ಮನೆಯಲ್ಲಿ ಸಂಪತ್ತು (Wealth) ಸದಾ ಸ್ಥಿರವಾಗಿ ಹೆಚ್ಚುತ್ತಲೇ ಇರಬೇಕು ಎಂಬುದು ಎಲ್ಲರ ಬಯಕೆ. ಆದರೆ ಎಲ್ಲ ಸಂದರ್ಭದಲ್ಲೂ ಇದು ಸಾಧ್ಯವಾಗುವುದೇ ಇಲ್ಲ. ಅದಕ್ಕಾಗಿ ನಮ್ಮ ಕಠಿಣ ಪರಿಶ್ರಮದ ಜೊತೆಗೆ ಸರಿಯಾದ ಯೋಜನೆಯೂ ಇರಬೇಕಾಗಿರುತ್ತದೆ. ಜೊತೆಗೆ ಇದರೊಂದಿಗೆ ಮನೆಯಲ್ಲಿ ಸಂಪತ್ತು (Attract Wealth) ನಿರಂತರ ಹೆಚ್ಚಾಗಲು ವಾಸ್ತು ನಿಯಮಗಳನ್ನು (Vastu Tips) ಅನುಸರಿಸುವುದು ಬಹಳ ಮುಖ್ಯ.
ವಾಸ್ತು ಶಾಸ್ತ್ರವು ಪ್ರಾಚೀನ ಭಾರತೀಯ ವಾಸ್ತುಶಿಲ್ಪ ವಿಜ್ಞಾನವಾಗಿದೆ. ಇದರಲ್ಲಿ ಮನೆ ಮತ್ತು ಜೀವನದ ವಿವಿಧ ಅಂಶಗಳಿಗೆ ನಿರ್ದಿಷ್ಟ ನಿಯಮಗಳನ್ನು ಹೇಳಲಾಗಿದೆ. ಇವುಗಳಲ್ಲಿ ಮನೆಯಲ್ಲಿ ತಿಜೋರಿ ಅಥವಾ ನಗದು ಪೆಟ್ಟಿಗೆ ಎಲ್ಲಿರಬೇಕು ಎಂಬುದು ಮುಖ್ಯ ವಿಷಯವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುವುದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಅಸಮಾಧಾನಗೊಳಿಸಬಹುದು ಎನ್ನಲಾಗಿದೆ.
ಮನೆಯಲ್ಲಿ ನಗದು ಪೆಟ್ಟಿಗೆಯು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲವು ವಾಸ್ತು ಸಲಹೆಗಳನ್ನು ಪಾಲಿಸುವುದು ಸೂಕ್ತ.
ಕನ್ನಡಿ ತಪ್ಪಿಸಿ
ವಾಸ್ತು ಶಾಸ್ತ್ರದ ಪ್ರಕಾರ ನಗದು ಪೆಟ್ಟಿಗೆಯೊಳಗೆ ಕನ್ನಡಿಯನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಕನ್ನಡಿ ವಾಸ್ತು ದೋಷವನ್ನು ಆಹ್ವಾನಿಸಬಹುದು. ಹಠಾತ್ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ನಗದು ಪೆಟ್ಟಿಗೆಯಲ್ಲಿ ಕನ್ನಡಿಯನ್ನು ಹೊಂದಿದ್ದರೆ ಹಣಕಾಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ತಕ್ಷಣವೇ ಅದನ್ನು ತೆಗೆದುಹಾಕಿ.
ಕಪ್ಪು ಬಣ್ಣ ಬಳಸಬೇಡಿ
ಹಿಂದೂ ಸಂಪ್ರದಾಯದ ಪ್ರಕಾರ ಕಪ್ಪು ಬಣ್ಣವು ಸಾಮಾನ್ಯವಾಗಿ ನಕಾರಾತ್ಮಕತೆಯೊಂದಿಗೆ ಸಂಬಂಧಿಸಿದೆ. ಮಂಗಳಕರ ಚಟುವಟಿಕೆಗಳಲ್ಲಿ ದೂರವಿರುತ್ತದೆ. ಆದ್ದರಿಂದ ನಗದು ಪೆಟ್ಟಿಗೆಯಲ್ಲಿ ಯಾವುದೇ ವಸ್ತುಗಳನ್ನು ಕಟ್ಟಲು ಕಪ್ಪು ಬಟ್ಟೆಯನ್ನು ಬಳಸುವುದನ್ನು ಸರಿಯಲ್ಲ. ಬದಲಾಗಿ ಕೆಂಪು ಬಟ್ಟೆಯನ್ನು ಬಳಸಿ. ಇದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಹಳೆಯ ವಸ್ತುಗಳನ್ನು ಸಂಗ್ರಹಿಸಬೇಡಿ
ಸ್ಕ್ರ್ಯಾಪ್ ಪೇಪರ್‌ಗಳಂತಹ ಹಳೆಯ ಅಥವಾ ತ್ಯಾಜ್ಯ ವಸ್ತುಗಳು ನಗದು ಪೆಟ್ಟಿಗೆಯಲ್ಲಿ ಸಂಗ್ರಹಿಸುವುದು ಸರಿಯಲ್ಲ ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗೆ ಮಾಡುವುದರಿಂದ ಆರ್ಥಿಕ ತೊಂದರೆಗಳು ಮತ್ತು ಬಡತನವೂ ಉಂಟಾಗಬಹುದು. ನಗದು ಬಾಕ್ಸ್ ಸ್ವಚ್ಛವಾಗಿಟ್ಟು ಮೌಲ್ಯಯುತವಾದ ವಸ್ತುಗಳು ಮತ್ತು ದಾಖಲೆಗಳನ್ನು ಮಾತ್ರ ಅದರಲ್ಲಿ ಇರಿಸಬೇಕು.
ಸುಗಂಧ ದ್ರವ್ಯಗಳನ್ನು ಇಡಬೇಡಿ
ಸುಗಂಧ ದ್ರವ್ಯಗಳನ್ನು ನಗದು ಪೆಟ್ಟಿಗೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಅಭ್ಯಾಸವು ವಾಸ್ತು ದೋಷವನ್ನು ಆಕರ್ಷಿಸುತ್ತದೆ. ಇದರಿಂದ ಮನೆಯ ಸದಸ್ಯರಿಗೆ ಆರ್ಥಿಕ ತೊಂದರೆ ಉಂಟು ಮಾಡಬಹುದು. ಸುಗಂಧ ದ್ರವ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಉತ್ತಮ.
ಯಾವ ದಿಕ್ಕು ಸೂಕ್ತ?
ಹಣದ ಪೆಟ್ಟಿಗೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಯಾಕೆಂದರೆ ಇದು ವಾಸ್ತು ಶಾಸ್ತ್ರದಲ್ಲಿ ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದೆ.
ಇದನ್ನೂ ಓದಿ: Vastu Tips: ಮನೆ ಖರೀದಿ ಮಾಡುವಾಗ ಈ ಸಂಗತಿಗಳನ್ನು ತಪ್ಪದೇ ಗಮನಿಸಿ
ಆಕಾರ ಮತ್ತು ವಸ್ತು
ಲೋಹ ಅಥವಾ ಮರದಿಂದ ಮಾಡಿದ ಆಯತಾಕಾರದ ಅಥವಾ ಚೌಕಾಕಾರದ ನಗದು ಪೆಟ್ಟಿಗೆಗೆ ಆದ್ಯತೆ ನೀಡಬೇಕು.
ಸ್ವಚ್ಛತೆಗೆ ಆದ್ಯತೆ ನೀಡಿ
ನಗದು ಪೆಟ್ಟಿಗೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಧನಾತ್ಮಕ ಶಕ್ತಿ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯವು ಧಾರ್ಮಿಕ ಆಚರಣೆಯಲ್ಲಿ ಇದಕ್ಕೆ ಪೂಜೆ ಸಲ್ಲಿಸಿ.