Site icon Vistara News

Vastu Tips: ವಿದ್ಯುತ್ ಕಂಬದಿಂದ ಮನೆಗೆ ನಕಾರಾತ್ಮಕ ಶಕ್ತಿ ತಟ್ಟಬಹುದು ಎನ್ನುತ್ತಾರೆ ವಾಸ್ತು ಪರಿಣತರು!

Vastu Tips

ಮನೆಯಲ್ಲಿ ಬರುವ ಪ್ರತಿಯೊಂದು ಸಮಸ್ಯೆಯ ಹಿಂದೆ ಒಂದಲ್ಲ ಒಂದು ಕಾರಣ ಇದ್ದೇ ಇರುತ್ತದೆ. ಆದರೆ ಎಲ್ಲದಕ್ಕೂ ಒಂದು ಪರಿಹಾರವಿರುತ್ತದೆ. ಮನೆಯ (home) ಬಹುತೇಕ ಸಮಸ್ಯೆಗಳಿಗೆ ವಾಸ್ತು ಶಾಸ್ತ್ರದಲ್ಲಿ (Vastu Tips) ಪರಿಹಾರ ಇದ್ದೆ ಇದೆ. ಇವತ್ತು ವಿದ್ಯುತ್ (Electricity Poles) ಎಲ್ಲ ಮನೆಗಳಿಗೂ ಅನಿವಾರ್ಯವಾಗಿದೆ. ಒಂದು ದಿನ ಕರೆಂಟ್ ಕೈಕೊಟ್ಟರೆ ನಮ್ಮ ಎಲ್ಲ ಕೆಲಸಗಳು ನಿಂತಂತ ಅನುಭವವಾಗುತ್ತದೆ. ಹೀಗಾಗಿ ಬಹುತೇಕ ಮನೆಗೆ ಸಮೀಪದಲ್ಲೇ ವಿದ್ಯುತ್ ಕಂಬಗಳಿರುತ್ತವೆ. ಈ ವಿದ್ಯುತ್ ಕಂಬಗಳು ಮನೆಗೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಈ ಸಮಸ್ಯೆಯನ್ನು ಪರಿಹರಿಸಲು ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ನಿಯಮಗಳಿವೆ.

ವಾಸ್ತು ತಜ್ಞೆ ಶ್ರದ್ಧಾ ಶರ್ಮಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿನ ಇತ್ತೀಚಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮನೆಯ ಸಮೀಪ ವಿದ್ಯುತ್ ಕಂಬಗಳಿದ್ದರೆ ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶಿಸದಂತೆ ಹೇಗೆ ತಡೆಯಬಹುದು ಎಂಬುದನ್ನು ಹೇಳಿಕೊಂಡಿದ್ದಾರೆ. ಅಲ್ಲದೇ ಮನೆಗಳಿಗೆ ನಕಾರಾತ್ಮಕ ಶಕ್ತಿ ಪ್ರವೇಶಿಸದಂತೆ ಎದುರಿಸುವುದು ಹೇಗೆ ಎಂಬುದರ ಕುರಿತು ಕೆಲವು ಪ್ರಾಯೋಗಿಕ ಸಲಹೆಗಳನ್ನು ನೀಡಿದ್ದಾರೆ.

ವಿಶೇಷವಾಗಿ ವಿದ್ಯುತ್ ಕಂಬಗಳ ಬಗ್ಗೆ ಹೇಳಿರುವ ಅವರು, ಮನೆ ಸಮೀಪದಲ್ಲಿ ವಿದ್ಯುತ್ ಕಂಬಗಳಿದ್ದರೆ ಮನೆಯಲ್ಲಿ ಸಾಮರಸ್ಯದ ಕೊರತೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.ಹೆಚ್ಚಿನ ಮನೆಯವರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಮನೆಯ ಹೊರಗೆ ವಿದ್ಯುತ್ ಕಂಬದ ಉಪಸ್ಥಿತಿ. ವಿಶೇಷವಾಗಿ ಅದು ಸಾಕಷ್ಟು ತಂತಿಗಳಿಂದ ತುಂಬಿದ್ದರೆ ಮನೆಯಲ್ಲಿ ಜಗಳಗಳು, ಅನಾರೋಗ್ಯ ಅಥವಾ ಬಡತನಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಶರ್ಮಾ.

ವಿದ್ಯುತ್ ಕಂಬಗಳ ಪ್ರತಿಕೂಲವಾದ ಕಂಪನಗಳು ವಿವಾದಗಳು ಮತ್ತು ಸಮಸ್ಯೆಗಳಿಗೆ ಸಂಬಂಧಿಸಿದ ರಾಹು ಮತ್ತು ಮಂಗಳದಂತಹ ಪ್ರತಿಕೂಲವಾದ ಗ್ರಹಗಳ ಪ್ರಭಾವಗಳನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.


ಅಂತಹ ದುಷ್ಪರಿಣಾಮಗಳನ್ನು ಸರಿದೂಗಿಸಲು ಸರಳವಾದ ವಾಸ್ತು ಪರಿಹಾರವಿದೆ ಎಂದು ತಿಳಿಸಿರುವ ಶರ್ಮಾ, ಮನೆಯ ಮುಖ್ಯ ಬಾಗಿಲಿನ ದ್ವಾರದಲ್ಲಿ ಹನುಮಂತನ ವಿಗ್ರಹವನ್ನು ಇರಿಸಿ. ಭಗವಾನ್ ಹನುಮಂತನನ್ನು ವಾಸ್ತುವಿನಲ್ಲಿ ಋಣಾತ್ಮಕ ಶಕ್ತಿಗಳನ್ನು ಹೋಗಲಾಡಿಸುವ ಮತ್ತು ಮನೆಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರುವ ದೇವರೆಂದು ಪರಿಗಣಿಸಲಾಗಿದೆ. ಆದ್ದರಿಂದ, ಪವಿತ್ರ ವಿಗ್ರಹ ಸ್ಥಾಪನೆಯು ರಾಹು ಮತ್ತು ಮಂಗಳನ ಎಲ್ಲಾ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಜೀವನದಲ್ಲಿ ಶಾಂತಿ ಮತ್ತು ಸಮತೋಲನ ಇರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Shravan 2024: ಶ್ರಾವಣ ಶನಿವಾರದ ವಿಶೇಷ ಏನು? ಇದನ್ನು ಹೇಗೆ ಆಚರಿಸಿದರೆ ದೋಷ ನಿವಾರಣೆಯಾಗುತ್ತದೆ?

ಅಲ್ಲದೇ ಮನೆಯನ್ನು ಚಿಕ್ಕದಾಗಿ, ಚೊಕ್ಕವಾಗಿ ಇರಿಸಿಕೊಳ್ಳುವುದು ಅಗತ್ಯ ಎಂದು ಹೇಳಿರುವ ಶರ್ಮಾ, ಇದು ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ಆಹ್ವಾನಿಸಲು ಮತ್ತು ನಿರ್ವಹಿಸಲು ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಮತ್ತು ಸಮೃದ್ಧಿಗಾಗಿ ಮನೆಯೊಳಗೇ ನಕಾರಾತ್ಮಕ ಶಕ್ತಿಯು ಬಾಹ್ಯ ಮೂಲಗಳಿಂದ ಪ್ರವೇಶಿಸದಂತೆ ತಡೆಯುವುದು ಬಹುಮುಖ್ಯ ಎಂದು ತಿಳಿಸಿರುವ ಅವರು, ವಾಸ್ತವವಾಗಿ ಮನೆಯೊಳಗೆ ಸುಧಾರಿತ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನಗಳನ್ನು ಪಡೆಯುವುದು ಬಹುಮುಖ್ಯ ಎಂದಿದ್ದಾರೆ.

Exit mobile version