Site icon Vistara News

Vastu Tips: ಆರ್ಥಿಕ ಸಂಕಷ್ಟ ದೂರವಾಗಿ ಶ್ರೀಮಂತರಾಗಬೇಕೆ? ಈ ವಾಸ್ತು ನಿಯಮ ಪಾಲಿಸಿ

Vastu Tips

ಬದುಕು (life) ಚೆನ್ನಾಗಿ ಇರಬೇಕಾದರೆ ಸುಖ, ಶಾಂತಿ, ನೆಮ್ಮದಿ ಇರಬೇಕು. ಅದಕ್ಕೆ ನಮ್ಮ ಜೀವನದಲ್ಲಿ ಪ್ರತಿಯೊಂದು ಅಂಶವೂ (Vastu Tips) ಪ್ರಭಾವ ಬೀರುತ್ತದೆ. ಸುಖ, ಶಾಂತಿ, ನೆಮ್ಮದಿಯನ್ನು ಕೊಡುವ ಬದುಕಿನ ಪ್ರಮುಖ ಅಂಶಗಳಲ್ಲಿ ನಮ್ಮ ಹಣಕಾಸು (Finance) ಕೂಡ ಒಂದು.

ಜೀವನವು ಸುಗಮವಾಗಿ ಮುಂದುವರಿಯಲು ಮತ್ತು ಬೆಳೆಯಲು ಕೆಲವೊಂದು ತತ್ತ್ವಗಳಿಗೆ ಬದ್ಧವಾಗಿರಬೇಕಾಗುತ್ತದೆ. ಅದರಲ್ಲಿ ಆರ್ಥಿಕ ತತ್ತ್ವವೂ ಒಂದು. ಕೆಲವೊಂದು ವಾಸ್ತು ನಿಯಮಗಳನ್ನು ನಾವು ನಿರ್ಲಕ್ಷಿಸುವುದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಬಾಧಿಸುತ್ತವೆ.

ವಾಸ್ತು ಪರಿಹಾರಗಳನ್ನು ಮಾಡಿಕೊಂಡರೆ ನಾವು ಆರ್ಥಿಕ ತೊಂದರೆಯಿಂದ ಪಾರಾಗಬಹುದು. ಮನೆಯಲ್ಲಿ ವಾಸ್ತು ನಿಯಮಗಳನ್ನು ಅನುಸರಿಸಿದರೆ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಂತೋಷದಿಂದ ಎದುರಿಸಬಹುದು.


ಸೂರ್ಯ ಕಿರಣ ಮನೆಯೊಳಗೆ ಬರಲಿ

ಬೆಳಗ್ಗೆ ಎದ್ದ ಕೂಡಲೇ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಬೇಕು. ಸೂರ್ಯನ ಕಿರಣಗಳು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಇದರಿಂದ ಮನೆಗೆ ಸಂಪತ್ತಿನ ಹರಿವು ಸರಾಗವಾಗುತ್ತದೆ.

ಶಂಖ ಪೂಜಾ ಸ್ಥಳದಲ್ಲಿ ಇರಿಸಿ

ಮನೆಯ ಪೂಜಾ ಸ್ಥಳದಲ್ಲಿ ಶಂಖವನ್ನು ಇಟ್ಟುಕೊಂಡರೆ ಶ್ರೀಮಂತರಾಗಬೇಕು ಎನ್ನುವ ಕನಸು ಬಹುಬೇಗನೆ ನನಸಾಗುತ್ತದೆ.

ಸ್ವಚ್ಛತೆ

ಮನೆಯ ವಾತಾವರಣ ಸ್ವಚ್ಛ, ಸುಂದರ, ಸುರಕ್ಷಿತವಾಗಿದ್ದಾರೆ ಅದು ಶ್ರೀಮಂತರಾಗಲು ಸಹಾಯ ಮಾಡುತ್ತದೆ. ಮನೆಯಲ್ಲಿ ಸಮತೋಲಿತ ಶಕ್ತಿಗಾಗಿ ಸ್ವಚ್ಛಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ.


ನೀರು

ಮನೆಯಲ್ಲಿ ಟ್ಯಾಪ್ ನೀರು ಅನಗತ್ಯವಾಗಿ ಹರಿಯುತ್ತಿದ್ದರೆ ಸಾಧ್ಯವಾದಷ್ಟು ಬೇಗ ಅದನ್ನು ಸರಿಪಡಿಸಿ. ನೀರು ಸಂಪತ್ತಿನ ಮೂಲ ಎಂದು ನಂಬಲಾಗಿದೆ. ವಾಸ್ತು ಪ್ರಕಾರ ಟ್ಯಾಪ್‌ನಿಂದ ನೀರು ಹನಿ ಹನಿಯಾಗಿ ಹರಿದು ಹೋಗುವುದು ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆ.

ಪ್ರವೇಶ ದ್ವಾರ

ಮನೆಯಲ್ಲಿ ದಕ್ಷಿಣ ಗೋಡೆಯ ಪಕ್ಕದಲ್ಲಿ ಪ್ರವೇಶದ್ವಾರ ಉತ್ತರಕ್ಕೆ ಎದುರಾಗಿರು ಇರಬೇಕು. ಇದು ವಾಸ್ತು ಶಾಸ್ತ್ರದಲ್ಲಿ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: Vastu Tips: ಮನೆಯೊಳಗೆ ಎಲ್ಲೆಂದರಲ್ಲಿ ಕನ್ನಡಿ ಇಟ್ಟು ಕುಟುಂಬದ ನೆಮ್ಮದಿ ಹಾಳು ಮಾಡಬೇಡಿ!


ತುಳಸಿ

ಮನೆಯ ಮುಖ್ಯ ದ್ವಾರದಲ್ಲಿ ತುಳಸಿ ಗಿಡವನ್ನು ಇಡಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಇದಲ್ಲದೆ ಮನೆಯಲ್ಲಿ ತುಳಸಿ ಗಿಡಗಳಿದ್ದರೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ.

ಮುಳ್ಳು, ಹಾಲಿನ ಗಿಡಗಳು

ಮನೆಯಲ್ಲಿ ಕಳೆಗುಂದಿದ, ಮುಳ್ಳು ಅಥವಾ ಹಾಲು ಬರುವಂತ ಯಾವುದೇ ಸಸ್ಯಗಳಿದ್ದರೆ ತಕ್ಷಣವೇ ಅದನ್ನು ತೆಗೆದು ಹಾಕಿ. ಇವುಗಳು ಮನೆಯಲ್ಲಿ ಒತ್ತಡ ಮತ್ತು ಅಸ್ಥಿರ ಹಣಕಾಸು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು.

Exit mobile version