Site icon Vistara News

Vastu Tips: ಈ ನಕಾರಾತ್ಮಕ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ!

Vastu Tips

ಇಷ್ಟವಾಗುವ ಎಲ್ಲ ವಸ್ತುಗಳನ್ನು (object) ನಾವು ತಂದು ಮನೆಯಲ್ಲಿ (home) ಇಟ್ಟುಕೊಳ್ಳುತ್ತೇವೆ. ಆದರೆ ಈ ವಸ್ತುಗಳು ನಮ್ಮ ಜೀವನದ ಮೇಲೆ ಸಕಾರಾತ್ಮಕ (positive energy) ಅಥವಾ ನಕಾರಾತ್ಮಕ (negative energy) ಪ್ರಭಾವವನ್ನು ಬೀರುತ್ತದೆ ಎಂಬುದು ತಿಳಿದಿರಲಿ. ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಶಕ್ತಿಯನ್ನು ಹೊಂದಿರುತ್ತದೆ. ಇದು ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ.

ರಾಹು- ಕೇತು ಮತ್ತು ಶನಿಯು ಮನೆಯಲ್ಲಿ ಶೇಖರಿಸಿಟ್ಟ ವಸ್ತುಗಳಲ್ಲಿ ವಾಸಿಸುತ್ತಾರೆ ಎಂದು ಭಾವಿಸಲಾಗುತ್ತದೆ. ದೀರ್ಘಕಾಲ ಬಳಸದೇ ಇರುವ ವಸ್ತುಗಳು ಪರಿಣಾಮದಿಂದ ಮನೆಯಲ್ಲಿ ಹೆಚ್ಚು ಘರ್ಷಣೆಗಳು, ಆರ್ಥಿಕ ತೊಂದರೆಗಳು ಉಂಟಾಗುತ್ತವೆ. ಹೀಗಾಗಿ ಮನೆಯಲ್ಲಿ ಸಂಗ್ರಹಿಸಬಾರದ ಮತ್ತು ಮನೆ ಮತ್ತು ಮನೆ ಮಂದಿಯ ಮೇಲೆ ಋಣಾತ್ಮಕ ಪರಿಣಾಮ ಬೀರುವ ಕೆಲವು ವಸ್ತುಗಳಿವೆ. ಅವುಗಳನ್ನು ಯಾವುದೆಂದು ಇಲ್ಲಿ ತಿಳಿದುಕೊಳ್ಳೋಣ.


ನಿಂತಿರುವ ಗಡಿಯಾರ

ಮನೆಯಲ್ಲಿ ಗಡಿಯಾರವನ್ನು ನಿಶ್ಚಲತೆ ಮತ್ತು ನಿಲ್ಲಿಸಿದ ಸಮಯದ ಪ್ರತಿಯಾಗಿ ಕಾಣಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನಿಲ್ಲಿಸಿದ ಗಡಿಯಾರವು ಕೆಟ್ಟ ಶಕ್ತಿಯನ್ನು ಆಕರ್ಷಿಸುತ್ತದೆ. ಮನೆಯಲ್ಲಿ ನಿಲ್ಲಿಸಿದ ಗಡಿಯಾರವು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.

ಇದು ಹಣದ ಹರಿವನ್ನು ನಿಲ್ಲಿಸುತ್ತದೆ. ಹಣಕಾಸಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಷ್ಕ್ರಿಯ ಗಡಿಯಾರವು ಹೆಚ್ಚು ಉದ್ವೇಗ, ಆತಂಕ ಮತ್ತು ನಿರಾಶಾವಾದದ ಮೂಲವಾಗಿದೆ. ಇಂತಹ ಗಡಿಯಾರ ಮನೆಯಲ್ಲಿದ್ದರೆ ಕೂಡಲೇ ಅದನ್ನು ಹೊರಹಾಕಿ. ಇದು ಮನೆಯಲ್ಲಿ ಇಡುವವರಿಗೆ ದುರದೃಷ್ಟವನ್ನು ತರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.


ತುಕ್ಕು ಹಿಡಿದ ವಸ್ತುಗಳು

ಪುರಾತನ ಕಬ್ಬಿಣದ ವಸ್ತುಗಳು ಮನೆಯೊಳಗೆ ಇದ್ದರೆ ಅವುಗಳು ತುಕ್ಕು ಹಿಡಿಯದಂತೆ ನೋಡಿಕೊಳ್ಳಿ. ತುಕ್ಕು ಲೋಹದ ಕ್ಷೀಣತೆಯ ಪರಿಣಾಮವೆಂದು ಭಾವಿಸಲಾಗುತ್ತದೆ. ಇದರಲ್ಲಿ ಲೋಹವು ಅದರ ಧನಾತ್ಮಕ ಶಕ್ತಿಯನ್ನು ಕಳೆದುಕೊಳ್ಳುವಾಗ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಅದನ್ನು ಮನೆಯೊಳಗೆ ಬಿಡುವುದರಿಂದ ಕೆಟ್ಟ ಶಕ್ತಿಯನ್ನು ಒಳಗೆ ಆಹ್ವಾನಿಸಿದಂತಾಗುತ್ತದೆ.

ತುಕ್ಕು ಹಿಡಿದ ವಸ್ತುಗಳು ವ್ಯಕ್ತಿಯ ಜೀವನದಲ್ಲಿ ನಿಶ್ಚಲತೆಯನ್ನು ಉಂಟುಮಾಡುತ್ತವೆ. ಇದು ಸಾಧನೆ ಮತ್ತು ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಇದನ್ನೂ ಓದಿ: Vastu Tips: ನೆಮ್ಮದಿಯಿಂದ ನಿದ್ದೆ ಮಾಡಬೇಕೆ? ಈ ವಾಸ್ತು ನಿಯಮ ಪಾಲಿಸಿ

ತುಕ್ಕು ಹಿಡಿದ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ನಷ್ಟವಾಗುತ್ತದೆ. ತುಕ್ಕು ಹಿಡಿದ ಲೋಹಗಳಲ್ಲಿ ಕಂಡುಬರುವ ಅಪಾಯಕಾರಿ ಸಂಯುಕ್ತಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಅವುಗಳನ್ನು ಮನೆಯಲ್ಲಿ ಸಂಗ್ರಹಿಸಬಾರದು.


ಹಳೆಯ ಹಿತ್ತಾಳೆ ಪಾತ್ರೆಗಳು

ಹಳೆಯ ಹಿತ್ತಾಳೆಯ ಅಡುಗೆ ಪಾತ್ರೆಗಳನ್ನು ಹೆಚ್ಚಾಗಿ ಸಂಗ್ರಹಿಸಿ ಇಡುತ್ತೇವೆ. ಈ ಪಾತ್ರೆಗಳನ್ನು ಕತ್ತಲೆಯಲ್ಲಿಟ್ಟರೆ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ವ್ಯಕ್ತಿಯ ಜೀವನವು ತೊಂದರೆಗೊಳಗಾಗುತ್ತದೆ. ಹಿತ್ತಾಳೆ ಮತ್ತು ಗುರು ಗ್ರಹವು ಸಂಪರ್ಕ ಹೊಂದಿದೆ. ಜಾತಕದಲ್ಲಿ ಗುರು ಬಲಹೀನರಾಗಿರುವವರು ಹಿತ್ತಾಳೆಯ ಪಾತ್ರೆಗಳನ್ನು ಮನೆಯಲ್ಲಿ ಇಡಬಾರದು ಎನ್ನುತ್ತದೆ ವಾಸ್ತು ಶಾಸ್ತ್ರ.

Exit mobile version