Site icon Vistara News

Vastu Tips: ಶಾಂತಿ, ನೆಮ್ಮದಿ, ಸಮೃದ್ಧಿಯಲ್ಲಿ ಮನೆಯ ಕರ್ಟನ್‌ಗಳ ಪಾತ್ರವೂ ಇರುತ್ತದೆ!

Vastu Tips

ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಯಲ್ಲಿ ಇರಿಸುವ ಪ್ರತಿಯೊಂದು ವಸ್ತುವೂ ಧನಾತ್ಮಕ (Positive energy) ಅಥವಾ ನಕಾರಾತ್ಮಕ ಶಕ್ತಿಯನ್ನು (Negative energy) ಹೊಂದಿರುತ್ತದೆ. ಇದು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೂ ಪರಿಣಾಮ ಬೀರುತ್ತದೆ. ಇದರಲ್ಲಿ ಮನೆಯಲ್ಲಿ ಅಳವಡಿಸಿರುವ ಕರ್ಟನ್‌ಗಳು (curtains) ಕೂಡ ಸೇರಿವೆ.

ಕರ್ಟನ್‌ ಗಳು ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸೂರ್ಯನ ಬೆಳಕು ಮತ್ತು ಧೂಳಿನಿಂದ ಮನೆಯನ್ನು ರಕ್ಷಿಸುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ಪರದೆಗಳಿಗೆ ಸಂಬಂಧಿಸಿದ ಕೆಲವು ವಿಶೇಷ ನಿಯಮಗಳನ್ನು ಮಾಡಲಾಗಿದೆ. ಪರದೆಗಳಿಗೆ ಸಂಬಂಧಿಸಿದ ವಾಸ್ತುವಿನ ಈ ನಿಯಮಗಳನ್ನು ಅನುಸರಿಸದಿರುವುದು ಸಹ ಹಾನಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಮನೆಯ ಯಾವ ಕೋಣೆಯಲ್ಲಿ ಯಾವ ರೀತಿಯ ಕರ್ಟನ್ ಅಳವಡಿಸಬೇಕು ಎಂಬುದು ತಿಳಿದಿರಲಿ.

Vastu Tips


ಡ್ರಾಯಿಂಗ್ ರೂಮ್ ಪರದೆ

ಮನೆಯಲ್ಲಿ ಅತಿಥಿಗಳಿಗಾಗಿ ನಿರ್ಮಿಸುವ ಡ್ರಾಯಿಂಗ್ ರೂಮ್ ಅಥವಾ ಪ್ರತ್ಯೇಕ ಕೊಠಡಿ ಇದ್ದರೆ ಅಲ್ಲಿ ಬಾದಾಮಿ ಅಥವಾ ಕೆನೆ ಬಣ್ಣದ ಪರದೆಗಳನ್ನು ಸ್ಥಾಪಿಸಿ. ಇದು ಮನೆಯನ್ನು ಉತ್ಸಾಹಭರಿತವಾಗಿಡುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

Vastu Tips


ಮನೆ ಮಾಲೀಕನ ಕೊಠಡಿ

ಮನೆಯ ಮುಖ್ಯಸ್ಥರ ಕೋಣೆಯಲ್ಲಿ ಕಿಟಕಿ ಮತ್ತು ಬಾಗಿಲುಗಳಿಗೆ ನೀಲಿ, ಕಂದು ಅಥವಾ ಕಿತ್ತಳೆ ಬಣ್ಣದ ಪರದೆಗಳನ್ನು ಹಾಕಬೇಕು. ಇದರಿಂದ ಮನೆಯ ಮುಖ್ಯಸ್ಥನ ಆರೋಗ್ಯ ಉತ್ತಮವಾಗಿರುತ್ತದೆ. ಇದರಿಂದ ಇಡೀ ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿಯುತ್ತದೆ. ಈ ಬಣ್ಣದ ಪ್ರಭಾವದಿಂದ ಮನೆಯ ಸದಸ್ಯರು ಪ್ರಗತಿ ಹೊಂದುತ್ತಾರೆ.


ಮಲಗುವ ಕೋಣೆ

ಹೊಸದಾಗಿ ಮದುವೆಯಾಗಿರುವ ದಂಪತಿಯ ಮಲಗುವ ಕೋಣೆಯ ಪರದೆಗಳ ಬಣ್ಣದ ಆಯ್ಕೆಗೆ ವಿಶೇಷ ಗಮನ ಕೊಡಿ. ಗಂಡ ಮತ್ತು ಹೆಂಡತಿ ತಮ್ಮ ಕೋಣೆಯಲ್ಲಿ ಕೆಂಪು, ನೇರಳೆ ಅಥವಾ ಗುಲಾಬಿ ಬಣ್ಣದ ಪರದೆಗಳನ್ನು ಹಾಕಬೇಕು. ಇದು ದಾಂಪತ್ಯ ಜೀವನದಲ್ಲಿ ಹೊಸ ಚೈತನ್ಯವನ್ನು ತರುತ್ತದೆ. ಅಲ್ಲದೆ, ಪತಿ ಮತ್ತು ಪತ್ನಿ ನಡುವೆ ಪ್ರಣಯ ಹೆಚ್ಚಾಗುತ್ತದೆ!


ಅಧ್ಯಯನ ಕೊಠಡಿ

ಮಕ್ಕಳ ಅಧ್ಯಯನ ಕೊಠಡಿಯಲ್ಲಿ ಹಸಿರು, ನೀಲಿ ಅಥವಾ ಗುಲಾಬಿ ಬಣ್ಣದ ಪರದೆಗಳನ್ನು ಅಳವಡಿಸಿ. ಈ ಬಣ್ಣಗಳನ್ನು ಶಾಂತಿ ಮತ್ತು ಆರೋಗ್ಯದ ಸೂಚಕಗಳು ಎಂದು ಪರಿಗಣಿಸಲಾಗುತ್ತದೆ. ಸ್ಟಡಿ ರೂಂ ಇದ್ದರೆ ಅದರಲ್ಲಿ ಹಸಿರು ಬಣ್ಣದ ಕರ್ಟನ್ ಹಾಕುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ ಮತ್ತು ಅವರು ಅಧ್ಯಯನದತ್ತ ಗಮನ ಹರಿಸುತ್ತಾರೆ.

Vastu Tips


ಪೂಜಾ ಕೋಣೆ

ಮನೆಯಲ್ಲಿ ಅತ್ಯಂತ ಪವಿತ್ರವಾದ ಸ್ಥಳವೆಂದರೆ ಪೂಜಾ ಕೋಣೆ. ಈ ಕೋಣೆಯಲ್ಲಿನ ಪರದೆಗಳು ಯಾವಾಗಲೂ ಕಿತ್ತಳೆ ಅಥವಾ ತಿಳಿ ಹಳದಿಯಾಗಿರಬೇಕು. ಈ ಎರಡೂ ಬಣ್ಣಗಳನ್ನು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣದ ಪರದೆಗಳನ್ನು ಅಳವಡಿಸುವ ಮೂಲಕ ಇಡೀ ಮನೆಯಲ್ಲಿ ಸಾತ್ವಿಕ ವಾತಾವರಣವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Vastu Tips: ಅಪ್ಪಿತಪ್ಪಿಯೂ ಮನೆಯಲ್ಲಿ ಈ ವಸ್ತುಗಳನ್ನು ಖಾಲಿ ಇಡಬೇಡಿ!


ಯಾವ ದಿಕ್ಕಿಗೆ ಯಾವ ಬಣ್ಣ?

ಮನೆಯ ಸದಸ್ಯರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದರೆ ಅಥವಾ ಪರಸ್ಪರ ಹೊಂದಾಣಿಕೆ ಇಲ್ಲದೇ ಇದ್ದರೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಕೆಂಪು ಪರದೆಗಳನ್ನು ಅಳವಡಿಸಬೇಕು. ಇದು ಮನೆಯ ಸದಸ್ಯರಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ಪರಸ್ಪರ ಸಂಬಂಧಗಳು ಸಹ ಬಲಗೊಳ್ಳುತ್ತವೆ.

ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿದ್ದರೆ ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಪರದೆಗಳನ್ನು ಹಾಕಿ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಾರಂಭಿಸುತ್ತದೆ.

Exit mobile version