Site icon Vistara News

Vastu Tips: ಅಪ್ಪಿತಪ್ಪಿಯೂ ಮನೆಯಲ್ಲಿ ಈ ವಸ್ತುಗಳನ್ನು ಖಾಲಿ ಇಡಬೇಡಿ!

Vastu Tips

ವಾಸ್ತು ನಿಯಮಗಳು (Vastu Tips) ಮನೆಯಲ್ಲಿ ಧನಾತ್ಮಕತೆಯನ್ನು (positivity) ಆಕರ್ಷಿಸುವ ಹಲವಾರು ಮಾರ್ಗಸೂಚಿಗಳನ್ನು ತಿಳಿಸುತ್ತದೆ. ಇವುಗಳನ್ನು ಪಾಲಿಸದೇ ಇದ್ದರೆ ಮನೆಯಲ್ಲಿ ಸಂಕಷ್ಟ, ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮನೆಯಲ್ಲಿ ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ಮಾಡುವ ತಪ್ಪುಗಳು ಇಡೀ ಕುಟುಂಬದ ಮೇಲೆ ನಕಾರಾತ್ಮಕ (negative) ಪರಿಣಾಮ ಬೀರಲು ಕಾರಣವಾಗುತ್ತದೆ. ಅಂತಹ ತಪ್ಪುಗಳು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಹೆಚ್ಚು ಸಮಯ ಬೇಕಿಲ್ಲ. ನಾವು ಮಾಡುವ ಸಣ್ಣ ತಪ್ಪುಗಳು ಸಾಕು. ಇದರಲ್ಲಿ ಮುಖ್ಯವಾಗಿ ಕೆಲವು ವಸ್ತುಗಳನ್ನು ಮನೆಯಲ್ಲಿ ಖಾಲಿ ಇಡಬಾರದು ಎಂಬ ನಿಯಮವಿದೆ. ಇದರಿಂದ ನೆರವಾಗಿ ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಕೆಲವು ವಸ್ತುಗಳನ್ನು ಖಾಲಿಯಾಗಿ ಇರಿಸಿದರೆ ಮನೆಯ ನಿವಾಸಿಗಳು ಆರ್ಥಿಕ ನಷ್ಟ ಮತ್ತು ದುರದೃಷ್ಟವನ್ನು ಅನುಭವಿಸಬೇಕಾಗುತ್ತದೆ.


ಪರ್ಸ್, ಬ್ಯಾಗ್, ತಿಜೋರಿ

ಪರ್ಸ್, ಬ್ಯಾಗ್ ಮತ್ತು ತಿಜೋರಿಗಳನ್ನು ಯಾವತ್ತಿಗೂ ಖಾಲಿಯಾಗಿಸಿ ಇಡಬಾರದು. ಈ ಕುರಿತು ವಾಸ್ತು ನಿಯಮಗಳನ್ನು ಅನುಸರಿಸುವುದು ಬಹುಮುಖ್ಯ. ಯಾವತ್ತೂ ಇವುಗಳಲ್ಲಿ ಒಂದಿಷ್ಟು ನಗದು ಇರುವುದನ್ನು ಖಚಿತಪಡಿಸಿಕೊಳ್ಳಿ.

ಪರ್ಸ್, ಬ್ಯಾಗ್, ತಿಜೋರಿ ಖಾಲಿ ಆದರೆ ನಷ್ಟಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಹಣವನ್ನು ಯಾವತ್ತೂ ಇಟ್ಟುಕೊಂಡಿರಬೇಕು. ಜೊತೆಗೆ ಕೆಂಪು ಬಟ್ಟೆಯಲ್ಲಿ ಗೋಮತಿ ಚಕ್ರ ಮತ್ತು ಅರಿಶಿನವನ್ನು ಕಟ್ಟಿ ಇಡಬೇಕು. ಇದರಿಂದ ಪರ್ಸ್, ಬ್ಯಾಗ್, ತಿಜೋರಿ ಯಾವತ್ತೂ ಖಾಲಿಯಾಗುವುದಿಲ್ಲ. ಇದರಿಂದ ಲಕ್ಷ್ಮಿ ದೇವಿಯೂ ಪ್ರಸನ್ನಳಾಗಿರುತ್ತಾಳೆ ಎಂಬ ನಂಬಿಕೆ ಇದೆ.


ಬಾತ್ ರೂಮ್‌ನಲ್ಲಿನ ಬಕೆಟ್

ಬಾತ್ ರೂಮ್‌ನಲ್ಲಿ ಬಕೆಟ್‌ಗಳನ್ನು ಎಂದಿಗೂ ಖಾಲಿಯಾಗಿ ಇಡಬಾರದು. ಬಾತ್ ರೂಮ್ ಬಕೆಟ್‌ನಲ್ಲಿ ನೀರಿಲ್ಲದಿದ್ದಾಗ ನಕಾರಾತ್ಮಕ ಶಕ್ತಿಯು ತ್ವರಿತವಾಗಿ ಮನೆಗೆ ಪ್ರವೇಶಿಸುತ್ತದೆ. ಅಲ್ಲದೇ ಬಾತ್ ರೂಮ್ ನಲ್ಲಿ ಮುರಿದ ಅಥವಾ ಕಪ್ಪು ಬಕೆಟ್ ಅನ್ನು ಎಂದಿಗೂ ಬಳಸಬೇಡಿ. ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಮತ್ತು ವಾಸ್ತು ದೋಷಗಳು ಉಂಟಾಗುತ್ತವೆ.


ಪೂಜಾ ಕೊಠಡಿಯಲ್ಲಿ ನೀರಿನ ಪಾತ್ರೆ

ಮನೆಯ ಅತ್ಯಂತ ಪವಿತ್ರವಾದ ಜಾಗ ಪೂಜಾ ಕೋಣೆ. ವಾಸ್ತು ಶಾಸ್ತ್ರವು ಭಕ್ತಿಯ ಸ್ಥಳದಲ್ಲಿ ನೀರಿನ ಪಾತ್ರೆಯನ್ನು ಎಂದಿಗೂ ಖಾಲಿ ಬಿಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನೀರಿಲ್ಲದ ಕಲಶವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವಾಗಲೂ ಕಲಶದ ಪಾತ್ರೆಯಲ್ಲಿ ನೀರು ತುಂಬಿಡಲೇಬೇಕು. ಸ್ವಲ್ಪ ನೀರು, ಗಂಗಾಜಲ ಮತ್ತು ತುಳಸಿ ಎಲೆಗಳನ್ನು ಹಾಕಿ ಇಡಬೇಕು. ಇದರಿಂದ ಕುಟುಂಬದ ಮೇಲೆ ದೇವರ ಅನುಗ್ರಹ ಸದಾ ಇರುತ್ತದೆ. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿಯೂ ನೆಲೆಸುತ್ತದೆ.

ಇದನ್ನೂ ಓದಿ: Vastu Tips: ಮನೆ ಸಂತೋಷದ ತಾಣವಾಗಬೇಕೆಂದರೆ ಮಲಗುವ ಕೋಣೆ ಹೀಗಿರಲಿ


ಧಾನ್ಯದ ಡಬ್ಬಿ

ಮನೆಯಲ್ಲಿ ಅನ್ನಪೂರ್ಣ ದೇವಿಯು ಅಡುಗೆಮನೆಯಲ್ಲಿ ವಾಸಿಸುತ್ತಾಳೆ ಎನ್ನಲಾಗುತ್ತದೆ. ದೇವಿಯ ಆಶೀರ್ವಾದ ಧಾನ್ಯದ ಮೇಲೆ ಇರುತ್ತದೆ. ಹೀಗಾಗಿ ಮನೆಯಲ್ಲಿ ಯಾವತ್ತೂ ಧಾನ್ಯಗಳ ಡಬ್ಬಿಯನ್ನು ಖಾಲಿ ಬಿಡಬಾರದು. ಖಾಲಿ ಬಿಟ್ಟರೆ ದುರದೃಷ್ಟ ಮನೆಗೆ ಬರುತ್ತದೆ ಎನ್ನುತ್ತದೆ ವಾಸ್ತು ನಿಯಮ.

Exit mobile version