Site icon Vistara News

Vastu Tips: ನಿಮಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ ನೋಡಿ!

Vastu Tips

ಉತ್ತಮ ಆರೋಗ್ಯಕ್ಕಾಗಿ (good health) ಚೆನ್ನಾಗಿ ನಿದ್ರೆ (Sleeping) ಮಾಡುವುದು ಕೂಡ ಬಹು ಮುಖ್ಯವಾಗಿರುತ್ತದೆ. ಎಷ್ಟೋ ಬಾರಿ ದಿನವಿಡೀ ಕೆಲಸ ಮಾಡಿ ದಣಿದು ಬಂದರೂ ರಾತ್ರಿ ಸರಿಯಾಗಿ ನಿದ್ದೆ ಬಾರದೆ ಒದ್ದಾಡುವವರು ಇರುತ್ತಾರೆ. ಇದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು (health problem) ಮುಂದೆ ಎದುರಿಸಬೇಕಾಗುತ್ತದೆ. ಚೆನ್ನಾಗಿ ನಿದ್ರೆ ಬರಲು ಮನೆಯ ವಾಸ್ತು ಅಂಶವೂ (Vastu Tips) ಕಾರಣವಾಗಿರುತ್ತದೆ.

ನಿದ್ದೆ ಮಾಡುವಾಗ ತೊಂದರೆಗಳು ಎದುರಾಗುತ್ತಿದ್ದರೆ ಅಥವಾ ಉತ್ತಮ ಮತ್ತು ಆರಾಮದಾಯಕ ನಿದ್ರೆಗಾಗಿ ಮನೆಯಲ್ಲಿ ವಾಸ್ತು ದೋಷಗಳನ್ನು ಸರಿಪಡಿಸುವುದು ಬಹು ಮುಖ್ಯ.


ಸರಿಯಾಗಿ ನಿದ್ರೆ ಬಾರದೇ ಇದ್ದರೆ ಅದು ಮನೆ, ಕಚೇರಿ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ವಾಸ್ತು ಶಾಸ್ತ್ರದ ಸಲಹೆಯನ್ನು ಪಾಲಿಸಿದರೆ ನಿದ್ರೆ ಚೆನ್ನಾಗಿ ಬರುತ್ತದೆ. ಇದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಉತ್ತಮ ನಿದ್ರೆಯಾದರೆ ಅದು ಅತ್ಯುತ್ತಮ ಆರೋಗ್ಯವನ್ನು ಪಡೆಯಲು, ಆರ್ಥಿಕ ತೊಂದರೆಗಳು ದೂರವಾಗಿಸಬಹುದು. ಇದಕ್ಕ ವಾಸ್ತು ನಿಯಮ ಏನು ಹೇಳಿದೆ ನೋಡೋಣ.

ದುಃಸ್ವಪ್ನ ಬಾರದೇ ಇರಲು ಹೀಗೆ ಮಾಡಿ

ಮನೆಯಲ್ಲಿ ಮಲಗಿರುವಾಗ ಕೆಲವರು ಆಗಾಗ್ಗೆ ಥಟ್ಟನೆ ಎಚ್ಚರಗೊಳ್ಳುತ್ತಾರೆ. ಜನರನ್ನು ಎಚ್ಚರವಾಗಿಡುವ ಭಯದ ದುಃಸ್ವಪ್ನಗಳು ಹಲವರಿಗೆ ಬಾಧಿಸುತ್ತವೆ. ನೀವು ಈ ಸಮಸ್ಯೆಯನ್ನು ಹೊಂದಿದ್ದರೆ ನಿಮ್ಮ ದಿಂಬಿನ ಕೆಳಗೆ ಚಾಕು, ಕತ್ತರಿ ಅಥವಾ ಇತರ ಕಬ್ಬಿಣದ ವಸ್ತುವನ್ನು ಇರಿಸಿ. ಅಥವಾ ಮಂಚದ ಕೆಳಗೆ ಒಂದು ಬಟ್ಟಲು ಕಲ್ಲು ಉಪ್ಪು ಮತ್ತು ದಿಂಬಿನ ಕೆಳಗೆ ಒಂದು ರೂಪಾಯಿ ನಾಣ್ಯವನ್ನು ಇಟ್ಟು ಮಲಗಬಹುದು. ಇದರಿಂದ ಭಯಾನಕ ದುಃಸ್ವಪ್ನಗಳ ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ: Kedarnath Temple: ಕೇದಾರನಾಥ ದೇಗುಲದಿಂದ 228 ಕೆ.ಜಿ ಚಿನ್ನ ಮಾಯ; ದೇವರ ಕಣ್ಣೆದುರೇ ಹಗರಣ!

ಸಂಬಂಧ ಬಲಪಡಿಸಿಕೊಳ್ಳಿ

ಸಂಗಾತಿಯೊಂದಿಗೆ ಸಂಬಂಧವನ್ನು ಬಲಪಡಿಸಲು ಬಯಸಿದರೆ ದಿಂಬಿನ ಕೆಳಗೆ ಪರಿಮಳಯುಕ್ತ ಹೂವುಗಳನ್ನು ಇರಿಸಿ. ಇದು ಶುಕ್ರನ ಪ್ರಭಾವವನ್ನು ಹೆಚ್ಚಿಸುತ್ತದೆ. ಇದರಿಂದ ಒಳ್ಳೆಯ ಕನಸುಗಳನ್ನು ಕಾಣಬಹುದು. ವೈವಾಹಿಕ ಜೀವನದಲ್ಲಿ ಪ್ರೀತಿ ಕೂಡ ಬೆಳೆಯುತ್ತದೆ.

ಉತ್ತಮ ಆರೋಗ್ಯಕ್ಕಾಗಿ ಸಲಹೆ

ದಿನದ ಬಹುಪಾಲು ಅಸ್ವಸ್ಥರಾಗಿದ್ದರೆ ಮತ್ತು ಆರೋಗ್ಯವು ನಿರಂತರವಾಗಿ ಹದಗೆಡುತ್ತಿದ್ದರೆ ಮಲಗುವ ಸಮಯದಲ್ಲಿ ಹಾಸಿಗೆಯ ಕೆಳಗೆ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ಇರಿಸಿ. ಬೆಳಗ್ಗೆ ಎದ್ದ ಅನಂತರ ಮರ ಅಥವಾ ಗಿಡದ ಮೇಲೆ ಈ ನೀರನ್ನು ಸುರಿಯಲು ಮರೆಯದಿರಿ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಅನುಕೂಲವಾಗುತ್ತದೆ.

Exit mobile version