Site icon Vistara News

Vastu Tips: ಸಣ್ಣ ವಾಸ್ತು ದೋಷವೇ ಕುಟುಂಬದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು!

Vastu Tips

ವ್ಯಕ್ತಿಯ ಜೀವನದಲ್ಲಿ (life) ಅನೇಕ ಸಮಸ್ಯೆಗಳು (problems) ಸಣ್ಣಪುಟ್ಟ ವಾಸ್ತು ದೋಷಗಳಿಂದ (Vastu Tips) ಉಂಟಾಗುತ್ತವೆ. ಮನೆಯವರಲ್ಲಿ ಮನಸ್ತಾಪಗಳು, ಕುಟುಂಬ (family) ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು, ಆರೋಗ್ಯ ಸಮಸ್ಯೆಗಳು (health issues) ಕಾಡುತ್ತವೆ. ವಾಸ್ತುವಿಗೆ ಸಂಬಂಧಿಸಿದ ತಪ್ಪುಗಳನ್ನು ಮಾಡುವ ವ್ಯಕ್ತಿಗಳು ಮಾನಸಿಕ ಮತ್ತು ದೈಹಿಕ ಯಾತನೆ ಅನುಭವಿಸುತ್ತಾರೆ. ಆದ್ದರಿಂದ ಮನೆಯಲ್ಲಿ ಪ್ರತಿಯೊಂದು ವಿಚಾರದಲ್ಲೂ ವಾಸ್ತು ನಿಯಮಗಳನ್ನು ಅನುಸರಿಸುವುದು ಉತ್ತಮ.

ನಿರ್ದಿಷ್ಟ ವಿಷಯಗಳ ಬಗ್ಗೆ ಉತ್ತಮ ಕಾಳಜಿ ವಹಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನುನಡೆಸಬಹುದು. ಅಲ್ಲದೇ ಮನೆಯ ಹಲವಾರು ಸಮಸ್ಯೆಗಳನ್ನು ಸರಿಪಡಿಸಬಹುದು.

ಹಳೆಯ ವಸ್ತುಗಳು ಬೇಡ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ತುಂಬಾ ಹಳೆಯ ಮತ್ತು ನಿಷ್ಪ್ರಯೋಜಕ ವಸ್ತುಗಳನ್ನು ಸಂಗ್ರಹಿಸಬಾರದು. ಇವುಗಳನ್ನು ಮಲಗುವ ಕೋಣೆಗಳಲ್ಲಿ ಇಡಬಾರದು. ಒಂದು ವೇಳೆ ಇಟ್ಟರೆ ಇದರಿಂದ ಆರೋಗ್ಯ ಕೆಡುತ್ತದೆ.

ದೇವರ ಪ್ರತಿಮೆ

ಮಲಗುವ ಕೋಣೆಯಲ್ಲಿ ದೇವರ ಪ್ರತಿಮೆ ಅಥವಾ ಚಿತ್ರವನ್ನು ಇಡಬಾರದು. ಅದು ದುರದೃಷ್ಟಕರವೆಂದು ಪರಿಗಣಿಸಲಾಗಿದೆ.


ಅಚ್ಚುಕಟ್ಟಾಗಿರಲಿ

ಮಲಗುವ ಕೋಣೆಯನ್ನು ಅಚ್ಚುಕಟ್ಟಾಗಿ ಇರುವಂತೆ ವಿಶೇಷ ಗಮನ ನೀಡಬೇಕು. ಅಸ್ತವ್ಯಸ್ತವಾಗಿರುವ ಮಲಗುವ ಕೋಣೆಗಳಿಂದ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.

ಆಹಾರ ಸೇವನೆ

ಮನೆಯಲ್ಲಿ ಆಹಾರ ಸೇವನೆ ಮಾಡುವಾಗ ಅಥವಾ ಏನನ್ನಾದರೂ ತಿನ್ನುವಾಗ ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಂಡು ತಿನ್ನಬೇಕು.

ನಲ್ಲಿ ನೀರು

ಮನೆಯಲ್ಲಿ ಒಡೆದ ನಲ್ಲಿಯನ್ನು ಆದಷ್ಟು ಬೇಗ ಸರಿಪಡಿಸಿ. ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿರುವುದು ದುರದೃಷ್ಟಕರ ಎಂದು ಹೇಳಲಾಗುತ್ತದೆ.

ಮಲಗುವ ದಿಕ್ಕು

ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗ್ಗುತ್ತದೆ.


ಕಸ ಸಂಗ್ರಹ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮೆಟ್ಟಿಲುಗಳ ಕೆಳಗೆ ಹೆಚ್ಚಿನ ಪ್ರಮಾಣದ ಕಸವನ್ನು ಸಂಗ್ರಹಿಸಲು ಬಿಡಬಾರದು. ಇದು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಓದುವ ದಿಕ್ಕು

ಮಕ್ಕಳು ಓದುವಾಗ ಯಾವಾಗಲು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಬೇಕು. ಇದರಿಂದ ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿರುತ್ತದೆ.

ಇದನ್ನೂ ಓದಿ: Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

ಮರ, ಸಸ್ಯಗಳು

ಅತ್ಯುತ್ತಮ ಆರೋಗ್ಯಕ್ಕಾಗಿ, ಮನೆಯ ಸುತ್ತಮುತ್ತ ಮರ ಮತ್ತು ಸಸ್ಯಗಳನ್ನು ಬೆಳೆಸಿ. ಇದು ಕುಟುಂಬದ ಎಲ್ಲರನ್ನು ಸಂತೋಷವಾಗಿರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತದೆ.

ಕಿಟಕಿ, ಬಾಗಿಲು

ಮನೆಯೊಳಗೇ ಉತ್ತಮ ಶಕ್ತಿಯನ್ನು ಸ್ವಾಗತಿಸಲು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಸಮಯದವರೆಗೆ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ.

Exit mobile version