Site icon Vistara News

Vastu Tips: ಸ್ನಾನಗೃಹದಲ್ಲಿ ಯಾವ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ!

Vastu Tips

ನಾವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ಮನೆಯಲ್ಲಿ ವಾಸ್ತು (Vastu Tips) ದೋಷವನ್ನು ಉಂಟು ಮಾಡಿ ನಕಾರಾತ್ಮಕತೆಯ (Negativity) ಪ್ರವೇಶಕ್ಕೆ ಅನುಮತಿ ಮಾಡಿಕೊಡಬಹುದು. ಇನ್ನು ಕೆಲವು ನಿಯಮಗಳ ಪಾಲನೆಯಿಂದ ವಾಸ್ತು ದೋಷವನ್ನು (vastu dosha) ದೂರ ಮಾಡಬಹುದು ಮಾತ್ರವಲ್ಲ, ಮನೆಯೊಳಗೇ ಸುಖ, ಶಾಂತಿ, ಸಮೃದ್ಧಿ ಹೆಚ್ಚಳಕ್ಕೆ ಕಾರಣವಾಗಬಹುದು.

ವಾಸ್ತು ಶಾಸ್ತ್ರವು ಹಿಂದೂ ಧರ್ಮದ ಪ್ರಮುಖ ಭಾಗವಾಗಿದೆ. ಇದು ಭಾರತೀಯರ ಪ್ರಾಚೀನ ವಿಜ್ಞಾನವು ಹೌದು. ಜೀವನದಲ್ಲಿ ನಕಾರಾತ್ಮಕತೆಯನ್ನು ತೊಡೆದುಹಾಕಲು ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸಲು ಜೀವನದ ವಿವಿಧ ಅಂಶಗಳ ಕುರಿತು ಮಾರ್ಗಸೂಚಿಗಳನ್ನು ಇದು ಒದಗಿಸುತ್ತದೆ.

ಕೆಲವು ಪ್ರಾಚೀನ ತತ್ತ್ವ ಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಸಮೃದ್ಧಿಯನ್ನು ಉತ್ತೇಜಿಸಬಹುದು ಮತ್ತು ದುರದೃಷ್ಟವನ್ನು ತಪ್ಪಿಸಬಹುದು. ಮನೆಯ ಸ್ನಾನಗೃಹದಲ್ಲಿ ಮಾಡುವ ಕೆಲವು ತಪ್ಪುಗಳು ನಮ್ಮ ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ. ಅವು ಯಾವುದು, ಅವುಗಳಿಗೆ ವಾಸ್ತು ಶಾಸ್ತ್ರದಲ್ಲಿ ಸೂಚಿಸಿರುವ ಪರಿಹಾರಗಳೇನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.


ಖಾಲಿ ಬಕೆಟ್ ಇಟ್ಟುಕೊಳ್ಳಬೇಡಿ

ಖಾಲಿ ಬಕೆಟ್ ಅನ್ನು ಎಂದಿಗೂ ಸ್ನಾನಗೃಹದಲ್ಲಿ ಇಡಬಾರದು. ನೆರಳು ಗ್ರಹವಾದ ರಾಹುವು ಖಾಲಿ ಬಕೆಟ್‌ನಲ್ಲಿ ವಾಸಿಸುತ್ತಾನೆ. ವಾಸ್ತು ದೋಷ ಮತ್ತು ನಕಾರಾತ್ಮಕತೆಯನ್ನು ಇದು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ. ಇದು ಮಾನಸಿಕ ತೊಂದರೆ ಮತ್ತು ಆರ್ಥಿಕ ನಷ್ಟ ಎರಡನ್ನೂ ಉಂಟುಮಾಡಬಹುದು.

Vastu Tips


ಒದ್ದೆಯಾದ ಬಟ್ಟೆ ಇಡಬೇಡಿ

ಬಾತ್ ರೂಮ್‌ನಲ್ಲಿ ಒದ್ದೆಯಾದ ಬಟ್ಟೆಗಳನ್ನು ಬಿಡುವುದು ನಕಾರಾತ್ಮಕ ಶಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದು ಸೂರ್ಯ ದೋಷವನ್ನು ಉಂಟುಮಾಡುತ್ತದೆ. ಜೀವನದಲ್ಲಿ ಪ್ರಗತಿಗೆ ಅಡ್ಡಿಯಾಗುತ್ತದೆ.


ಒಡೆದ ಕನ್ನಡಿ ಇಡಬೇಡಿ

ಸ್ನಾನ ಗೃಹದಲ್ಲಿ ಮುರಿದ ಕನ್ನಡಿಗಳು ಗಂಭೀರವಾದ ವಾಸ್ತು ದೋಷಗಳನ್ನು ಉಂಟು ಮಾಡಬಹುದು. ಇದು ಆರ್ಥಿಕ ತೊಂದರೆಗಳಿಗೂ ಕಾರಣವಾಗಬಹುದು. ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ತಕ್ಷಣವೇ ಬಾತ್ ರೂಮ್ ನಿಂದ ಮುರಿದ ಕನ್ನಡಿಗಳನ್ನು ತೆಗೆದುಹಾಕಿ.


ನೀರು ಸೋರಿಕೆಯಾಗದಿರಲಿ

ಸ್ನಾನಗೃಹದಲ್ಲಿ ಯಾವುದೇ ಸೋರಿಕೆ ಅಥವಾ ತೊಟ್ಟಿಕ್ಕುವ ನಲ್ಲಿಗಳಿದ್ದರೆ ಕೂಡಲೇ ಸರಿಪಡಿಸಿ. ಯಾಕೆಂದರೆ ನೀರಿನ ವ್ಯರ್ಥ ಅಥವಾ ಸೋರಿಕೆಯು ಚಂದ್ರನ ದೋಷವನ್ನು ಉಂಟು ಮಾಡುತ್ತದೆ ಮತ್ತು ಲಕ್ಷ್ಮಿ ದೇವಿಯನ್ನು ಕೋಪಗೊಳಿಸುತ್ತದೆ. ಇದು ಮಾನಸಿಕ ಒತ್ತಡ ಮತ್ತು ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: Vastu Tips: ಮಲಗುವ ದಿಕ್ಕು ಸತಿಪತಿ ನಡುವಿನ ವಿರಸಕ್ಕೆ ಕಾರಣ ಆಗಬಹುದು!


ಬಕೆಟ್ ಬಣ್ಣ

ಬಾತ್ ರೂಮ್‌ನಲ್ಲಿ ಕಪ್ಪು ಬಕೆಟ್ ಅನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಯಾಕೆಂದರೆ ಇದು ಮನೆಗೆ ತೊಂದರೆಗಳನ್ನು ತರುತ್ತದೆ. ನೀಲಿ ಬಕೆಟ್ ಅನ್ನು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Exit mobile version