Site icon Vistara News

Vastu Tips: ಮನೆಯ ದ್ವಾರದಲ್ಲಿ ಗಣೇಶನ ವಿಗ್ರಹ ಇಡುವುದು ಸರಿಯೇ?

Vastu Tips

ಪ್ರಥಮ ಪೂಜಿತ ಗಣಪತಿಯನ್ನು (ganapati) ನಮ್ಮ ನಿತ್ಯದ ಎಲ್ಲ ಕಾರ್ಯದಲ್ಲೂ ಮೊದಲ ಆದ್ಯತೆ (First priority) ನೀಡಲಾಗುತ್ತದೆ. ಎಲ್ಲಾ ದೇವರುಗಳಲ್ಲಿ (god) ಗಣಪತಿಯನ್ನು ಅತ್ಯಂತ ಪೂಜನೀಯ ಎಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ ಪ್ರತಿಯೊಂದು ಕೆಲಸದಲ್ಲೂ ಆತನಿಗೆ ಮೊದಲ ಪೂಜೆಯನ್ನು ಸಲ್ಲಿಸಲಾಗುತ್ತದೆ. ಆದರೆ ಇದಕ್ಕೆ ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಇದರ ಕುರಿತು ಕೆಲವೊಂದು ನಿಯಮಗಳಿವೆ.

ಎಲ್ಲ ವಿಘ್ನಗಳನ್ನು ದೂರ ಮಾಡುವ ಗಣಪತಿಯನ್ನು ಪೂಜಿಸಿದರೆ ಜೀವನದಲ್ಲಿ ಎಂದಿಗೂ ಸಮಸ್ಯೆಗಳಿರುವುದಿಲ್ಲ ಎಂದೇ ನಂಬಲಾಗುತ್ತದೆ. ಕೆಲವರು ತಮ್ಮ ಮನೆಯ ಮುಂಭಾಗದ ಬಾಗಿಲುಗಳಲ್ಲಿ ಗಣಪತಿಯ ಚಿತ್ರ ಅಥವಾ ವಿಗ್ರಹವನ್ನು ನೇತುಹಾಕುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಪ್ರವೇಶದ್ವಾರದಲ್ಲಿ ಗಣೇಶನ ಚಿತ್ರವನ್ನು ಪ್ರತಿಷ್ಠಾಪಿಸುವಾಗ ಪ್ರತಿಯೊಬ್ಬರೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.


ಯಾವ ದಿಕ್ಕು ಸೂಕ್ತ?

ವಾಸ್ತು ಶಾಸ್ತ್ರದಲ್ಲಿ ಮನೆಯ ಮುಂಭಾಗದ ದ್ವಾರದ ಮೇಲೆ ಗಣಪತಿ ವಿಗ್ರಹವನ್ನು ಇರಿಸಲು ಕೆಲವೊಂದು ಸೂಚನೆಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಇದಕ್ಕಾಗಿ ಮನೆಯ ಮುಂಭಾಗದ ಬಾಗಿಲು ಉತ್ತರ ಅಥವಾ ದಕ್ಷಿಣಕ್ಕೆ ಎದುರಾಗಿರಬೇಕು. ಆದರೆ ಮುಖ್ಯ ಪ್ರವೇಶ ದ್ವಾರ ಇರುವಲ್ಲಿ ಪೂರ್ವ ಅಥವಾ ಪಶ್ಚಿಮಕ್ಕೆ ಎದುರಾಗಿರುವ ಗಣೇಶನ ಪ್ರತಿಮೆಯನ್ನು ಇರಿಸಬಾರದು.

ಸ್ಥಾಪನೆ ಸರಿಯಾಗಿರಲಿ

ಮನೆಯ ಮುಂಭಾಗದ ದ್ವಾರದ ಮೇಲೆ ಗಣೇಶನ ವಿಗ್ರಹವನ್ನು ಇರಿಸುವಾಗ ಅದನ್ನು ವಿಧಿವತ್ತಾಗಿ ಸ್ಥಾಪಿಸಬೇಕು. ವಿಗ್ರಹವು ಎಲ್ಲಾ ಸಮಯದಲ್ಲೂ ಒಳಮುಖವಾಗಿರಬೇಕು. ಪಶ್ಚಿಮ, ಉತ್ತರ ಮತ್ತು ಈಶಾನ್ಯ ದೃಷ್ಟಿಕೋನಗಳು ಇದಕ್ಕೆ ಅತ್ಯುತ್ತಮವೆಂದು ಹೇಳಲಾಗುತ್ತದೆ.

ಇದನ್ನೂ ಓದಿ Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

ಬಣ್ಣ ಯಾವುದು?

ವಾಸ್ತು ಶಾಸ್ತ್ರದ ಪ್ರಕಾರ ಕುಟುಂಬದಲ್ಲಿ ಸಮೃದ್ಧಿಯಾಗಬೇಕೆಂದು ಬಯಸಿದರೆ ಬಿಳಿ ಅಥವಾ ಸಿಂಧೂರ ವರ್ಣದ ಗಣೇಶನನ್ನು ಪ್ರತಿಷ್ಠಾಪಿಸಬೇಕು. ಇದನ್ನು ಮಾಡುವುದರಿಂದ ಕುಟುಂಬದಲ್ಲಿ ಸಂಪತ್ತು ಮತ್ತು ಸಂತೋಷವನ್ನುನಿರಂತರವಾಗಿ ಇರುವುದು.

ಪ್ರತಿಮೆಯ ಭಂಗಿ

ಗಣೇಶನ ಪ್ರತಿಮೆಯನ್ನು ಮನೆಯ ಮುಂಭಾಗದ ಬಾಗಿಲಿನಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿ ಇಡಬೇಕು. ಮನೆಯ ದ್ವಾರದ ಹೊರಗೆ ನಿಂತಿರುವ ಗಣೇಶನ ಪ್ರತಿಷ್ಠಾಪನೆಯು ಅದೃಷ್ಟವನ್ನು ತರುವುದಿಲ್ಲ. ಕಾರ್ಯಸ್ಥಳ ಅಥವಾ ಕಚೇರಿಯಲ್ಲಿ ನಿಂತಿರುವ ಗಣೇಶನ ವಿಗ್ರಹವನ್ನು ಇಡಬಹುದು. ಆದರೆ ಮನೆಯಲ್ಲಿ ಇಡಬಾರದು ಎನ್ನುತ್ತದೆ ವಾಸ್ತು ನಿಯಮ.

Exit mobile version