Site icon Vistara News

Soraba News: ಮಾನವ ಜೀವನದ ಉನ್ನತಿಗೆ ಧರ್ಮಾಚರಣೆ ಅಗತ್ಯ: ಬಾಳೆಹೊನ್ನೂರು ರಂಭಾಪುರಿ ಶ್ರೀಗಳು

Rambhapuri Swamiji Balehonnur soraba

#image_title

ಸೊರಬ: “ಮಾನವ ಜೀವನದ ಉನ್ನತಿಗೆ ಧರ್ಮಾಚರಣೆ ಅಗತ್ಯವಾಗಿದ್ದು, ಅರಿವು, ಆದರ್ಶಗಳಿಂದ ಮನುಷ್ಯನ ಬದುಕು ಸಮೃದ್ಧಗೊಳ್ಳಬೇಕು. ಈ ನಿಟ್ಟಿನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ದಾರಿ ದೀಪ” ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ (Rambhapuri sri) ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

ತಾಲೂಕಿನ ದುಗ್ಲಿ ಶ್ರೀ ಗುರು ರೇವಣಸಿದ್ಧೇಶ್ವರ ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ, ಶ್ರೀ ಮಠದ 47ನೇ ವಾರ್ಷಿಕೋತ್ಸವ ಹಾಗೂ ಲಿಂ.ಶ್ರೀ ಮುರುಘೇಂದ್ರ ಸ್ವಾಮಿಗಳ ಚತುರ್ಥ ವರ್ಷದ ಪುಣ್ಯಾರಾಧನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಇದನ್ನೂ ಓದಿ: BY Vijayendra: ದೆಹಲಿವರೆಗೆ ದೂರು ಹೋದರೆ ಆ ವ್ಯಕ್ತಿ ಎತ್ತರಕ್ಕೆ ಬೆಳೆದಿದ್ದಾನೆಂದು ಅರ್ಥ; ವಿಜಯೇಂದ್ರ ಹೇಳಿದ್ದು ಯಾರಿಗೆ?

“ಹಗಲು ಸೂರ್ಯ, ರಾತ್ರಿ ಚಂದ್ರ ನಮಗೆ ಬೆಳಕನ್ನು ಕೊಡುತ್ತಾನೆ. ಆದರೆ ನಮಗೆ ನಿರಂತರ ಬೆಳಕನ್ನು ನೀಡುವುದು ಧರ್ಮ. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯನ್ನು ಹೊಂದಿ ಸಾಮರಸ್ಯದಿಂದ ಬದುಕಿ ಬಾಳಬೇಕು ಎಂಬುದು ಜಗದ್ಗುರುಗಳು ಲಿಂ.ಶ್ರೀ ಮುರುಘೇಂದ್ರ ಶ್ರೀಗಳ ಉಪದೇಶವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗ ಪುರುಷರಾಗಿ ಧರ್ಮದ ದಶ ವಿಧ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ.
ಇಲ್ಲಿನ ಮಠಾಧ್ಯಕ್ಷರಾದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಭಕ್ತರಿಗೆ ನಮ್ಮ ಸಂಸ್ಕೃತಿಯನ್ನು ಮನವರಿಕೆ ಮಾಡಿ ಜೀವನದಲ್ಲಿ ಆಶಾದಾಯಕ ಭಾವನೆ ಉಂಟು ಮಾಡಿರುವುದು ಸಂತಸ ತಂದಿದೆ” ಎಂದರು.

ಸಂಸದ ಬಿ.ವೈ.ರಾಘವೇಂದ್ರ ಸಮಾರಂಭವನ್ನು ಉದ್ಘಾಟಿಸಿದ ಮಾತನಾಡಿ, “ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಶ್ರೀ ಮಠದ ಅಭಿವೃದ್ಧಿಯ ಕಾರ್ಯಗಳು ನಡೆದಿವೆ. ರೇವಣಸಿದ್ಧೇಶ್ವರ ಶ್ರೀಗಳ ಕ್ರಿಯಾಶೀಲತೆಯಿಂದಾಗಿ ಭಕ್ತರ ಸಹಕಾರದಿಂದಾಗಿ ಶ್ರೀ ಮಠ ಮುನ್ನಡೆಯುತ್ತಿರುವುದು ಸಂತೋಷದಾಯಕ” ಎಂದರು.

ಇದನ್ನೂ ಓದಿ: CJI DY Chandrachud: ಮುಚ್ಚಿದ ಲಕೋಟೆ ರೂಢಿಯನ್ನೇ ಕೊನೆಗೊಳಿಸಿ, ಕೇಂದ್ರಕ್ಕೆ ಸಿಜೆಐ ಚಂದ್ರಚೂಡ್‌ ಚಾಟಿ

ಸುಕ್ಷೇತ್ರ ದುಗ್ಲಿ ತಪೋ ಕ್ಷೇತ್ರ ಕಡೆನಂದಿಹಳ್ಳಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಡೆ ಶ್ರೀ ಮಹಾಂತ ಸ್ವಾಮಿಗಳು, ಮಳಲಿ ಶ್ರೀ ಡಾ.ನಾಗಭೂಷಣ ಸ್ವಾಮೀಜಿ, ಸಿಂಧನೂರು-ಕನ್ನೂರು ಶ್ರೀ ಸೋಮನಾಥ ಸ್ವಾಮೀಜಿ, ಹಾರನಹಳ್ಳಿ ಶಿವಯೋಗಿ ಶ್ರೀಗಳು, ಕಾರ್ಜುವಳ್ಳಿ ಸದಾಶಿವ ಶ್ರೀಗಳು, ಚನ್ನಗಿರಿ ಕೇದಾರ ಶಿವಶಾಂತವೀರ ಶ್ರೀಗಳು, ಸಂಗನಾಳ ಶಿವಲಿಂಗ ಸ್ವಾಮೀಜಿಗಳು ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವದಿಸಿದರು.

ಸಮಾರಂಭದಲ್ಲಿ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜು ಎಂ. ತಲ್ಲೂರು, ಡಾ.ಜ್ಞಾನೇಶ್ ಎಚ್.ಇ., ಗುಡವಿ ಗ್ರಾ. ಪಂ. ಅಧ್ಯಕ್ಷೆ ಸರಿತಾ ಪರಶುರಾಮಪ್ಪ, ಉಪಾಧ್ಯಕ್ಷ ಮಂಜುನಾಥ ಸಿ.ಎಚ್., ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಪ್ಪ ಡಿ., ರೂಪಾ ಪರಶುರಾಮ, ಬಸವರಾಜಪ್ಪ ಬಾರಂಗಿ, ವೀರೇಶಗೌಡ, ಗುರು ಪ್ರಸನ್ನ ಗೌಡ ಬಾಸೂರ, ಅರುಣ ಕುಮಾರ, ದೇಸಾಯಿ ಶಂಕ್ರಪ್ಪ ಗೌಡ, ಟಿ.ಜಿ.ನಾಡಿಗೇರ್, ದ್ಯಾಮಣ್ಣ ದೊಡ್ಡಮನಿ, ಪ್ರದೀಪ ಎಸ್. ಗೌಡ, ಪ್ರಶಾಂತ ಗೌಡ ಸಂತೊಳ್ಳಿ, ಹನುಮಂತಪ್ಪ ಮಡ್ಲೂರ, ಡಾ.ಪ್ರಭು ಸಾಹುಕಾರ್, ಪಂ.ಕೃಷ್ಣ ಭಟ್, ಮೃತ್ಯುಂಜಯಸ್ವಾಮಿ ಹಿರೇಮಠ, ಕೆರೆಸ್ವಾಮಿ ಗೌಡ, ಸಣ್ಣಪ್ಪ ಗೌಡ, ಕೆ.ಎಸ್. ಪ್ರಶಾಂತ ಇದ್ದರು.

ಇದನ್ನೂ ಓದಿ: Ugadi Jewel Fashion: ಯುಗಾದಿ ಹಬ್ಬದ ಗ್ರ್ಯಾಂಡ್‌ ಲುಕ್‌ಗೆ ಟ್ರೆಂಡಿಯಾದ ಮಿಕ್ಸ್‌ ಮ್ಯಾಚ್‌ ಆಭರಣಗಳು

Exit mobile version