Site icon Vistara News

Vastu Tips: ನವ ದಂಪತಿಯ ಕೋಣೆ ಹೀಗಿದ್ದರೆ ದಾಂಪತ್ಯ ಸುಖಕರವಾಗಿರುತ್ತದೆ!

Vastu Tips

ಪ್ರತಿಯೊಬ್ಬರ ಜೀವನದಲ್ಲೂ ಮದುವೆಗೆ (marriage) ವಿಶೇಷ ಸ್ಥಾನವಿದೆ. ಬಾಳ ಸಂಗಾತಿಯಾಗಿ (life partner) ಬರುವವರನ್ನು ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಗೌರವದಿಂದ ಕಾಣಲು ಮದುವೆಯ ಶಾಸ್ತ್ರ, ನಿಯಮಗಳು ಕಾರಣವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಮದುವೆಯ ಬಳಿಕ ಸಂಬಂಧ ಹೆಚ್ಚು ಸುಖಕರ ಅಥವಾ ದುಃಖಕರವಾಗಿರಲು ಮನೆಯ (home) ವಾಸ್ತು (Vastu Tips) ಕೂಡ ಕಾರಣವಾಗುತ್ತದೆ. ವಿವಾಹದ ಬಳಿಕ ಮನೆಯಲ್ಲಿ ಪ್ರೀತಿ, ಸಾಮರಸ್ಯ, ನಂಬಿಕೆ ಮತ್ತು ಪರಸ್ಪರ ಗೌರವದ ಭಾವನೆ ಬೆಳೆಯಲು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೆಳೆಸಲು ವಾಸ್ತು ಶಾಸ್ತ್ರ ವು ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ನವವಿವಾಹಿತರ ಕೋಣೆ ಸರಿಯಾದ ದಿಕ್ಕಿನಲ್ಲಿರುವುದು ಕೂಡ ಮುಖ್ಯವಾಗಿದೆ. ಅಲ್ಲಿರುವ ಪ್ರತಿಯೊಂದು ವಸ್ತುವೂ ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನವ ವಿವಾಹಿತರ ಕೋಣೆ ಎಲ್ಲಿ, ಹೇಗಿರಬೇಕು ಗೊತ್ತೇ?

ಯಾವ ದಿಕ್ಕಿನಲ್ಲಿ ಇರಬಾರದು?

ನವ ವಿವಾಹಿತರ ಕೋಣೆಯು ಉತ್ತರ, ದಕ್ಷಿಣ, ಈಶಾನ್ಯ ಮತ್ತು ಆಗ್ನೇಯ ದಿಕ್ಕಿನ ಕಡೆಗೆ ದೃಷ್ಟಿಕೋನವನ್ನು ಹೊಂದಿರಬಾರದು. ಹೀಗಿದ್ದರೆ ವೈವಾಹಿಕ ಜೀವನದಲ್ಲಿ ಕ್ಷುಲ್ಲಕ ವಿಷಯಗಳಲ್ಲಿಯೂ ಸಹ ಸಂಘರ್ಷ ಮತ್ತು ವಿವಾದಗಳು ಉಂಟಾಗಬಹುದು ಎಂದು ನಂಬಲಾಗಿದೆ. ಆದ್ದರಿಂದ ವೈವಾಹಿಕ ಸಂಬಂಧದಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸಲು ಈ ದಿಕ್ಕಿನಲ್ಲಿರುವ ಕೋಣೆಯ ದಿಕ್ಕನ್ನು ಬದಲಾಯಿಸುವುದು ಉತ್ತಮ.

ಯಾವ ದಿಕ್ಕಿನಲ್ಲಿ ಇರಬೇಕು?

ಮದುವೆಯ ಅನಂತರ ವ್ಯಕ್ತಿಗಳು ತಮ್ಮ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಬಯಸುವುದು, ತಮ್ಮ ಸಂಗಾತಿಯೊಂದಿಗೆ ಪ್ರವಾಸಗಳನ್ನು ಆನಂದಿಸುವುದು ಮತ್ತು ಹೊಸ ಮತ್ತು ಸಕಾರಾತ್ಮಕ ಅನುಭವಗಳನ್ನು ಹುಡುಕುವುದು ಸಹಜ. ವಾಸ್ತು ಶಾಸ್ತ್ರದ ಪ್ರಕಾರ ನವವಿವಾಹಿತರು ಮಲಗುವ ಕೋಣೆ ವಾಯುವ್ಯ ದಿಕ್ಕಿನಲ್ಲಿರಬೇಕು. ಈ ದೃಷ್ಟಿಕೋನವು ವೈವಾಹಿಕ ಜೀವನದಲ್ಲಿ ಪ್ರಣಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ವಿವಿಧ ಜೀವನ ಸವಾಲುಗಳನ್ನು ಪರಿಹರಿಸುವಲ್ಲಿ ಅವರಿಗೆ ಇದು ಸಹಾಯ ಮಾಡುತ್ತದೆ.

ಬಣ್ಣಗಳು ಯಾವುದಿರಬೇಕು?

ಕೋಣೆಯ ಬಣ್ಣಗಳು ನಮ್ಮ ಭಾವನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಸಂಬಂಧದಲ್ಲಿ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಹೆಚ್ಚಿಸಲು ಮಲಗುವ ಕೋಣೆಯಲ್ಲಿ ಹಿತವಾದ ಮತ್ತು ರೋಮ್ಯಾಂಟಿಕ್ ಬಣ್ಣಗಳನ್ನು ಬಳಸಿ. ಗುಲಾಬಿ, ಕೆಂಪು ಮತ್ತು ನೇರಳೆ ಛಾಯೆಗಳನ್ನು ಪ್ರೀತಿ ಮತ್ತು ಉತ್ಸಾಹವನ್ನು ಪ್ರಚೋದಿಸಲು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಮೃದುವಾದ ನೀಲಿ ಬಣ್ಣವು ಶಾಂತ ಮತ್ತು ಪ್ರಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ. ನವ ದಂಪತಿಯ ನಡುವೆ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತದೆ.

ಅಲಂಕಾರಿಕ ವಸ್ತುಗಳು

ಕೆಲವು ಅಲಂಕಾರಿಕ ವಸ್ತು, ಗುರುತುಗಳು ಸಂಬಂಧದಲ್ಲಿ ಧನಾತ್ಮಕ ಶಕ್ತಿ ಮತ್ತು ಪ್ರೀತಿಯನ್ನು ವರ್ಧಿಸುತ್ತದೆ. ಪ್ರೀತಿ ಮತ್ತು ಒಗ್ಗಟ್ಟಿನ ಸಂಕೇತವಾಗಿ ಮಲಗುವ ಕೋಣೆಯ ನೈಋತ್ಯ ಮೂಲೆಯಲ್ಲಿ ಒಂದು ಜೋಡಿ ಲವ್ ಬರ್ಡ್ಸ್ ಅಥವಾ ಮ್ಯಾಂಡರಿನ್ ಬಾತುಕೋಳಿಗಳನ್ನು ಇರಿಸಿ. ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಹೂಬಿಡುವ ಗಿಡಗಳು ಅಥವಾ ಪ್ರಶಾಂತ ಭೂದೃಶ್ಯಗಳ ವರ್ಣಚಿತ್ರಗಳ ಕಲಾಕೃತಿಗಳಿಂದ ಕೋಣೆಯನ್ನು ಅಲಂಕರಿಸಿ.

ಇದನ್ನೂ ಓದಿ: Dina Bhavishya : ಗಾಳಿಯಲ್ಲಿ ಗೋಪುರ ಕಟ್ಟಿಕೊಂಡು ಈ ರಾಶಿಯವರು ವ್ಯರ್ಥ ಪ್ರಯತ್ನ ಮಾಡಬೇಡಿ

ಎಲೆಕ್ಟ್ರಾನಿಕ್ ವಸ್ತುಗಳನ್ನು ಇರಿಸಬೇಡಿ

ಕೋಣೆಯ ಅಸ್ತವ್ಯಸ್ತತೆಯು ಸಕಾರಾತ್ಮಕ ಶಕ್ತಿಯ ಹರಿವನ್ನು ಅಡ್ಡಿಪಡಿಸುತ್ತದೆ. ಅನಗತ್ಯ ಒತ್ತಡ ಮತ್ತು ಉದ್ವೇಗವನ್ನು ಉಂಟುಮಾಡುತ್ತದೆ. ಮಲಗುವ ಕೋಣೆ ಮತ್ತು ಮನೆ ಸ್ವಚ್ಛವಾಗಿದ್ದರೆ ಮನೆಯವರು ಹೆಚ್ಚು ಸಂಘಟಿತರಾಗಿದ್ದಾರೆ ಮತ್ತು ಗೊಂದಲದಿಂದ ಮುಕ್ತವಾಗಿದ್ದಾರೆ ಎಂಬುದು ಅರ್ಥ. ಟಿವಿ, ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಯಾಕೆಂದರೆ ಇವು ಶಾಂತಿಯುತ ವಾತಾವರಣಕ್ಕೆ ಅಡ್ಡಿಯಾಗಬಹುದು. ಅಚ್ಚುಕಟ್ಟಾದ ಮತ್ತು ಪ್ರಶಾಂತ ವಾತಾವರಣವು ಶಾಂತ ಮನಸ್ಸನ್ನು ಬೆಳೆಸುತ್ತದೆ. ಇದು ಆರೋಗ್ಯಕರ ಸಂಬಂಧಕ್ಕೆ ಅವಶ್ಯಕವಾಗಿದೆ.

Exit mobile version