Site icon Vistara News

ಸನಾತನ ವೇದ ಪಾಠ ಶಾಲೆಯ ವತಿಯಿಂದ ಶ್ರೀ ರಾಮ ನಾಮ ತಾರಕ ಯಜ್ಞ

ಶ್ರೀ ರಾಮ ನಾಮ ತಾರಕ ಯಜ್ಞ

ಬೆಂಗಳೂರು: ನಗರದ ಸನಾತನ ವೇದ ಪಾಠ ಶಾಲೆಯು ಲೋಕ ಕಲ್ಯಾಣಾರ್ಥವಾಗಿ ವಿದ್ಯಾರಣ್ಯಪುರದ ಸಾಯಿಬಾಬಾ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಶ್ರೀ ರಾಮ ನಾಮ ತಾರಕ ಯಜ್ಞ ಏರ್ಪಡಿಸಿತ್ತು.

ವೇದ ಬ್ರಹ್ಮಶ್ರೀ ವೇಣುಗೋಪಾಲಜೀ ಹಾಗೂ ಶ್ರೀನಿವಾಸನ್ ಅವರ ನೇತೃತ್ವದಲ್ಲಿ ಈ ಯಜ್ಞವು ನೆರವೇರಿತು. ಕಾರ್ಯಕ್ರಮದಲ್ಲಿ ರಾಜ್ಯ ಬ್ರಾಹ್ಮಣ ನಿಗಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮಹಿಳಾ ಆಯೋಜಕಿ ವತ್ಸಲಾ ನಾಗೇಶ್, ಬಿಜೆಪಿ ನಾಯಕ ಹಾಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ರವಿ, ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ರಾಜಗೋಪಾಲ್‌ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ| Horoscope Today |‌ ನಾಲ್ಕು ರಾಶಿಯವರಿಗೆ ಇಂದು ಶುಭ ಫಲ; ನಿಮ್ಮ ರಾಶಿ ಭವಿಷ್ಯ ಹೀಗಿದೆ

Exit mobile version