Site icon Vistara News

Vastu Tips: ನಿಮ್ಮ ಮಕ್ಕಳು ತುಂಬಾ ಹಠ ಮಾಡುತ್ತಾರಾ? ಇಲ್ಲಿದೆ ಸರಳ ಪರಿಹಾರ!

Vastu Tips

ಮನೆಯಲ್ಲಿ ಮಕ್ಕಳು ಹಠ (Stubborn Kid) ಮಾಡುವುದು, ಮೊಂಡುತನ ಪ್ರದರ್ಶಿಸುವುದು ಸಾಮಾನ್ಯ ಎಂದು ನಾವೆಂದುಕೊಳ್ಳುತ್ತೇವೆ. ಆದರೆ ಇದಕ್ಕೆ ಮನೆಯ ವಾಸ್ತು (Vastu Tips) ದೋಷವೂ ಕಾರಣವಾಗಿರುತ್ತದೆ. ಇದನ್ನು ತಿಳಿದುಕೊಂಡು ಸರಿಪಡಿಸಿಕೊಂಡರೆ ಮಕ್ಕಳ ಹಠವನ್ನು ನಿಯಂತ್ರಿಸಬಹುದು. ಅವರನ್ನು ಸಜ್ಜನ, ವಿನಯಶೀಲ ಮಗುವನ್ನಾಗಿ ಮಾಡಬಹುದು ಎನ್ನುತ್ತದೆ ವಾಸ್ತುಶಾಸ್ತ್ರ.

ಉತ್ತಮ ಸಲಹೆಗಳು ಮತ್ತು ಪರಿಹಾರಗಳನ್ನು ಹುಡುಕಲು ವಾಸ್ತು ಶಾಸ್ತ್ರ ಯಾವಾಗಲೂ ಜನರಿಗೆ ಸಹಾಯ ಮಾಡುತ್ತದೆ. ಇದರಲ್ಲಿ ಮಗುವಿಗೆ ಸಂಬಂಧಿಸಿ ಹಲವಾರು ಸಮಸ್ಯೆಗಳಿಗೆ ಪರಿಹಾರಗಳೂ ಇವೆ.

ಮಕ್ಕಳ ಬಗ್ಗೆ ಸಾಕಷ್ಟು ವಿಷಯಗಳು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ಬಂದರೂ ಅದು ಸಾಮಾನ್ಯ ಎಂದುಕೊಳ್ಳುತ್ತೇವೆ. ಮಕ್ಕಳ ಹಠ, ಗೊಂದಲ, ಖಿನ್ನತೆ ಆತಂಕಪಡುವ ವಿಷಯವಾಗಿದೆ.

ಮಕ್ಕಳ ಕೆಲವೊಂದು ವಿಚಾರಗಳಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ, ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ನಿಮ್ಮನ್ನು ಕಾಡಲು ಪ್ರಾರಂಭಿಸಿದರೆ ವಾಸ್ತು ಶಾಸ್ತ್ರ ಹೇಳಿರುವ ಮೂರು ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ. ನೀವು ಟ್ರೈ ಮಾಡಿ ನೋಡಬಹುದು.

ಹೆಚ್ಚು ಹಠ ಮಾಡುವ ಮಕ್ಕಳನ್ನು ನಿಯಂತ್ರಣದಲ್ಲಿ ಇಡಲು ವಾಸ್ತು ತಜ್ಞ ರಾಹುಲ್ ಅವರು ವಾಸ್ತು ನಿಯಮದಲ್ಲಿರುವ ಕೆಲವು ಸಲಹೆಗಳನ್ನು ಬಹಿರಂಗಪಡಿಸಿದ್ದಾರೆ.


1. ಬೆಳಗ್ಗೆ ಎದ್ದಾಕ್ಷಣ ಬೆಡ್ ಶೀಟ್ ಅನ್ನು ಮಡಚಿ ಸರಿಯಾಗಿ ಜೋಡಿಸಿ ಇಡಿ. ಚಪ್ಪಲಿಗಳು ಎಲ್ಲೆಲ್ಲಿ, ಅಂಕುಡೊಂಕಾಗಿದ್ದರೆ ಅದನ್ನು ಸರಿಪಡಿಸಿ.

2. ರುದ್ರಾಕ್ಷಿ, ಹರಳಿನ ಕಂಕಣವನ್ನು ಧರಿಸಿ. ಮೂರು ಬಾರಿ ಗಾಯತ್ರಿ ಮಂತ್ರವನ್ನು ಪಠಿಸಿ.

ಇದನ್ನೂ ಓದಿ: Vastu Tips: ಮನೆಯಲ್ಲಿ ಸಂಪತ್ತು ಸದಾ ತುಂಬಿರಬೇಕೆ? ಈ ನಿಯಮ ಪಾಲಿಸಿ

3. ಹಾಸಿಗೆಯ ಮೇಲೆ ಕುಳಿತು ಗಾಯತ್ರಿ ಮಂತ್ರವನ್ನು ಕನಿಷ್ಠ 11 ಬಾರಿ ಜಪಿಸಿ. ಮಗುವಿಗೂ ಪಠಿಸುವಂತೆ ಮಾಡಿ. ಇದನ್ನು ಕನಿಷ್ಠ 40 ದಿನಗಳವರೆಗೆ ಮಾಡಿ. ಇದರಿಂದ ಅದ್ಭುತ ಫಲಿತಾಂಶಗಳು ದೊರೆಯುವುದು.

ಗಾಯತ್ರಿ ಮಂತ್ರವು ಮಕ್ಕಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಮೆದುಳು ಸ್ಪಷ್ಟವಾಗಿ ಯೋಚಿಸುವಂತೆ ಮಾಡುತ್ತದೆ.

Exit mobile version