ಸಾಗರ: ತಾಲೂಕಿನ ಶ್ರೀಕ್ಷೇತ್ರ ವರದಹಳ್ಳಿಯಲ್ಲಿ ಸದ್ಗುರು ಭಗವಾನ್ ಶ್ರೀಧರ ಸ್ವಾಮಿಗಳ (Sridhar Swamiji) ಐವತ್ತನೇ ಆರಾಧನಾ ಮಹೋತ್ಸವ, ರಾಮತಾರಕ ಹವನ ಮತ್ತು ಕೃಷ್ಣ ಯಜುರ್ವೇದ ಸಂಹಿತಾ ಹವನ ಕಾರ್ಯಕ್ರಮವು ಮಾ. 30ರಿಂದ ಏ. 8 ರವರೆಗೆ ನಡೆಯಲಿದೆ.
ಮಾ. 30 ರಂದು ರಾಮತಾರಕ ಹವನ ಪ್ರಾರಂಭ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಾ. 31ರಂದು ಕೃಷ್ಣ ಯಜುರ್ವೇದ ಸಂಹಿತಾ ಹವನ ಪ್ರಾರಂಭವಾಗಲಿದೆ. ಏ. 5ರಂದು ರಾಮತಾರಕ ಹವನ ಪೂರ್ಣಾಹುತಿ ನಡೆಯಲಿದ್ದು, ಸಂಜೆ ಪಲ್ಲಕ್ಕಿ ಉತ್ಸವ ಮತ್ತು ಅಷ್ಟಾವಧಾನ ಸೇವೆ ನೆರವೇರಲಿದೆ.
ಇದನ್ನೂ ಓದಿ: Team India : ಮಾಡಿದ ತಪ್ಪಿಗೆ ಹೆದರಿ ಎಚ್ಐವಿ ಟೆಸ್ಟ್ ಮಾಡಿಸಿಕೊಂಡಿದ್ದ ಶಿಖರ್ ಧವನ್; ಏನಾಗಿತ್ತು ಅವರಿಗೆ?
ಏ. 6ರಂದು ಕೃಷ್ಣ ಯಜುರ್ವೇದ ಸಂಹಿತಾ ಹವನ ಪೂರ್ಣಾಹುತಿ ನಡೆಯಲಿದೆ. ಏ. 7ರಂದು ಶ್ರೀ ಗುರು ಮೂಲಮಂತ್ರ ಹವನ ಪೂರ್ಣಾಹುತಿ ನಡೆಯಲಿದೆ. ಏ. 8ರಂದು ಸದ್ಗುರು ಸಮಾಧಿಗೆ ಶತರುದ್ರಾಭಿಷೇಕ, ಸಹಸ್ರನಾಮಾರ್ಚನಾ ಪೂರ್ವಕ ಕಲ್ಪೋಕ್ತ ಪೂಜೆ, ಸದ್ಗುರು ಭಗವಾನ್ ಶ್ರೀಧರ ಸ್ವಾಮಿಗಳ ಐವತ್ತನೇ ಆರಾಧನಾ ಮಹೋತ್ಸವ ನಡೆಯಲಿದ್ದು, ನಂತರ ವೇದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಡೆಯಲಿದೆ.
ಮಾ. 30ರಿಂದ ಏ. 8ರವರೆಗೆ ಪ್ರತಿದಿನ ಮಧ್ಯಾಹ್ನ ಸ್ವಾನಂದಾಮೃತ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶ್ರೀಧರ ಸೇವಾ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಕಾನ್ಲೆ ಶ್ರೀಧರ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.