Site icon Vistara News

Sirsi News: ಏ.6 ರಂದು ಮಂಜುಗುಣಿಯ ಪುರಾಣ ಪ್ರಸಿದ್ಧ ವೆಂಕಟರಮಣ ದೇವರ ರಥೋತ್ಸವ

Manjuguni Venkataramana sirsi

#image_title

ಶಿರಸಿ: ತಾಲೂಕಿನ ಮಂಜುಗುಣಿಯ (Manjuguni) ಪುರಾಣ ಪ್ರಸಿದ್ಧ ವೆಂಕಟರಮಣ ದೇವರ ರಥೋತ್ಸವ ಏ.6ರಂದು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏ.1 ರಂದು ಬೆಳಗ್ಗೆ ಧ್ವಜ ಪೂಜೆ, ಧ್ವಜಾರೋಹಣ, ಧ್ವಜ ಬಲಿ, ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ರತ್ನ ಮಂಟಪೋತ್ಸವ, ಏ.2 ರಂದು ಬೆಳಗ್ಗೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಗಜ ಯಂತ್ರೋತ್ಸವ, ಏ.3 ರಂದು ಬೆಳಗ್ಗೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಸಿಂಹ ಯಂತ್ರೋತ್ಸವ, ಏ.4 ರಂದು ಬೆಳಗ್ಗೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಧನಲಕ್ಷ್ಮೀ ಪೂಜೆ, ಕಾಣಿಕೆ ಡಬ್ಬಿ ಪೂಜೆ, ಮುಸಲ ಪೂಜೆ ಚೂರ್ಣಿಕರಣ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಶೇಷ ಯಂತ್ರೋತ್ಸವ ನಡೆಯಲಿದೆ.

ಇದನ್ನೂ ಓದಿ: K. Manju: ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ನಿರ್ಮಾಪಕ ಕೆ ಮಂಜು? ರಾಜಕೀಯ ಅಖಾಡಕ್ಕೆ ಎಂಟ್ರಿ?

ಏ.5 ರಂದು ಬೆಳಗ್ಗೆ ದೇವರ ವರ್ಧಂತಿ ಉತ್ಸವ, ಹಂಡೆ ಪೂಜೆ, ಪಾಕಸಿದ್ಧಿ, ಅನ್ನ ಸಂಗ್ರಹ, ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ವರ್ಧಂತಿ, ಮಹಾ ಸಂತರ್ಪಣೆ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ರಾತ್ರಿ ಕ್ಷೇತ್ರ ಪ್ರಾಕಾರ ಬಲಿ, ಧ್ವಜ ಪ್ರಾಥನೆ, ಮಹಾ ದಂಡ ಬಲಿ, ವಿಶೇಷ ಭೂತರಾಜ ಬಲಿ, ಗರುಡ ಯಂತ್ರೋತ್ಸವ, ಏ.7 ರಂದು ಮಧ್ಯಾಹ್ನ ವಸಂತ ಪೂಜಾ ಸಂವಾದ, ಕಲಹ, ಅಂಕುರ ಸಮರ್ಪಣ ಪೂಜಾ ಪ್ರಸಾದ ವಿತರಣೆ, ಅವಭೃತ ತೀರ್ಥ ಸ್ನಾನ, ಪೂರ್ಣಾಹುತಿ, ಧ್ವಜಾರೋಹಣ, ಏ.19 ರಂದು ಅಮಾವಾಸ್ಯೆಯ ದಿನ ಸಂಪ್ರೋಕ್ಷಣ ಇರುತ್ತದೆ.

ಇದನ್ನೂ ಓದಿ: ಒಂದೇ ಕುಟುಂಬದ 6 ಮಂದಿಯ ಪ್ರಾಣ ತೆಗೆದ ಸೊಳ್ಳೆ ಬತ್ತಿ; ಹಾಸಿಗೆ ಮೇಲೆ ಬಿದ್ದು ಭುಗಿಲೆದ್ದ ಹೊಗೆ, ಬೆಂಕಿ

ರಥೋತ್ಸವ: ಏ.6 ರಂದು ಶ್ರೀ ದೇವರ ರಥೋತ್ಸವವಿದ್ದು, ಪ್ರಾತಃಕಾಲ ಮಹಾರಥ ಶುದ್ಧಿ, ರಥ ಬಲಿ, ರಥಾಗಮನ, ರಥಾರೋಹಣ, ಪೂಜಾ ಪ್ರಾರ್ಥನ ರಥನಯನ(ರಥ ಎಳೆಯುವುದು), ನಂತರ ಭಕ್ತರಿಗೆ ಶ್ರೀ ದೇವರ ದರ್ಶನವಿರುತ್ತದೆ. ಅಂದು ರಾತ್ರಿ 9 ಗಂಟೆಗೆ ಮರ್ಯಾದೆ ಕಾಯಿ ಹಂಚುವುದು, ರಥದ ಗಾಲಿಗೆ ಕಾಯಿ ಒಡೆಯುವುದು, ರಥಾವರೋಹಣ, ವಸಂತ ಪೂಜೆ ನಡೆಯಲಿದೆ.

ಇದನ್ನೂ ಓದಿ: Chenab Bridge | ಐಫೆಲ್‌ ಟವರ್‌ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ

Exit mobile version