Site icon Vistara News

Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

Vastu Tips

ಮನೆ (home) ಮತ್ತು ಅಂಗಡಿಯಲ್ಲಿ (store) ಧನಾತ್ಮಕ ಶಕ್ತಿ (Positive energy) ನೆಲೆಯಾಗಿದ್ದರೆ ಮಾತ್ರ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಕಾಣಲು ಸಾಧ್ಯ. ಇದಕ್ಕಾಗಿ ವಾಸ್ತು ನಿಯಮಗಳನ್ನು ಪಾಲಿಸುವುದು ಮುಖ್ಯ. ಮನೆ ಮತ್ತು ಅಂಗಡಿಯಲ್ಲಿ ವಾಸ್ತು ನಿಯಮಗಳನ್ನು (Vastu Tips) ಅನುಸರಿಸುವ ಮೂಲಕ ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಸಂತೋಷ ಮತ್ತು ಸಮೃದ್ಧಿಯ ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನೂ ಪಡೆಯಬಹುದು.

ಹೊಸ ಮನೆ ಅಥವಾ ಅಂಗಡಿಯನ್ನು ಖರೀದಿಸಲು ಹೋದಾಗ ವಿಶೇಷವಾಗಿ ವಾಸ್ತು ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳು ಯಾವುದು ಎಂಬುದು ತಿಳಿದುಕೊಳ್ಳೋಣ.

ದಿಕ್ಕುಗಳ ಬಗ್ಗೆ ತಿಳಿದಿರಲಿ

ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳಿಗೆ ವಿಶೇಷ ಗಮನ ನೀಡಲಾಗಿದೆ. ಮನೆ ಅಥವಾ ಅಂಗಡಿಯ ಮುಖ್ಯ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಮನೆಯಲ್ಲಿ ಪೂಜಾ ಸ್ಥಳವು ಈಶಾನ್ಯ ಮೂಲೆಯಲ್ಲಿದ್ದರೆ ಮಲಗುವ ಕೋಣೆ ನೈಋತ್ಯ ದಿಕ್ಕಿನಲ್ಲಿರಬೇಕು. ಅದೇ ಸಮಯದಲ್ಲಿ, ಅಡುಗೆಮನೆಯು ಅಗ್ನಿ ಮೂಲೆಯಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿರಬೇಕು.

ಆಕಾರ ಗಮನಿಸಿ

ಮನೆ ಅಥವಾ ಅಂಗಡಿಯ ಆಕಾರವು ಚೌಕ ಅಥವಾ ಆಯತಾಕಾರವಾಗಿರಬೇಕು. ಅನಿಯಮಿತ ಆಕಾರಗಳನ್ನು ಹೊಂದಿರುವ ಕಟ್ಟಡಗಳನ್ನು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ.


ಗಾಳಿ, ಬೆಳಕು

ಮನೆ ಅಥವಾ ಅಂಗಡಿಯಲ್ಲಿ ಸಾಕಷ್ಟು ಕಿಟಕಿಗಳು ಇರಬೇಕು. ಇದರಿಂದ ನೈಸರ್ಗಿಕ ಬೆಳಕು ಮತ್ತು ಗಾಳಿ ಪ್ರವೇಶಿಸಬೇಕು. ಇದಕ್ಕಾಗಿ ಕಿಟಕಿಗಳು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿರಬೇಕು.

ಮುಖ್ಯ ಬಾಗಿಲು

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲು ದೊಡ್ಡದಾಗಿರಬೇಕು ಮತ್ತು ಭವ್ಯವಾಗಿರಬೇಕು. ಮುಖ್ಯ ಬಾಗಿಲಿನ ಮುಂದೆ ಯಾವುದೇ ಅಡೆತಡೆಗಳು ಇರಬಾರದು. ಮನೆ ಅಥವಾ ಅಂಗಡಿಯ ಚಾವಣಿ ಸಮತಟ್ಟಾಗಿರಬೇಕು.

ಚಾವಣಿಯ ಮೇಲಿನ ಇಳಿಜಾರು

ಮನೆ, ಅಂಗಡಿಯ ಚಾವಣಿಯ ಮೇಲಿನ ಇಳಿಜಾರು ನೈಋತ್ಯ, ಈಶಾನ್ಯ ದಿಕ್ಕಿನಲ್ಲಿರಬೇಕು.

ಬಣ್ಣಗಳು

ವಾಸ್ತು ಪ್ರಕಾರ ಮನೆ ಅಥವಾ ಅಂಗಡಿಗೆ ತಿಳಿ ಮತ್ತು ಬಿಳಿ ಬಣ್ಣಗಳನ್ನು ಬಳಸಬೇಕು. ಈ ಬಣ್ಣಗಳು ಧನಾತ್ಮಕತೆಯನ್ನು ತರುತ್ತವೆ. ಇದು ವ್ಯವಹಾರದಲ್ಲಿ ಪ್ರಗತಿಯನ್ನು ಒದಗಿಸುವಲ್ಲಿ ಸಹಾಯಕವೆಂದು ಪರಿಗಣಿಸಲಾಗಿದೆ. ಕಡಿಮೆ ಪ್ರಮಾಣದಲ್ಲಿ ಗಾಢ ಬಣ್ಣಗಳನ್ನು ಬಳಸಿ.

ನೀರಿನ ಸಂಗ್ರಹ

ಮನೆ ಅಥವಾ ಅಂಗಡಿಯಲ್ಲಿ ನೀರಿನ ಸಂಗ್ರಹವು ಈಶಾನ್ಯ ದಿಕ್ಕಿನಲ್ಲಿರಬೇಕು. ಮನೆ ಅಥವಾ ಅಂಗಡಿಯಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇರಬೇಕು.

ಗಿಡಗಳು

ಮನೆ ಅಥವಾ ಅಂಗಡಿಯ ಸುತ್ತ ತುಳಸಿ, ಮನಿ ಪ್ಲಾಂಟ್, ಅಲೋವೆರಾ ಮುಂತಾದ ಮಂಗಳಕರ ಗಿಡಗಳನ್ನು ನೆಡಿ. ಮನೆ ಅಥವಾ ಅಂಗಡಿ ಸುತ್ತಮುತ್ತ ಮುಳ್ಳಿನ ಗಿಡಗಳನ್ನು ನೆಡಬಾರದು.

ಇದನ್ನೂ ಓದಿ: Vastu Tips: ಮನೆಯ ದ್ವಾರದಲ್ಲಿ ಗಣೇಶನ ವಿಗ್ರಹ ಇಡುವುದು ಸರಿಯೇ?


ಸಮೃದ್ಧಿ ತರುವ ವಸ್ತುಗಳು

ವ್ಯಾಪಾರದಲ್ಲಿ ಯಶಸ್ವಿಯಾಗಲು ಅಂಗಡಿಯಲ್ಲಿ ಶ್ರೀಯಂತ್ರ, ವ್ಯಾಪಾರ ವೃದ್ಧಿ ಯಂತ್ರ, ಸ್ಫಟಿಕ ಆಮೆ ಅಥವಾ ಸ್ಫಟಿಕ ಚೆಂಡನ್ನು ಇರಿಸಬಹುದು. ಇದು ಧನಾತ್ಮಕ ಶಕ್ತಿಯನ್ನು ತರುತ್ತದೆ. ಹೊಸ ಅಂಗಡಿಯನ್ನು ತೆಗೆದುಕೊಂಡಿದ್ದರೆ ಅದರಲ್ಲಿ ಪಾಂಚಜನ್ಯ ಶಂಖವನ್ನು ಸ್ಥಾಪಿಸಬಹುದು. ಶಂಖ್ ಅನ್ನು ಮಾತಾ ಲಕ್ಷ್ಮಿಯ ಸಹೋದರ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಇಬ್ಬರೂ ಸಮುದ್ರ ಮಂಥನದಿಂದ ಹುಟ್ಟಿಕೊಂಡಿದ್ದಾರೆ. ಶಂಖದ ಆರಾಧನೆಯಿಂದ ಲಕ್ಷ್ಮೀದೇವಿಯೂ ಪ್ರಸನ್ನಳಾಗುತ್ತಾಳೆ. ಇದು ವ್ಯವಹಾರದಲ್ಲಿ ಯಶಸ್ಸನ್ನು ತರುತ್ತದೆ.

ಅಲಂಕಾರ

ಮನೆ ಅಥವಾ ಅಂಗಡಿಯ ಪ್ರವೇಶದ್ವಾರಕ್ಕೆ ಹೆಚ್ಚು ಅಲಂಕಾರಿಕ ವಸ್ತುಗಳಿಂದ ಅಲಂಕರಿಸಬೇಡಿ. ವಾಸ್ತು ತಜ್ಞರ ಪ್ರಕಾರ ಇದನ್ನು ಮಾಡಬಾರದು. ಏಕೆಂದರೆ ದಾರಿಯಲ್ಲಿ ಬರುವ ಉತ್ತಮ ಅವಕಾಶಗಳನ್ನು ಇದು ತಡೆಯಬಹುದು. ಪ್ರವೇಶದ್ವಾರ ಯಾವಾಗಲೂ ಸ್ವಚ್ಛವಾಗಿರಬೇಕು.

Exit mobile version