Site icon Vistara News

Soraba News: ಶಾಂತಗೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವರ ಮಹಾ ರಥೋತ್ಸವ

Basaveshwara Rathotsava Shantageri Village sagara

#image_title

ಸೊರಬ: ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವರ ಮಹಾ ರಥೋತ್ಸವವು (Soraba News) ಪಲ್ಲಕ್ಕಿ ಉತ್ಸವ ಹಾಗೂ ಜಾನಪದ ಕಲಾಮೇಳಗಳೊಂದಿಗೆ ಮಂಗಳವಾರ (ಜ.೩೧) ವಿಜೃಂಭಣೆಯಿಂದ ನೆರವೇರಿತು.

ಅರ್ಚಕ ಚಂದ್ರಶೇಖರಯ್ಯ ಹಿರೇಮಠ ಶಾಂತಗೇರಿ ಅವರ ನೇತೃತ್ವದಲ್ಲಿ ದೇವರಿಗೆ ರಕ್ಷಾ ಬಂಧನ, ಕುಂಭಾಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ, ವಿಧಿ ವಿಧಾನಗಳು ನೆರವೇರಿದವು. ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಒಂದು ಕಿ.ಮೀ. ದೂರದಲ್ಲಿರುವ ಹಕ್ಕಲ ಬಸವೇಶ್ವರ ದೇವಸ್ಥಾನದವರೆಗೂ ಮಹಾ ರಥವನ್ನು ಎಳೆಯಲಾಯಿತು. ಶ್ರೀ ಬಸವೇಶ್ವರ ನಂದಿಕೋಲು ಉತ್ಸವ, ಹರೂರು ಗ್ರಾಮದ ಶ್ರೀ ಮಾರಿಕಾಂಬಾ ದೇವಿ ಪಲ್ಲಕ್ಕಿ ಹಾಗೂ ಅಂಡಿಗೆ ಗ್ರಾಮದ ನಂದಿಕೋಲು ಉತ್ಸವ ಸಾಂಗವಾಗಿ ನೆರವೇರಿತು. ಬಸವೇಶ್ವರ ಹಾಗೂ ಮಾರಿ ದೇವತೆ ನಡುವೆ ಓಕುಳಿ, ಉಂಗುರ ಹುಡುಕುವ ಕಾರ್ಯಕ್ರಮಗಳು ನಡೆದವು. ವಾದ್ಯಮೇಳಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ | LIC WhatsApp Services: ವಾಟ್ಸಾಪ್‌ನಲ್ಲೇ ನಿಮ್ಮ ಎಲ್ಐಸಿ ಪ್ರೀಮಿಯಂ ಮಾಹಿತಿ ತಿಳಿದುಕೊಳ್ಳಿ! ನೋಂದಣಿ ಹೇಗೆ?

ರಥೋತ್ಸವಕ್ಕೆ ಅಂಡಿಗೆ, ಹರೂರು, ತಾವರೇಗೊಪ್ಪ, ಕುಳವಳ್ಳಿ, ಕುಂಬತ್ತಿ, ಕೊಡಕಣಿ, ಉರಗನಹಳ್ಳಿ, ದೇವತಿಕೊಪ್ಪ, ಮಾವಲಿ ಇನ್ನಿತರೆ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಂಡಿಗೆ ಗ್ರಾ.ಪಂ ಉಪಾಧ್ಯಕ್ಷ ಎ.ಎಸ್.ಹೇಮಚಂದ್ರ, ಮಾಜಿ ಉಪಾಧ್ಯಕ್ಷೆ ಭಾಗ್ಯ ಈಶ್ವರಪ್ಪ, ಗ್ರಾಮ ಸಮಿತಿಯ ಅಧ್ಯಕ್ಷ ಸೇತುರಾಮ್, ಕಾರ್ಯದರ್ಶಿ ಎಸ್.ಡಿ.ನಾಗರಾಜ್, ಅಂಡಿಗೆ ಸಹಕಾರ ಸಂಘದ ನಿರ್ದೇಶಕರಾದ ಶಾಂತಪ್ಪ, ಪುಟ್ಟಮ್ಮ, ಮಾಜಿ ನಿರ್ದೇಶಕ ಮಂಜಪ್ಪ ಉಮಟೇಗದ್ದೆ, ಉಪನ್ಯಾಸಕ ಎಸ್.ಎಂ.ನೀಲೇಶ್, ಎ.ಎಸ್.ಶಿವಕುಮಾರ್, ಎಸ್.ಎಲ್.ರವಿ, ಪ್ರಕಾಶ್, ಮಧುಸೂಧನ್, ಬಸವರಾಜ ಗೌಡ, ನೇಮರಾಜ್, ಸತೀಶ್, ರಾಜು ಇತರರಿದ್ದರು.

ಇದನ್ನೂ ಓದಿ | Pooja Hegde: ರೇಷ್ಮೆ ಸೀರೆಯಲ್ಲಿ ಪಕ್ಕಾ ಕನ್ನಡತಿಯಂತೆ ಕಂಡ ನಟಿ ಪೂಜಾ ಹೆಗ್ಡೆ

Exit mobile version