರಣ್ಯಗಳನ್ನು ರಕ್ಷಿಸುವ ಅಗತ್ಯತೆ ಸಾರಲಾಯಿತು. ಗಿಡಮೂಲಿಕೆಗಳ ಸಸ್ಯಗಳು ಮತ್ತು ಸಸಿಗಳನ್ನು ರಥಗಳ ಮೇಲಿರುವ ವಿಗ್ರಹಗಳ ಬದಲಿಗೆ ಇರಿಸಲಾಯಿತು. ಇದು ಭಾರತದ ಚೊಚ್ಚಲ ಹಸಿರು ರಥ ಯಾತ್ರೆ ಎಂದು ಪ್ರಸಿದ್ಧಿ ಪಡೆಯಿತು. ಅದರ ಅನಂತರ ಮರಗಳನ್ನು ನೆಡುವ ಸಂಪ್ರದಾಯ ಆಚರಣೆಯಲ್ಲಿದೆ.

ಇದನ್ನೂ ಓದಿ: Puri Jagannath Temple: ಪುರಿ ಜಗನ್ನಾಥ ದೇವಾಲಯದ 10 ಅದ್ಭುತ ಸಂಗತಿಗಳಿವು!

7. ವಾರ ಮೊದಲು ದೇವಸ್ಥಾನ ಬಂದ್‌

ಆಚರಣೆಯ ಒಂದು ವಾರದ ಮೊದಲು ಪುರಿ ಜಗನ್ನಾಥ ದೇವಾಲಯದ ಮುಖ್ಯ ಬಾಗಿಲನ್ನು ಮುಚ್ಚಲಾಗುತ್ತದೆ. ಈ ಸಂದರ್ಭದಲ್ಲಿ ಜಗನ್ನಾಥ ದೇವರಿಗೆ ತೀವ್ರ ಜ್ವರ ಉಂಟಾಗುತ್ತದೆ, ಈ ಅವಧಿಯಲ್ಲಿ ವಿಶ್ರಾಂತಿ ಪಡೆಯಬೇಕು., ಬಳಿಕ ಚಿಕ್ಕಮ್ಮನ ಮನೆಗೆ ದೇವರು ತೆರಳುತ್ತಾನೆ ಎನ್ನುವ ನಂಬಿಕೆ ಇದೆ. ಹೀಗಾಗಿ ಈ ಅವಧಿಯಲ್ಲಿ ಗರ್ಭಗುಡಿಯಲ್ಲಿ ದೇವರ ದರ್ಶನ ಇರುವುದಿಲ್ಲ.

Exit mobile version