Site icon Vistara News

Temple Bell: ದೇವಾಲಯದಿಂದ ಹಿಂತಿರುಗುವಾಗ ಗಂಟೆ ಬಾರಿಸಲೇಬಾರದು ಯಾಕೆ ಗೊತ್ತೇ?

Temple Bell

ಹಿಂದೂ ಧರ್ಮದಲ್ಲಿ (hindu dharma) ಪ್ರತಿಯೊಂದು ಆರಾಧನೆಗೂ (worship) ನಿಯಮ ಮತ್ತು ನಿಬಂಧನೆಗಳಿವೆ. ಅದರಲ್ಲೂ ಪೂಜೆಯ (puje) ವೇಳೆ, ದೇವಾಲಯದ (temple) ಒಳಗೆ ಕಟ್ಟುನಿಟ್ಟಾಗಿ ಈ ನಿಯಮಗಳನ್ನು ಪಾಲಿಸುವುದರಿಂದ ನಾವು ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಈ ನಿಯಮಗಳಲ್ಲಿ ಒಂದು ಪೂಜೆಗಾಗಿ ದೇವಾಲಯವನ್ನು ಪ್ರವೇಶಿಸುವಾಗ ಗಂಟೆ (Temple Bell) ಬಾರಿಸುವುದು.

ಪ್ರತಿ ಹಿಂದೂ ದೇವಾಲಯದಲ್ಲೂ ಗಂಟೆ ಇರುತ್ತದೆ. ಜನರು ದೇವಸ್ಥಾನಕ್ಕೆ ಹೋದಾಗ ಮತ್ತು ಅಲ್ಲಿಂದ ಹಿಂತಿರುಗಿದಾಗ ಅವರು ಗಂಟೆಯನ್ನು ಬಾರಿಸುತ್ತಾರೆ. ಆದರೆ ದೇವಸ್ಥಾನದಿಂದ ಹಿಂತಿರುಗುವಾಗ ಗಂಟೆ ಬಾರಿಸಬಾರದು ಎಂಬುದು ನಿಮಗೆ ತಿಳಿದಿದೆಯೇ?

ದೇವಸ್ಥಾನದಿಂದ ಹಿಂದಿರುಗುವಾಗ ಗಂಟೆ ಏಕೆ ಬಾರಿಸಬಾರದು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಈ ನಿಯಮದ ಹಿಂದೆ ಬಹು ಮಹತ್ವದ ಕಾರಣವಿದೆ.


ದೇವಸ್ಥಾನಗಳಲ್ಲಿ ಗಂಟೆ ಏಕೆ ಬಾರಿಸುತ್ತೇವೆ?

ಶಬ್ದವು ಶಕ್ತಿಗೆ ಸಂಬಂಧಿಸಿದೆ. ನಾವು ದೇವಸ್ಥಾನದ ಗಂಟೆಯನ್ನು ಬಾರಿಸಿದಾಗ ಗಂಟೆ ಬಾರಿಸುವ ವ್ಯಕ್ತಿಗೆ ಧನಾತ್ಮಕ ಶಕ್ತಿಯು ಹರಡುತ್ತದೆ ಮತ್ತು ಸುತ್ತಮುತ್ತಲಿನ ಜನರ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತದೆ.
ಶಾಸ್ತ್ರ, ಸ್ಕಂದ ಪುರಾಣದಲ್ಲಿ ನಾವು ದೇವಾಲಯದ ಗಂಟೆಯನ್ನು ಬಾರಿಸಿದಾಗ ಅದು ‘ಓಂ’ ಶಬ್ದವನ್ನು ಹೋಲುತ್ತದೆ ಎಂದು ಉಲ್ಲೇಖಿಸಲಾಗಿದೆ. ‘ಓಂ’ ಶಬ್ದವು ಶುದ್ಧ, ಪವಿತ್ರ ಮತ್ತು ಧನಾತ್ಮಕ ಶಕ್ತಿಯೊಂದಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದೇವಾಲಯವನ್ನು ಪ್ರವೇಶಿಸುವಾಗ ಗಂಟೆಯನ್ನು ಬಾರಿಸುವ ಸಂಪ್ರದಾಯವಿದೆ.

ಮರಳುವಾಗ ಗಂಟೆ ಬಾರಿಸುವುದಿಲ್ಲ ಏಕೆ?

ದೇವಸ್ಥಾನದಿಂದ ಹೊರಬರುವಾಗ ಅನೇಕ ಜನರು ಗಂಟೆ ಬಾರಿಸುವುದನ್ನು ನೋಡಿರಬಹುದು. ಆದರೆ ಇದು ತಪ್ಪು ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದೇವಸ್ಥಾನದಿಂದ ಹೊರಡುವಾಗ ಗಂಟೆಯನ್ನು ಬಾರಿಸಬಾರದು. ಯಾಕೆಂದರೆ ಹೀಗೆ ಮಾಡುವುದರಿಂದ ದೇವಾಲಯದ ಧನಾತ್ಮಕ ಶಕ್ತಿಯನ್ನು ದೇವಾಲಯದಲ್ಲಿಯೇ ಬಿಟ್ಟು ಬಂದಂತೆ ಆಗುತ್ತದೆ. ನಾವು ದೇವಾಲಯದಿಂದ ಬರಿಗೈಯಲ್ಲಿ ಮರಳುತ್ತೇವೆ. ಹಾಗಾಗಿ ದೇವಸ್ಥಾನದಿಂದ ಹೊರಡುವಾಗ ಗಂಟೆ ಬಾರಿಸಬಾರದು.


ಗಂಟೆ ಏಕೆ ಬಾರಿಸಬೇಕು?

ಸನಾತನ ಧರ್ಮದಲ್ಲಿ ಪ್ರಾಚೀನ ಕಾಲದಿಂದಲೂ ಪೂಜೆಗೆ ಪ್ರಾಮುಖ್ಯತೆ ನೀಡಲಾಗಿದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ನಾವು ದೇವಾಲಯವನ್ನು ಪ್ರವೇಶಿಸುವಾಗ ಗಂಟೆಯನ್ನು ಬಾರಿಸಿದರೆ ಗಂಟೆಯ ಶಬ್ದವು ನಮ್ಮ ದೇಹದಲ್ಲಿನ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ. ಜನರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ದೇವರಿಗೆ ಗಂಟೆಯ ಸದ್ದು ಇಷ್ಟವಾಗುತ್ತದೆ ಮತ್ತು ಗಂಟೆ ಬಾರಿಸುವ ಮೂಲಕ ಭಕ್ತರು ದೇವರ ಉಪಸ್ಥಿತಿಯ ಅನುಭವ ಪಡೆಯಬಹುದು.

ಗಂಟೆ ಬಾರಿಸುವುದು ದೇವಾಲಯವನ್ನು ಪ್ರವೇಶಿಸಲು ಮತ್ತು ದೇವತೆಗಳ ಗಮನವನ್ನು ಸೆಳೆಯಲು ದೇವರ ಅನುಮತಿ ತಮ್ಮ ಕಡೆಗೆ ಸೆಳೆಯುವುದಾಗಿದೆ. ಗಂಟೆ ಬಾರಿಸುವ ಮೂಲಕ ಭಕ್ತನು ತನ್ನ ಆಗಮನವನ್ನು ದೇವರಿಗೆ ತಿಳಿಸುತ್ತಾನೆ ಎಂದು ಹೇಳಲಾಗುತ್ತದೆ.

ಗಂಟೆಯ ಶಬ್ದವು ದೈವತ್ವವನ್ನು ಸ್ವಾಗತಿಸುವ ಮತ್ತು ದುಷ್ಟತನವನ್ನು ಹೋಗಲಾಡಿಸುವ ಮಂಗಳಕರವೆಂದು ಪರಿಗಣಿಸಲಾಗಿದೆ. ಗಂಟೆಯ ಶಬ್ದವು ಮನಸ್ಸನ್ನು ನಡೆಯುತ್ತಿರುವ ಆಲೋಚನೆಗಳಿಂದ ದೂರವಿಡುತ್ತದೆ. ಹೀಗಾಗಿ ಮನಸ್ಸು ಹೆಚ್ಚು ಗ್ರಹಿಸುವಂತೆ ಮಾಡುತ್ತದೆ.

ಇದನ್ನೂ ಓದಿ: Importance Of Tilaka: ಹಣೆಯ ಮೇಲೆ ತಿಲಕ ಇಟ್ಟರೆ ಏನೇನು ಪ್ರಯೋಜನ? ಇದಕ್ಕಿದೆ ವೈಜ್ಞಾನಿಕ ಕಾರಣ!

ಗಂಟೆಯ ಶಬ್ದವು ದೇಹ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಎಲ್ಲಾ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ನಾಶಪಡಿಸುತ್ತದೆ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತದೆ, ಇದರಿಂದಾಗಿ ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿರುತ್ತದೆ.

ಗಂಟೆಯನ್ನು ಯಾವಾಗ ಬಾರಿಸಬೇಕು?

ಬೆಳಗ್ಗೆ ಮತ್ತು ಸಂಜೆ ದೇವಾಲಯದ ಗಂಟೆಯನ್ನು ಬಾರಿಸಬೇಕು ಎಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಆದ್ದರಿಂದ ಪೂಜೆಯನ್ನು ಪ್ರಾರಂಭಿಸುವ ಮೊದಲು ನಿಯಮಿತವಾಗಿ ಮನೆಯಲ್ಲೂ ಗಂಟೆ ಬಾರಿಸುವುದು ಒಳ್ಳೆಯದು.

Exit mobile version