Site icon Vistara News

Vastu Tips: ಮನೆಯಲ್ಲಿ ಚಪ್ಪಲಿ, ಶೂ ಎಲ್ಲೆಂದರಲ್ಲಿ ಇಟ್ಟು ಸಂಕಷ್ಟ ಮೈಮೇಲೆ ಎಳೆದುಕೊಳ್ಳಬೇಡಿ!

Vastu Tips

ಮನೆಯ (home) ಹೊರಗೆ ಸುತ್ತಾಡಲು ಬಳಸುವ ಬೂಟು ಮತ್ತು ಚಪ್ಪಲಿಗಳನ್ನು (shoes and slippers) ಮನೆಯೊಳಗೇ ಕೊಂಡೊಯ್ಯಬಾರದು ಎನ್ನುತ್ತಾರೆ ಹಿರಿಯರು. ಅಲ್ಲದೇ ಮನೆಯ ಮೆಟ್ಟಿಲ ಬಳಿ ಚಪ್ಪಲಿ ಇಡಬಾರದು, ಅಡ್ಡಾದಿಡ್ಡಿಯಾಗಿ ಚಪ್ಪಲಿಗಳನ್ನು ಇರಿಸಬಾರದು ಎನ್ನುವ ಶಾಸ್ತ್ರವೇ (Vastu Tips) ಇದೆ. ನಾವು ಮಾಡುವ ಸಣ್ಣಪುಟ್ಟ ಅಜಾಗರೂಕತೆಗಳು ಮನೆಯ ವಾಸ್ತುವಿಗೆ ದೋಷ ಉಂಟು ಮಾಡುತ್ತದೆ. ಚಪ್ಪಲಿಯನ್ನು ಇಡುವ ವಿಚಾರದಲ್ಲೂ ಇದು ಅನ್ವಯವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಶೂ ಮತ್ತು ಚಪ್ಪಲಿಗಳನ್ನು ಇಡಲು ವಾಸ್ತು ಸಲಹೆಗಳಿವೆ. ಬೂಟು ಮತ್ತು ಚಪ್ಪಲಿಗಳು ಅಲ್ಲೊಂದು ಇಲ್ಲೊಂದು ಬಿದ್ದಿರುವ ಮನೆಗಳಲ್ಲಿ ಎಂದಿಗೂ ಸಮೃದ್ಧಿ ಇರುವುದಿಲ್ಲ. ಇದರಿಂದ ವಾಸ್ತು ದೋಷವನ್ನು ಎದುರಿಸಬೇಕಾಗಬಹುದು ಎನ್ನುತ್ತದೆ ವಾಸ್ತುಶಾಸ್ತ್ರ.

ಅನೇಕ ಜನರು ತಮ್ಮ ಬೂಟು ಮತ್ತು ಚಪ್ಪಲಿಗಳನ್ನು ಮನೆಯಲ್ಲಿ ಎಲ್ಲಿಯಾದರೂ ತೆಗೆಯುತ್ತಾರೆ ಅಥವಾ ಅಲ್ಲೇ ಇಟ್ಟು ಬಿಡುತ್ತಾರೆ. ಇದನ್ನು ಮಾಡಲೇಬಾರದು. ಹೀಗೆ ಮಾಡುವುದು ನಿಮಗೂ, ಮನೆಗೂ ಒಳ್ಳೆಯದಲ್ಲ.

ಸುಖ, ಶಾಂತಿ, ಸಮೃದ್ಧಿಗಾಗಿ ಮನೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಈ ಬಾರಿ ನಾವು ಚಪ್ಪಲಿಗಳನ್ನು ಇಡುವ ವಿಚಾರದಲ್ಲಿ ವಾಸ್ತು ನಿಯಮಗಳ ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.


ಯಾವ ದಿಕ್ಕಿನಲ್ಲಿ ಇಡಬಾರದು?

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಪಾದರಕ್ಷೆ ಮತ್ತು ಚಪ್ಪಲಿಗಳನ್ನು ಇಡಬಾರದು. ಈ ದಿಕ್ಕಿನಲ್ಲಿ ಬೂಟು ಮತ್ತು ಚಪ್ಪಲಿಗಳನ್ನು ಇಟ್ಟುಕೊಳ್ಳುವುದರಿಂದ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.

ಎಲ್ಲಿ ಇಡಬೇಕು?

ಯಾವಾಗಲೂ ಬೂಟು ಮತ್ತು ಚಪ್ಪಲಿಗಳನ್ನು ಮುಚ್ಚಿರುವ ಬೀರುಗಳಲ್ಲಿ ಇಡಬೇಕು ಎನ್ನುತ್ತದೆ ವಾಸ್ತು ನಿಯಮ. ಚಪ್ಪಲಿಗಳು ನೆಗೆಟಿವ್ ಎನರ್ಜಿಯನ್ನು ಹೆಚ್ಚಿಸುವುದರಿಂದ ತೆರೆದ ಜಾಗದಲ್ಲಿ, ಮನೆಯ ಮೆಟ್ಟಿಲುಗಳ ಬಳಿ ಇಡಬಾರದು.

ಎಲ್ಲಿ ತೆಗೆಯಬಾರದು?

ಮನೆಯ ಬಾಗಿಲಿನ ಬಳಿ ಶೂ ಮತ್ತು ಚಪ್ಪಲಿಗಳನ್ನು ಬಿಚ್ಚಿಡುವ ಅಭ್ಯಾಸ ಹೆಚ್ಚಿನವರಿಗೆ ಇದೆ. ಈ ಅಭ್ಯಾಸ ಇದ್ದರೆ ಕೂಡಲೇ ಬದಲಾಯಿಸಿಕೊಳ್ಳಿ. ವಾಸ್ತು ನಿಯಮದ ಪ್ರಕಾರ ಮನೆಯ ಬಾಗಿಲ ಬಳಿ ಶೂ, ಚಪ್ಪಲಿಗಳನ್ನು ಎಂದಿಗೂ ತೆಗೆಯಬೇಡಿ. ಹೀಗೆ ಮಾಡುವುದರಿಂದ ಕೌಟುಂಬಿಕ ಕಲಹದ ಸಾಧ್ಯತೆ ಹೆಚ್ಚುತ್ತದೆ. ಕುಟುಂಬ ಸದಸ್ಯರ ನಡುವೆ ಜಗಳಗಳು ಉಂಟಾಗಬಹುದು.

ಇದನ್ನೂ ಓದಿ: Vastu Tips: ವಾಸ್ತು ಶಾಸ್ತ್ರದ ಪ್ರಕಾರ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಗಳು ಹೀಗಿರಬೇಕು


ಶೂ ರಾಕ್ ಎಲ್ಲಿ ಇಡಬೇಕು?

ಶೂ ರಾಕ್ ಗಳನ್ನು ಯಾವಾಗಲೂ ಮನೆಯ ಹೊರಗೆ ಇಡಬೇಕು. ಮನೆಯೊಳಗೆ ಶೂ ರಾಕ್ ಗಳನ್ನು ಇಡುವುದರಿಂದ ಪತಿ-ಪತ್ನಿಯರ ನಡುವೆ ಘರ್ಷಣೆಗಳು ಹೆಚ್ಚಾಗುತ್ತವೆ.

ಹೇಗಿಡಬೇಕು?

ಶೂ ಮತ್ತು ಚಪ್ಪಲಿಗಳನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು. ಯಾಕೆಂದರೆ ಇದು ಮನೆಯಲ್ಲಿ ರೋಗಗಳು ನೆಲೆಸುವಂತೆ ಮಾಡುತ್ತದೆ ಎನ್ನುತ್ತದೆ ವಾಸ್ತು ನಿಯಮ.

Exit mobile version