Site icon Vistara News

Vastu Tips: ಉದ್ಯೋಗದಲ್ಲಿ ಪ್ರಗತಿ ಸಾಧಿಸಬೇಕೆ? ಹೀಗೆ ಮಾಡಿ

Vastu Tips

ಮಾಡುವ ಕೆಲಸಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕೆಲವೊಮ್ಮೆ ದೊಡ್ಡ ಅನಾಹುತಕ್ಕೂ ಕಾರಣವಾಗಬಹುದು. ಕೆಲಸದಲ್ಲಿ (job) ಯಶಸ್ಸು ಸದಾ ದೊರೆಯಬೇಕು ಎನ್ನುವುದು ಎಲ್ಲರ ಆಸೆ. ಎಲ್ಲರ ಜೀವನದಲ್ಲೂ ವೃತ್ತಿ ಪ್ರಗತಿಗೆ (career progress) ಹಲವು ರೀತಿಯ ಸವಾಲುಗಳು ಎದುರಾಗುತ್ತವೆ. ಕೆಲವು ವಾಸ್ತು ಪರಿಹಾರಗಳನ್ನು (Vastu Tips) ಮಾಡುವುದರಿಂದ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಿಕೊಳ್ಳಬಹುದು.

ವಾಸ್ತು ಶಾಸ್ತ್ರದಲ್ಲಿ ಶಕ್ತಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅದೃಷ್ಟವನ್ನು ಪಡೆಯಲು ವಾಸ್ತುವಿನಲ್ಲಿ ಅನೇಕ ಪರಿಹಾರಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರವು ಮನೆಗಳಿಗೆ ಮಾತ್ರವಲ್ಲದೆ ವೃತ್ತಿಜೀವನಕ್ಕೂ ಮುಖ್ಯವಾಗಿದೆ. ವೃತ್ತಿಯಲ್ಲಿ ಯಶಸ್ಸನ್ನು ತಂದುಕೊಳ್ಳಲು ಹಲವು ವಾಸ್ತು ಪರಿಹಾರಗಳನ್ನು ಸೂಚಿಸಲಾಗಿದೆ.

ದಿಕ್ಕು ಮುಖ್ಯ

ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಕೆಲಸ ಮಾಡಲು ತೊಂದರೆ ಎದುರಾಗುತ್ತಿದ್ದರೆ ಮನೆಯ ಉತ್ತರ ಗೋಡೆಯ ಮೇಲೆ ಮುಖ್ಯ ಕನ್ನಡಿಯನ್ನು ಇರಿಸಿ. ಈ ಕನ್ನಡಿ ಎಷ್ಟು ದೊಡ್ಡದಾಗಿರಬೇಕು ಎಂದರೆ ನಿಮ್ಮ ಇಡೀ ದೇಹವು ಅದರಲ್ಲಿ ಗೋಚರಿಸಬೇಕು. ಈ ವಾಸ್ತು ಪರಿಹಾರವನ್ನು ಮಾಡುವುದರಿಂದ ನಿಮಗೆ ಶೀಘ್ರದಲ್ಲೇ ಕೆಲಸ ಸಿಗುತ್ತದೆ.

ಮನೆಯ ಮಧ್ಯಭಾಗ

ಮನೆಯ ಮಧ್ಯಭಾಗವು ಬ್ರಹ್ಮಸ್ಥಾನವಾಗಿದೆ. ಇದನ್ನು ಗುರು ಗ್ರಹದ ಸ್ಥಳವೆಂದೂ ಪರಿಗಣಿಸಲಾಗಿದೆ. ಗುರುವು ಬಲವಾಗಿದ್ದರೆ, ನಿಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತೀರಿ. ಇದಕ್ಕಾಗಿ, ಮನೆಯ ಮಧ್ಯದಲ್ಲಿ ಕೆಲವು ಭಾರವಾದ ವಸ್ತುಗಳನ್ನು ಇರಿಸಿ. ಇದು ವೃತ್ತಿಜೀವನದಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ.


ರುದ್ರಾಕ್ಷಿ

ಉದ್ಯೋಗ ಪಡೆಯಲು ರುದ್ರಾಕ್ಷಿಯನ್ನು ಧರಿಸುವುದು ಉತ್ತಮ ಆಯ್ಕೆಯಾಗಿದೆ. ಉದ್ಯೋಗ ಪಡೆಯಲು ಏಕಮುಖ, ಹತ್ತು ಮುಖ ಅಥವಾ ಹನ್ನೊಂದು ಮುಖದ ರುದ್ರಾಕ್ಷವನ್ನು ಧರಿಸಿ. ಮಾಂಸ ಮತ್ತು ಮದ್ಯ ಸೇವಿಸುವವರು ರುದ್ರಾಕ್ಷವನ್ನು ಧರಿಸಬಾರದು ಎಂಬುದು ನೆನಪಿರಲಿ.

ಮಲಗುವ ಕೋಣೆ

ಮಲಗುವ ಕೋಣೆಯಲ್ಲಿ ಸಾಧ್ಯವಾದಷ್ಟು ಹಳದಿ ಬಣ್ಣವನ್ನು ಬಳಸಿ. ಹಳದಿ ಬಣ್ಣವು ಗುರು ಮತ್ತು ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ. ಈ ಎರಡೂ ದೇವತೆಗಳ ಆಶೀರ್ವಾದವನ್ನು ಪಡೆಯುವುದು ಉದ್ಯೋಗದ ಹಾದಿಯನ್ನು ಸುಗಮಗೊಳಿಸುತ್ತದೆ.

ಇದನ್ನೂ ಓದಿ: Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

ಕೆಂಪು ಬಣ್ಣ

ವಾಸ್ತು ಪ್ರಕಾರ ಕೆಂಪು ಬಣ್ಣವು ಯಾವಾಗಲೂ ಶುಭ ಫಲಿತಾಂಶಗಳನ್ನು ನೀಡುತ್ತದೆ. ಸಂದರ್ಶನಕ್ಕೆ ಹೋದಾಗ ಅಥವಾ ಉದ್ಯೋಗಕ್ಕಾಗಿ ಪರೀಕ್ಷೆಗೆ ಹೋದಾಗ ನಿಮ್ಮೊಂದಿಗೆ ಕೆಂಪು ಕರವಸ್ತ್ರವನ್ನು ಇಟ್ಟುಕೊಳ್ಳಿ. ಆ ದಿನ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ. ಇದು ಆ ಪರೀಕ್ಷೆ ಅಥವಾ ಸಂದರ್ಶನದಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.


ಗಣೇಶನನ್ನು ಪೂಜಿಸಿ

ಉದ್ಯೋಗಕ್ಕಾಗಿ ಪರೀಕ್ಷೆ ಅಥವಾ ಸಂದರ್ಶನಕ್ಕಾಗಿ ಹೊರಗೆ ಹೋದಾಗ ಮನೆಯಿಂದ ಹೊರಡುವ ಮೊದಲು ಯಾವಾಗಲೂ ಗಣೇಶನನ್ನು ಪೂಜಿಸಿ. ಅಂದು ಗಣಪತಿಗೆ ವೀಳ್ಯದೆಲೆಯನ್ನು ಅರ್ಪಿಸಿ ಪ್ರಸಾದವಾಗಿ ಸ್ವೀಕರಿಸಿ. ವಾಸ್ತು ಶಾಸ್ತ್ರದಲ್ಲಿ ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

Exit mobile version