ಕೆಲವೊಂದು ನಂಬಿಕೆಗಳು ಎಷ್ಟು ಸರಿಯೋ ಗೊತ್ತಿಲ್ಲ. ಆದರೆ ಹೆಚ್ಚಿನವರು ನಂಬುತ್ತಾರೆ. ಮನೆಯಲ್ಲಿ ಸಾಕುವ ಬೆಕ್ಕು, (cat) ನಾಯಿಗಳಿಂದ (dog) ಹಿಡಿದು ಕೆಲವು ಪ್ರಾಣಿಗಳನ್ನು (animals) ಶುಭ ಸಂಕೇತಗಳಿಗೆ (Good sign) ಭಾವಿಸುತ್ತೇವೆ. ವಾಸ್ತು ಪ್ರಕಾರವೂ (Vastu Tips) ಕೆಲವು ಪ್ರಾಣಿಗಳು ದಾರಿಯಲ್ಲಿ ನಮಗೆ ಸಿಕ್ಕರೆ ಶುಭ ಶಕುನ ಎಂದೇ ಹೇಳಲಾಗುತ್ತದೆ.
ಹಿಂದೂ ಧರ್ಮದಲ್ಲಿ ಸಾಮಾನ್ಯವಾಗಿ ಬೆಕ್ಕು ನಮ್ಮ ಹಾದಿಯನ್ನು ದಾಟಿದರೆ ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ನಂಬಿಕೆಯನ್ನು ನಾರದ ಪುರಾಣವು ಉಲ್ಲೇಖಿಸಿದೆ. ಆದರೆ ಇನ್ನು ಕೆಲವು ಪ್ರಾಣಿಗಳು ನಮ್ಮ ದಾರಿಯಲ್ಲಿ ಬಂದರೆ ವಿವಿಧ ರೀತಿಯ ಸಂಕೇತವನ್ನು ನೀಡುತ್ತದೆ ಎನ್ನಲಾಗುತ್ತದೆ. ಅಂತಹ ಪ್ರಾಣಿಗಳು ಯಾವುದು, ಅವುಗಳು ನಮಗೆ ಅದೃಷ್ಟ ವನ್ನು ತರುತ್ತದೋ ಅಥವಾ ದುರಾದೃಷ್ಟವನ್ನೋ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಮುಂಗುಸಿ
ದಾರಿಯಲ್ಲಿ ಮುಂಗುಸಿ ಸಿಕ್ಕರೆ ತಕ್ಷಣ ನಿಲ್ಲಬೇಕು. ಮುಂದೆ ಸಾಗಬಾದರು. ಅಂದರೆ ಪ್ರತಿಸ್ಪರ್ಧಿಗಳು ನಮ್ಮ ಕಾರ್ಯಗಳಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂಬುದರ ಸಂಕೇತ ಅದು.
ಹಸುಗಳ ಹಿಂಡು
ಹಸುಗಳ ಹಿಂಡು ಮಾರ್ಗಕ್ಕೆ ಅಡ್ಡ ಬಂದರೆ ಅವುಗಳು ಹೋಗುವ ತನಕ ಕಾಯಬೇಕು. ಈ ವಿರಾಮವು ಮುಂಬರುವ ಎದುರಾಗುವ ತೊಂದರೆಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗುತ್ತದೆ.
ಇದನ್ನೂ ಓದಿ: Bhavishya: ಅಂಗೈಯಲ್ಲಿರುವ ʼಹೃದಯ ರೇಖೆಗಳುʼ ನಿಮ್ಮ ವ್ಯಕ್ತಿತ್ವ ಏನೆಂದು ಹೇಳುತ್ತವೆ; ಚೆಕ್ ಮಾಡಿ ನೋಡಿ!
ಕೆಸರಿನಿಂದ ತುಂಬಿರುವ ನಾಯಿ
ಮನೆಯಿಂದ ಹೊರಡುವಾಗ ಮಣ್ಣು ಮೆತ್ತಿಕೊಂಡಿರುವ ನಾಯಿಯನ್ನು ನೋಡುವುದು ಸಾಮಾನ್ಯವಾಗಿ ಅಶುಭ ಲಕ್ಷಣ ಎಂದು ಹೇಳಲಾಗುತ್ತದೆ. ಇದು ಭವಿಷ್ಯದಲ್ಲಿ ಸಂಭವನೀಯ ತೊಂದರೆಗಳಿಗೆ ಮುನ್ಸೂಚನೆಯಾಗಿರುತ್ತದೆ ಎಂಬ ನಂಬಿಕೆ ಇದೆ.
ಕಪ್ಪು ಬೆಕ್ಕು
ಕಪ್ಪು ಬೆಕ್ಕುಗಳನ್ನು ಸಾಂಪ್ರದಾಯಿಕವಾಗಿ ದುರದೃಷ್ಟ ಎನ್ನಲಾಗುತ್ತದೆ. ವಿಶೇಷವಾಗಿ ಅವು ನಮ್ಮ ದಾರಿಯನ್ನು ದಾಟಿದರೆ ಅದರಿಂದ ಮುಂದೆ ನಾವು ಮಾಡಬೇಕಿರುವ ಕೆಲಸ ಆಗುವುದಿಲ್ಲ ಎನ್ನಲಾಗುತ್ತದೆ. ಕೆಲವು ಸಂಸ್ಕೃತಿಗಳಲ್ಲಿ ಕಪ್ಪು ಬೆಕ್ಕುಗಳು ದುಷ್ಟಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಪರಿಗಣಿಸಲಾಗಿದೆ.
ಕಾಗೆಗಳು
ಮನೆ ಹತ್ತಿರ ಕಾಗೆಯೊಂದು ನಿರಂತರ ಕಾಣಿಸಿಕೊಂಡರೆ ಅವು ದುರದೃಷ್ಟ ತರುತ್ತದೆ ಅಥವಾ ಸಾವಿನ ಸೂಚನೆ ಎನ್ನಲಾಗುತ್ತದೆ. ಇನ್ನು ಕೆಲವರು ಕಾಗೆಗಳು ಅದೃಷ್ಟದ ಸಂದೇಶವಾಹಕಗಳು ಎಂದು ನಂಬುತ್ತಾರೆ.
ಲೇಡಿಬಗ್
ಲೇಡಿಬಗ್ ಎಂದು ಕರೆಯಲ್ಪಡುವ ಚಿಕ್ಕ ಕೀಟ ಅದೃಷ್ಟ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರ ಉಪಸ್ಥಿತಿಯು ಉತ್ತಮ ಹವಾಮಾನ, ಸಮೃದ್ಧವಾದ ಸುಗ್ಗಿಯನ್ನು ತರುತ್ತದೆ, ಮನೆಯಲ್ಲಿ ಮಕ್ಕಳಾಗುತ್ತದೆ ಎಂದು ನಂಬಲಾಗುತ್ತದೆ.
ಗೂಬೆ
ಅನೇಕ ಸಂಸ್ಕೃತಿಗಳಲ್ಲಿ ಗೂಬೆಗಳನ್ನು ಸಾಮಾನ್ಯವಾಗಿ ದುರದೃಷ್ಟದ ಶಕುನವೆಂದು ಪರಿಗಣಿಸಲಾಗುತ್ತದೆ. ಅವುಗಳ ಕೂಗು ಸಾವು ಅಥವಾ ದುರದೃಷ್ಟವನ್ನು ಸೂಚಿಸುತ್ತವೆ ಎಂದು ಭಾವಿಸಲಾಗಿದೆ.
ನವಿಲು
ನವಿಲುಗಳು ಗರಿ ಬಿಚ್ಚಿ ಕುಣಿಯುವುದನ್ನು ನೋಡಿದರೆ ಅದೃಷ್ಟ ಎಂದು ಭಾವಿಸಲಾಗುತ್ತದೆ. ಅವುಗಳ ಗರಿಗಳನ್ನು ಮನೆಯಲ್ಲಿ ತಂದು ಇರಿಸಿದರೆ ಕೆಟ್ಟ ಶಕ್ತಿಗಳು ದೂರವಾಗಿ, ನಮ್ಮನ್ನು ರಕ್ಷಿಸುತ್ತವೆ ಎಂದು ಭಾವವಿಸಲಾಗುತ್ತದೆ.
ಮೊಲಗಳು
ಮೊಲಗಳು ಸಾಮಾನ್ಯವಾಗಿ ಅದೃಷ್ಟದ ಸಂಕೇತ ಎಂದು ಭಾವಿಸಲಾಗುತ್ತದೆ. ಅನೇಕ ಸಂಸ್ಕೃತಿಗಳಲ್ಲಿ, ಮೊಲವನ್ನು ನೋಡುವುದು ಫಲವತ್ತತೆ, ಸಮೃದ್ಧಿಯನ್ನು ಸೂಚಿಸುತ್ತದೆ.
ಜೇಡ
ಒಳ್ಳೆಯ ಮತ್ತು ಕೆಟ್ಟ ಶಕುನಗಳಾಗಿ ಜೇಡವನ್ನು ಕಾಣಲಾಗುತ್ತದೆ. ಕೆಲವು ಸಂಸ್ಕೃತಿಗಳಲ್ಲಿ, ಜೇಡವನ್ನು ಗುರುತಿಸುವುದು ಅದೃಷ್ಟ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಿದ್ದರೆ ಇನ್ನು ಕೆಲವರು ಇದು ದುರದೃಷ್ಟ ಮತ್ತು ಮೋಸವನ್ನು ಸೂಚಿಸುತ್ತದೆ ಎನ್ನುತ್ತಾರೆ.