ಉಡುಪಿ: ಇಲ್ಲಿನ ಕೊಳಲಗಿರಿ ಉಪ್ಪೂರು ಲಕ್ಷ್ಮೀನಗರ ಸಂತೆಕಟ್ಟೆ ಬಳಿ ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳ (Sabarimala News) ಸೋಗಿನಲ್ಲಿ ವಂತಿಗೆ ಸಂಗ್ರಹಿಸುತ್ತಿದ್ದ ವೇಷಧಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಯ್ಯಪ್ಪ ಭಕ್ತವೃಂದ ಆದಿ ಉಡುಪಿ ಬೈಪಾಸ್ (ರಿ.) ಹೆಸರಿನಲ್ಲಿ 2000 ರೂಪಾಯಿ ವಂತಿಗೆ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಶಿವಮೊಗ್ಗ ಮೂಲದ ನಾಲ್ವರು ಅಯ್ಯಪ್ಪ ವ್ರತಾಧಾರಿಗಳ ವೇಷ ಧರಿಸಿ, ಕೊಳಲಗಿರಿ ಬಳಿ ದೀಪಾರಾಧನೆ, ಅನ್ನದಾನಕ್ಕೆ 2,000 ರೂಪಾಯಿ ಸಂಗ್ರಹ ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಆದಿ ಉಡುಪಿ ಅಯ್ಯಪ್ಪ ಭಕ್ತ ವೃಂದ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ದೇವರ ಮುಂದೆ ನಿಲ್ಲಿಸಿ ಕ್ಷಮೆಯಾಚಿಸಿ, ಲಕ್ಷ್ಮೀನಗರ ಅಯ್ಯಪ್ಪ ಶಿಬಿರದ ಹುಂಡಿಗೆ ಸಂಗ್ರಹವಾಗಿದ್ದ ವಂತಿಗೆ ಹಾಕಿಸಿದ್ದಾರೆ. ವ್ರತಾಧಾರಿಗಳ ಹೆಸರಿನಲ್ಲಿ ವಂತಿಗೆ ಸಂಗ್ರಹ ಮಾಡದಂತೆ, ಅಯ್ಯಪ್ಪ ವ್ರತಾಧಾರಿಗಳ ಹೆಸರು ಕೆಡಿಸದಂತೆ ತಾಕೀತು ಮಾಡಿದ್ದಾರೆ.
ಇದನ್ನೂ ಓದಿ | Sabarimala News | ಜೀವರಾಶಿಗಳ ಒಳಿತಿಗಾಗಿ ಅಯ್ಯಪ್ಪಸ್ವಾಮಿ ಭಕ್ತನ ವಿಶೇಷ ವ್ರತ; ವೈಷ್ಣೋದೇವಿ ಮಂದಿರದಿಂದ ಶಬರಿಮಲೆಗೆ ಪಾದಯಾತ್ರೆ