Site icon Vistara News

ಆ. 17ರಿಂದ ಚಾಮರಾಜಪೇಟೆ ಶಂಕರ ಮಠದಲ್ಲಿ ಶ್ರೀ ಗುರು ಶಕ್ತಿ-ಭಕ್ತಿ-ಮುಕ್ತಿ ಪ್ರವಚನ ಯಜ್ಞ

ಬೆಂಗಳೂರು: ಋಷಿಪೀಠಂ ಸತ್ಸಂಗಂ ವತಿಯಿಂದ ಆ.17ರಿಂದ 23ರವರೆಗೆ (7 ದಿನಗಳು) ನಗರದ ಚಾಮರಾಜಪೇಟೆಯ ಶಂಕರಪುರಂನ ಶ್ರೀ ಶೃಂಗೇರಿ ಶಂಕರ ಮಠದ ಶ್ರೀ ಭಾರತೀ ತೀರ್ಥ ಸಭಾ ಭವನದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಸಮನ್ವಯ ಸಾಮ್ರಾಟ್ ಬ್ರಹ್ಮಶ್ರೀ ಸಾಮವೇದ ಷಣ್ಮುಖ ಶರ್ಮಾ ಅವರ ಶ್ರೀಗುರು ಶಕ್ತಿ – ಭಕ್ತಿ – ಮುಕ್ತಿ (ಗುರು ಗೀತಾ) ಪ್ರವಚನ ಯಜ್ಞವನ್ನು (ತೆಲುಗಿನಲ್ಲಿ) ಆಯೋಜಿಸಲಾಗಿದೆ.

ಹೈದರಾಬಾದ್‌ನ ಋಷಿಪೀಠಂ ಸಂಸ್ಥಾಪಕ ಸಾಮವೇದಂ ಷಣ್ಮುಖ ಶರ್ಮ ಅವರು ಪ್ರವಚನವನ್ನು ನಡೆಸಿಕೊಡುತ್ತಾರೆ. ಪ್ರತಿದಿನ ಸಂಜೆ 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಗುತ್ತವೆ. ನಂತರ 6ಕ್ಕೆ ಪ್ರವಚನವಿರಲಿದೆ ಎಂದು ಋಷಿಪೀಠಂ ಸತ್ಸಂಗಂ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ | ರಾಧಿಕಾ ಕಾಖಂಡಿಕಿ ದಾಸವಾಣಿ ಕಾರ್ಯಕ್ರಮ ಯಶಸ್ವಿ

ಸುದ್ದಿಗೋಷ್ಠಿಯಲ್ಲಿ ಋಷಿಪೀಠಂ ಸತ್ಸಂಗಂ ಸಮಿತಿ ಸಂಘಟಕ ರಾಧಾಕೃಷ್ಣ ಜಿ ಶೇಷಪ್ಪ ಮಾತನಾಡಿ, ಋಷಿಪೀಠವು ಬ್ರಹ್ಮಶ್ರೀ ಸಾಮವೇದಂ ಷಣ್ಮುಖ ಶರ್ಮ ಅವರಿಂದ ಸ್ಥಾಪಿಸಲ್ಪಟ್ಟ ಚಾರಿಟಬಲ್ ಟ್ರಸ್ಟ್ ಆಗಿದೆ. ಸಾಮವೇದಂ ಷಣ್ಮುಖ ಶರ್ಮ ಅವರು ಸನಾತನ ಧರ್ಮ, ಭಾರತೀಯ ಮೌಲ್ಯಗಳು, ಪರಂಪರೆ ಮತ್ತು ಸಿದ್ಧಾಂತದ ಸಂರಕ್ಷಣೆ ಮತ್ತು ಪ್ರಚಾರದ ವೇದಿಕೆಯಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಪ್ರವಚನವನ್ನು ನಡೆಸಲಾಗಲಿಲ್ಲ. ಹೀಗಾಗಿ ಈ ವರ್ಷ ಪ್ರವಚನ ಆಯೋಜಿಸಲಾಗಿದ್ದು, ಪ್ರವೇಶ ಉಚಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಬ್ರಹ್ಮಶ್ರೀ ಸಾಮವೇದ ಷಣ್ಮುಖ ಶರ್ಮಾ

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಕರ್ತರಾದ ಡಾ. ವಿ.ಎ.ಶಾಸ್ತ್ರಿ, ರಾಧಾಕೃಷ್ಣ ಜಿ.ಶೇಷಪ್ಪ, ನಿವೃತ್ತ ಐಎಎಸ್‌ ಅಧಿಕಾರಿ ಜೆವಿಆರ್ ಪ್ರಸಾದ ರಾವ್, ರಘುರಾಮ್ ವೋಲೇಟಿ ಮತ್ತಿತರರು ಇದ್ದರು.

ಇದನ್ನೂ ಓದಿ | ‘ಮಂತ್ರದ್ರಷ್ಟ ಅರವಿಂದ ಘೋಷ್​’ ಪುಸ್ತಕ ಬಿಡುಗಡೆ; ಅರವಿಂದರ ಮಾಹಿತಿ ಬಿಚ್ಚಿಟ್ಟ ಲೇಖಕ ಕಾ.ಶ್ರೀ.ನಾಗರಾಜ

Exit mobile version