Site icon Vistara News

Ram Mandir : ಅಯೋಧ್ಯೆ ಮಂದಿರ ಉದ್ಘಾಟನೆ ದಿನ ಮೀನು, ಮಾಂಸದಂಗಡಿಗಳು ಬಂದ್

Ram Mandir

Ram Mandir

ವಿಸ್ತಾರನ್ಯೂಸ್ ನವದೆಹಲಿ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ (Ram Mandir) ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜನವರಿ 22ರಂದು ಮಾಂಸ ಮತ್ತು ಮೀನು ಮಾರಾಟ ಮಾಡುವ ಎಲ್ಲಾ ವ್ಯಾಪಾರಿಗಳು ರಜೆ ಪಡೆಯಬೇಕೆಂದು ದೆಹಲಿ ಮಾಂಸ ವ್ಯಾಪಾರಿ ಸಂಘದ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಖುರೇಷಿ ಶನಿವಾರ ಮನವಿ ಮಾಡಿದ್ದಾರೆ. ಅಯೋಧ್ಯೆಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜನರ ಭಾವನೆಗಳನ್ನು ಗೌರವಿಸಿ ದೆಹಲಿಯ ಎಲ್ಲಾ ಕಸಾಯಿಖಾನೆಗಳು ಮತ್ತು ಮಾಂಸ ಮತ್ತು ಮೀನು ಮಾರಾಟ ಮಾಡುವ ಅಂಗಡಿಗಳು ತಮ್ಮ ವ್ಯವಹಾರಗಳನ್ನು ದಿನವಿಡೀ ಮುಚ್ಚುವಂತೆ ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.

ಎರಡು ಸಮುದಾಯಗಳ ನಡುವೆ ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವುದು ಮತ್ತು ಜನರನ್ನು ಒಟ್ಟುಗೂಡಿಸುವುದು ಮನವಿಯ ಹಿಂದಿನ ಉದ್ದೇಶವಾಗಿದೆ ಎಂದು ಇರ್ಷಾದ್ ಖುರೇಷಿ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ನಮ್ಮ ಹಿಂದೂ ಸಹೋದರ. ಸಹೋದರಿಯರ ಆಚರಣೆಗೆ ಗೌರವವನ್ನು ತೋರಿಸಲು ಜನವರಿ 22 ರಂದು ತಮ್ಮ ಅಂಗಡಿಗಳನ್ನು ಮುಚ್ಚುವಂತೆ ನಾವು ಎಲ್ಲಾ ಕಸಾಯಿಖಾನೆಗಳು ಮತ್ತು ಮಾಂಸ ಮತ್ತು ಮೀನು ಮಾರಾಟಗಾರರಿಗೆ ಮನವಿ ಮಾಡಿದ್ದೇವೆ ಎಂದು ಇರ್ಷಾದ್ ಖುರೇಷಿ ಸ್ಪಷ್ಟಪಡಿಸಿದ್ದಾರೆ. ಒಂದು ದಿನ ವ್ಯವಹಾರವನ್ನು ಸ್ಥಗಿತಗೊಳಿಸುವುದರಿಂದ ವ್ಯಾಪಾರಿಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಎರಡೂ ಸಮುದಾಯಗಳ ಭಾವನೆಗಳನ್ನು ಗೌರವಿಸಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ : Ram Mandir : ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ರಾಮೇಶ್ವರದಲ್ಲಿ ಪುಣ್ಯ ಸ್ನಾನ ಮಾಡಿದ ಮೋದಿ, ಇಲ್ಲಿದೆ ವಿಡಿಯೊ

ದೆಹಲಿಯ ಕನಾಟ್ ಪ್ಲೇಸ್​ನ ಅನೇಕ ರೆಸ್ಟೋರೆಂಟ್​​ಗಳು ಜನವರಿ 22 ರಂದು ಗ್ರಾಹಕರಿಗೆ ಮಾಂಸಾಹಾರವನ್ನು ನೀಡುವುದಿಲ್ಲ ಎಂದು ಘೋಷಿಸಿವೆ. ವ್ಯಾಪಾರಿಗಳ ಸಂಘ (ಎನ್ಡಿಟಿಎ) ಜಂಟಿ ಕಾರ್ಯದರ್ಶಿ ಅಮಿತ್ ಗುಪ್ತಾ ಈ ಮಾಹಿತಿ ನೀಡಿದ್ದಾರೆ.

ರಾಮ ಮಂದಿರದ ಬಗ್ಗೆ ತಪ್ಪು ಮಾಹಿತಿ ಹರಡಿದ್ರೆ ಜೈಲು ಗ್ಯಾರಂಟಿ

ನವದೆಹಲಿ: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ (Ram mandir) ಪ್ರತಿಷ್ಠಾಪನೆ ಕುರಿತು ತಪ್ಪು ಅಥವಾ ಸುಳ್ಳು ಮಾಹಿತಿ ಹರಡಿದ್ರೆ ಕೇಸ್​ ದಾಖಲಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಕೋಮು ಸೌಹಾರ್ದತೆ ಅಥವಾ ಶಾಂತಿಗೆ ಭಂಗ ತರುವ ಯಾವುದೇ ವಿಷಯವನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡದಿರುವಂತೆ ಸುದ್ದಿ ಸಂಸ್ಥೆಗಳು, ಸೋಶಿಯಲ್​ ಮೀಡಿಯಾ ಫ್ಲ್ಯಾಟ್​ಫಾರ್ಮ್​ಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಎಂಐಬಿ) ಕೆಲವೊಂದು ಸಲಹೆಗಳನ್ನು ನೀಡಿದೆ.

ಖಾತರಿಪಡಿಸದ, ಪ್ರಚೋದನಕಾರಿ ಮತ್ತು ನಕಲಿ ಸಂದೇಶಗಳನ್ನು ಈಗಾಗಲೇ ಹರಡಲಾಗುತ್ತಿದೆ. ಇವುಗಳು ಸಾಮಾಜಿಕ ಮಾಧ್ಯಮಗಳಲ್ಲಿ, ಇದು ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಬಹುದು. ಹೀಗಾಗಿ ಅಂಥ ಸಂಗತಿಗಳನ್ನು ಪ್ರಕಟಿಸಿದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಅಯೋಧ್ಯೆಯ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾಪನೆ 2024 ರ ಜನವರಿ 22 ರಂದು ನಡೆಯಲಿದೆ. ಅಂದು ಭಾರತದಾದ್ಯಂತ ಸಂಭ್ರಮಾಚರಣೆ ನಡೆಯಲಿದೆ. ಈ ಬಗ್ಗೆ ಕೆಲವು ಪರಿಶೀಲಿಸದ, ಪ್ರಚೋದನಕಾರಿ ಮತ್ತು ನಕಲಿ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿದೆ. ಇದು ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಬಹುದು ಎಂದು ಶುಕ್ರವಾರ ಬಿಡುಗಡೆ ಮಾಡಿದ ಸಲಹೆಯಲ್ಲಿ ತಿಳಿಸಲಾಗಿದೆ.

Exit mobile version