Site icon Vistara News

ಮುಚಖಂಡಿ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ನಾಣ್ಯ, ನೋಟುಗಳ ಅಲಂಕಾರ

ಬಾಗಲಕೋಟೆ: ಶ್ರಾವಣ ಮಾಸದ ಮೂರನೇ ಮಂಗಳವಾರದ ಹಿನ್ನೆಲೆಯಲ್ಲಿ ತಾಲೂಕಿನ ಪ್ರಸಿದ್ಧ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಾಣ್ಯ ಹಾಗೂ ನೋಟುಗಳನ್ನು ಬಳಸಿ ಮಾಡಿರುವ ವಿಶೇಷ ಅಲಂಕಾರ ಗಮನ ಸೆಳೆದಿದೆ.

ವೀರಭದ್ರೇಶ್ವರ ಸ್ವಾಮಿ ವಿಗ್ರಹಕ್ಕೆ ಐದು ರೂಪಾಯಿ ನಾಣ್ಯಗಳನ್ನು ಅಂಟಿಸಲಾಗಿದೆ. ಅಲ್ಲದೆ, ಹತ್ತು, ಇಪ್ಪತ್ತು, ಐವತ್ತು, ನೂರು ರೂಪಾಯಿ ನೋಟುಗಳ ಹಾರವನ್ನು ಹಾಕಿರುವುದು ಎಲ್ಲರನ್ನೂ ಆಕರ್ಷಿಸುತ್ತಿದೆ. ಎಂದಿನಂತೆ ವೀರಭದ್ರೇಶ್ವರ ಸ್ವಾಮಿ ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸಿ ದರ್ಶನ ಪಡೆದರು.

ದೇವಸ್ಥಾನಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಪ್ರತಿ ಮಂಗಳವಾರ ವಿವಿಧ ರೂಪದಲ್ಲಿ ವಿಶೇಷ ಅಲಂಕಾರ ಮಾಡಲಾಗುತ್ತದೆ. ಶ್ರಾವಣ ಮಾಸದ ಕೊನೆಯ ಮಂಗಳವಾರ ಅದ್ಧೂರಿಯಾಗಿ ಜಾತ್ರೆ, ರಥೋತ್ಸವ ನಡೆಯುತ್ತದೆ.

ಇದನ್ನೂ ಓದಿ | Krishna Janmashtami 2022 | ಶ್ರೀಕೃಷ್ಣ ಜನ್ಮಾಷ್ಟಮಿ ಎಂದು? ವಿಶೇಷತೆ ಏನು?

Exit mobile version