ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು (Positive energy) ತುಂಬಿಸಲು, ಜೀವನದಲ್ಲಿ ಸಮೃದ್ಧಿ, ಸಂತೋಷವನ್ನು ತರಲು ವಾಸ್ತು ಶಾಸ್ತ್ರದಲ್ಲಿ (Vastu Tips) ಕೆಲವೊಂದು ನಿಯಮಗಳನ್ನು ಮಾಡಲಾಗಿದೆ. ನಂಬಿಕೆಯೇ ಇದರ ಆಧಾರವಾಗಿದೆ. ಅಲಂಕಾರಕ್ಕಾಗಿ ಅಥವಾ ಅಗತ್ಯಕ್ಕಾಗಿ ಮನೆಯಲ್ಲಿ ಇಡುವ ಕೆಲವೊಂದು ವಸ್ತುಗಳು ಮನೆಗೆ ಶಕ್ತಿ ತುಂಬುತ್ತವೆ. ಅದು ಸಕಾರಾತ್ಮಕ ಫಲಿತಾಂಶ ಬೀರಲು ವಾಸ್ತು ನಿಯಮಕ್ಕೆ (vastu shastra) ಅನುಸಾರವಾಗಿ ಅವುಗಳನ್ನು ಇಡುವುದು ಮುಖ್ಯವಾಗಿರುತ್ತದೆ.
ಕನ್ನಡಿ ಪ್ರತಿಯೊಂದು ಮನೆಯಲ್ಲೂ ಇರುತ್ತದೆ. ಅದನ್ನು ನಾವು ಅಲಂಕಾರದ ಕಾರ್ಯಗಳಿಗಾಗಿ ಬಳಸುತ್ತೇವೆ. ಈ ಕನ್ನಡಿಯನ್ನು ಸರಿಯಾಗಿ ಇಡದೇ ಇದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು ಎನ್ನುತ್ತದೆ ವಾಸ್ತು ನಿಯಮ. ಹಾಗಾದರೆ ಕನ್ನಡಿಗೆ ಮನೆಯಲ್ಲಿ ಯಾವ ರೀತಿ ವಾಸ್ತು ತತ್ತ್ವಗಳಿವೆ ಎಂಬುದನ್ನು ತಿಳಿಯೋಣ.
ಸೂಕ್ತ ಪ್ರದೇಶ
ಡ್ರೆಸ್ಸಿಂಗ್ ರೂಮ್ ಮತ್ತು ವಾಶ್‌ರೂಮ್ ಹೊರತುಪಡಿಸಿ ಡೈನಿಂಗ್ ಟೇಬಲ್‌ಗೆ ಎದುರಾಗಿ ಡೈನಿಂಗ್ ಏರಿಯಾದಲ್ಲಿ ಕನ್ನಡಿಯನ್ನು ಇರಿಸಬಹುದು. ಇದನ್ನು ಈ ಪ್ರದೇಶದಲ್ಲಿ ಇರಿಸುವ ಮುಖ್ಯ ಉದ್ದೇಶ ಇಡೀ ಕುಟುಂಬವು ಒಟ್ಟಿಗೆ ರಾತ್ರಿ ಊಟವನ್ನು ಮಾಡುವಾಗ ಅದು ಕನ್ನಡಿಯಲ್ಲಿ ಪ್ರತಿಫಲಿಸಬೇಕು. ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ.
ಸ್ವಚ್ಛತೆ ಕಾಪಾಡಿ
ಕನ್ನಡಿಯನ್ನು ಎಲ್ಲಿ ಇರಿಸಿದರೂ ಅದನ್ನು ಸ್ವಚ್ಛವಾಗಿ ಇರಿಸಬೇಕು. ಇಲ್ಲದಿದ್ದರೆ ಅದು ನಕಾರಾತ್ಮಕತೆಯನ್ನು ಆಕರ್ಷಿಸಬಹುದು. ಕನ್ನಡಿಯ ಮೇಲೆ ಯಾವುದೇ ಸ್ಟಿಕ್ಕರ್‌ಗಳನ್ನು ಅಂಟಿಸಬಾರದು.
ಮಲಗುವ ಕೋಣೆ
ಮಾಸ್ಟರ್ ಬೆಡ್‌ರೂಮ್‌ನ ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಬಹುದು. ಕನ್ನಡಿಯನ್ನು ಮಲಗುವ ಕೋಣೆಯಲ್ಲಿ ಎಲ್ಲೆಂದರಲ್ಲಿ ಇರಿಸಿದರೆ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಇರಿಸಬೇಕು.
ಕನ್ನಡಿಯನ್ನು ಇಡುವ ಸ್ಥಳ
ಕನ್ನಡಿಯನ್ನು ಯಾವಾಗಲೂ ಪೂರ್ವ, ಉತ್ತರ ಅಥವಾ ಪಶ್ಚಿಮ ಗೋಡೆಗಳ ಮೇಲೆ ಇಡಬೇಕು.
ಇದನ್ನೂ ಓದಿ: Vastu Tips: ಶಾಂತಿ, ನೆಮ್ಮದಿ, ಸಮೃದ್ಧಿಯಲ್ಲಿ ಮನೆಯ ಕರ್ಟನ್‌ಗಳ ಪಾತ್ರವೂ ಇರುತ್ತದೆ!
ಆಕಾರ ಹೇಗಿರಬೇಕು?
ವಾಸ್ತು ಪ್ರಕಾರ ಕನ್ನಡಿಯ ಚದರ ಮತ್ತು ಆಯತಾಕಾರದ ಆಕಾರಗಳನ್ನು ಹೊಂದಿರಬೇಕು. ಯಾಕೆಂದರೆ ಅವುಗಳು ಸುತ್ತಲೂ ಸಮವಾಗಿ ಶಕ್ತಿಯನ್ನು ಹರಡುತ್ತವೆ. ಕನ್ನಡಿಗೆ ವೃತ್ತದ ಆಕಾರವನ್ನು ಶ್ರೇಷ್ಠವೆಂದು ಪರಿಗಣಿಸಲಾಗುವುದಿಲ್ಲ.
ಮುರಿದ ಕನ್ನಡಿ
ಕನ್ನಡಿಯು ಎಷ್ಟೇ ದುಬಾರಿಯಾಗಿದ್ದರೂ ಅದು ಒಂದು ಬದಿಯಿಂದ ಒಡೆದರೆ ತಕ್ಷಣ ಅದನ್ನು ಎಸೆಯಬೇಕು. ಯಾಕೆಂದರೆ ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡುವುದು ಶುಭವಲ್ಲ.