Site icon Vistara News

ವಿಸ್ತಾರ ನ್ಯೂಸ್‌ ಕಚೇರಿಗೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕೆ.ಆರ್‌. ನಾಗೇಂದ್ರ ಭೇಟಿ; ಶುಭ ಹಾರೈಕೆ

vistara news kannada

ಬೆಂಗಳೂರು: ನಗರದ ಬನಶಂಕರಿ 3ನೇ ಹಂತದ ಪೂರ್ಣಪ್ರಜ್ಞ ಲೇಔಟ್‌ನಲ್ಲಿರುವ ಕಲ್ಪವೃಕ್ಷ ಕ್ಷೇತ್ರ ಶ್ರೀ ರಾಘವೇಂದ್ರ ಸ್ವಾಮಿಮಠದ ಸಂಸ್ಥಾಪಕ ಕೆ. ಆರ್‌. ನಾಗೇಂದ್ರ ಅವರು ಗುರುವಾರ “ವಿಸ್ತಾರ ನ್ಯೂಸ್ʼʼ ಕಚೇರಿಗೆ ಭೇಟಿ ನೀಡಿ ವಿಸ್ತಾರ ನ್ಯೂಸ್‌ ಚಾನೆಲ್‌ನ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಹಾಗೂ ಚೇರ್ಮನ್‌, ಎಂಡಿ ಎಚ್‌.ವಿ. ಧರ್ಮೇಶ್‌ ಅವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಇವರಿಬ್ಬರಿಗೂ ರಾಯರ ಫಲ ಮಂತ್ರಾಕ್ಷತೆಯನ್ನು ಕೊಟ್ಟು ಗೌರವಿಸಿದ ಕೆ. ಆರ್‌. ನಾಗೇಂದ್ರ ಅವರು, ಚಾನೆಲ್‌ ಅತ್ಯುತ್ತಮವಾಗಿ ಮೂಡಿ ಬರುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದರು.

ಬೆಂಗಳೂರು ನಗರದ ಪೂರ್ಣ ಪ್ರಜ್ಞ ಲೇಔಟ್ ನಲ್ಲಿರುವ ಕಲ್ಪವೃಕ್ಷ ಕ್ಷೇತ್ರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನಾ ಮಹೋತ್ಸವ 2017 ರ ಜುಲೈ 13ರಂದು ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಭುಧೇಂದ್ರ ತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತ ದಿಂದ ನೆರವೇರಿದೆ. ಕೆ.ಆರ್‌. ನಾಗೇಂದ್ರ ಅವರು ಈ ಮಠವನ್ನು ಮುನ್ನಡೆಸುತ್ತಿದ್ದಾರೆ.

ಇದನ್ನೂ ಓದಿ | ವಿಸ್ತಾರ ನ್ಯೂಸ್‌ ಕಚೇರಿಗೆ ಬಿ.ಎಸ್‌.ಯಡಿಯೂರಪ್ಪ, ವಿಜಯೇಂದ್ರ ಭೇಟಿ; ಶುಭ ಹಾರೈಕೆ

Exit mobile version