Site icon Vistara News

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Vastu Tips

ಮನೆಯಲ್ಲಿ (vastu for home) ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ವಾಸ್ತು ಪರಿಪಾಲನೆ ಬಹಳ ಮುಖ್ಯವಾಗಿದೆ. ಮನೆಯಲ್ಲಿ ವಾಸ್ತು (Vastu Tips) ಸರಿಯಾಗಿ ಇಲ್ಲದೇ ಇದ್ದರೆ ಆರ್ಥಿಕ ತೊಂದರೆ, ಅಶಾಂತಿ, ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವು ರೀತಿಯ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವಾಸ್ತುವಿಗೆ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ಮಾನ್ಯತೆ ನೀಡಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು (kitchen room) ಮನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಮನೆಯೊಳಗಿನ ಅನೇಕ ವಿಷಯಗಳು ಯಾವ ದಿಕ್ಕಿನಲ್ಲಿ (Cooking Directions) ಅಡುಗೆ ಮಾಡಿ ತಿನ್ನುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮನೆಗೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಯಾವ ದಿಕ್ಕಿನಲ್ಲಿ ಅಡುಗೆ ಮಾಡಬೇಕೆಂದು ಎಂಬುದನ್ನು ನಾವು ತಿಳಿದುಕೊಂಡಿದ್ದರೆ ಒಳ್ಳೆಯದು

Vastu Tips

.

ಅಡುಗೆ ಮನೆಯಿಂದಲೂ ಬರುತ್ತೆ ವಾಸ್ತು ದೋಷಗಳು

ಅಡುಗೆ ಮನೆಯಲ್ಲಿನ ವಾಸ್ತು ದೋಷಗಳು ಮನೆಯಲ್ಲಿ ರೋಗ ಮತ್ತು ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿ ಅಡುಗೆ ಮನೆಯಲ್ಲಿ ಯಾವ ರೀತಿಯಲ್ಲಿ ಆಹಾರವನ್ನು ಬೇಯಿಸುತ್ತೀರಿ ಎಂಬುದರ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ.

ಅಲ್ಲದೇ ಅಡುಗೆ ಮಾಡುವಾಗ ಅಡುಗೆ ಮಾಡುವವರ ಭಾವನೆಗಳು ತಿನ್ನುವವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಅಡುಗೆ ಮಾಡುವುದು ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಯಾಗಲು ಕಾರಣವಾಗುತ್ತದೆ.

Vastu Tips


ತಪ್ಪಿಸಬೇಕಾದ ಸಂಗತಿಗಳು

ದಕ್ಷಿಣ ದಿಕ್ಕು: ಎಂದಿಗೂ ದಕ್ಷಿಣಕ್ಕೆ ಮುಖ ಮಾಡಿ ಅಡುಗೆ ಮಾಡಬೇಡಿ. ಇದು ಬಡತನವನ್ನು ತರಬಹುದು. ತಲೆನೋವು, ಕೀಲು ನೋವು ಮತ್ತು ಮೈಗ್ರೇನ್‌ಗಳನ್ನು ಉಂಟು ಮಾಡಬಹುದು.

ಪಶ್ಚಿಮ ದಿಕ್ಕು: ಪಶ್ಚಿಮಾಭಿಮುಖವಾಗಿ ಅಡುಗೆ ಮಾಡುವುದು ವೈವಾಹಿಕ ಜೀವನದಲ್ಲಿ ಅಪಶ್ರುತಿ ಮತ್ತು ಅತೃಪ್ತಿಯನ್ನು ಉಂಟುಮಾಡಬಹುದು.

ಉತ್ತರ ದಿಕ್ಕು: ಉತ್ತರ ದಿಕ್ಕಿಗೆ ಮುಖಮಾಡಿ ಅಡುಗೆ ಮಾಡುವುದು ಆರ್ಥಿಕ ಸಮಸ್ಯೆ ಮತ್ತು ಬಡತನಕ್ಕೆ ಕಾರಣವಾಗಬಹುದು.

Vastu Tips


ಅಡುಗೆಗೆ ಶುಭ ಸಲಹೆ

ಪೂರ್ವ ದಿಕ್ಕು: ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡುವುದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಪೂರ್ವವು ಸೂರ್ಯನ ದಿಕ್ಕು, ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಈ ದಿಕ್ಕಿನಲ್ಲಿ ಬೇಯಿಸಿದ ಆಹಾರವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಜಗಳಗಳನ್ನು ಕಡಿಮೆ ಮಾಡುತ್ತದೆ ಮತ್ತು ಗಮನವನ್ನು ಹೆಚ್ಚಿಸುತ್ತದೆ. ಇದು ಉತ್ತಮ ಆದಾಯಕ್ಕೆ ಕಾರಣವಾಗಬಹುದು.

ವಾಸ್ತು ನಿಯಮಗಳು

ಅಗ್ನಿ ದೇವರು ವಾಸಿಸುತ್ತಾನೆ ಎಂದು ನಂಬಲಾದ ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು.

ಅಡುಗೆ ಮಾಡುವಾಗ ಪೂರ್ವಕ್ಕೆ ಮುಖ ಮಾಡಿ ಮಾಡಬೇಕು.

ಅಡುಗೆ ಮನೆಯಲ್ಲಿ ಸಿಂಕ್ ಅನ್ನು ಈಶಾನ್ಯ ಮೂಲೆಯಲ್ಲಿ ಇರಿಸಬೇಕು.

ಅಡುಗೆ ಮನೆಯ ಕಿಟಕಿಗಳು ಪೂರ್ವ ಮತ್ತು ಪಶ್ಚಿಮದಲ್ಲಿ ಸ್ಥಾಪಿಸಿ.

ಅಲಂಕಾರಕ್ಕಾಗಿ ಅಡುಗೆ ಮನೆಯಲ್ಲಿ ಹಣ್ಣು ಮತ್ತು ತರಕಾರಿಗಳ ಚಿತ್ರಗಳು ಒಳ್ಳೆಯದು.

ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಅಡುಗೆ ಮಾಡುವ ಸ್ಥಳ, ಓಲೆ ಸ್ವಚ್ಛವಾಗಿರಬೇಕು.

ಅಡುಗೆ ಮನೆಯ ಓಲೆ ಮನೆಯ ಮುಖ್ಯ ಬಾಗಿಲಿನ ಹೊರಗಿನಿಂದ ಗೋಚರಿಸಬಾರದು. ಅಗತ್ಯವಿದ್ದರೆ ಪರದೆಯನ್ನು ಬಳಸಿ.

ಶೌಚಾಲಯ, ಮೆಟ್ಟಿಲು ಅಥವಾ ಪೂಜಾ ಕೊಠಡಿಗಳ ಮೇಲೆ ಅಥವಾ ಕೆಳಗೆ ಅಡುಗೆಮನೆಯನ್ನು ಇಡಬೇಡಿ.

ಮಾನಸಿಕ ಸಮತೋಲನ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ನೀರು ಮತ್ತು ಬೆಂಕಿಯ ಅಂಶಗಳನ್ನು ಪ್ರತ್ಯೇಕವಾಗಿ ಇರಿಸಿ.

ಅಡುಗೆ ಕೋಣೆಯು ಮಲಗುವ ಕೋಣೆ, ಪೂಜಾ ಕೊಠಡಿ ಅಥವಾ ಶೌಚಾಲಯಗಳ ಕೆಳಗೆ ಅಥವಾ ಮೇಲೆ ಇಡುವುದನ್ನು ತಪ್ಪಿಸಿ.

ಇದನ್ನೂ ಓದಿ: Vastu Tips: ಮಕ್ಕಳ ಮದುವೆ ವಿಳಂಬವಾಗುತ್ತಿದೆಯೆ? ವಾಸ್ತು ದೋಷವೂ ಕಾರಣವಿರಬಹುದು!

ಧನಾತ್ಮಕ ಕಂಪನಗಳನ್ನು ಹೆಚ್ಚಿಸಲು ಅಡುಗೆಮನೆಯನ್ನು ಸ್ವಚ್ಛವಾಗಿ ಮತ್ತು ಗೊಂದಲವಿಲ್ಲದೆ ಇರಿಸಿ.

ಶುದ್ಧತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮಾಂಸಾಹಾರಿ ಆಹಾರವನ್ನು ತಯಾರಿಸಲು ಪ್ರತ್ಯೇಕ ಸ್ಥಳವನ್ನು ಬಳಸಿ.

Exit mobile version