ಮನೆಯಲ್ಲಿ (vastu for home) ಸುಖ, ಶಾಂತಿ, ನೆಮ್ಮದಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ (Vastu Tips) ಕೆಲವು ಸಲಹೆಗಳನ್ನೂ ನೀಡಲಾಗಿದೆ. ಮನೆಯಲ್ಲಿ ಕೆಲವೊಂದು ಸಸ್ಯಗಳನ್ನು (tree) ಇಡುವುದು, ಧೂಪ ದ್ರವ್ಯಗಳನ್ನು (Incense stick) ಸುಡುವುದು ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಹಣ, ಸಂತೋಷ, ಸಮೃದ್ಧಿಯನ್ನು ಆಕರ್ಷಿಸುತ್ತದೆ. ಹೀಗಾಗಿ ಮನೆಯಲ್ಲಿ ಯಾವ ಸಸ್ಯಗಳನ್ನು ಇಡಬಹುದು, ಧೂಪದ್ರವ್ಯಗಳನ್ನು ಸುಡುವುದರಿಂದ ಏನು ಪ್ರಯೋಜನ, ಮನೆಯ ಸಮೃದ್ಧಿಗಾಗಿ ಏನು ಮಾಡಬಹುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಸಸ್ಯಗಳು
ಹೆಸರೇ ಹೇಳುವಂತೆ ಮನಿ ಪ್ಲಾಂಟ್ ಮನೆಯಲ್ಲಿ ಲಕ್ಷ್ಮಿ ನೆಲೆಸಲು ಕಾರಣವಾಗುತ್ತವೆ ಎನ್ನುವ ನಂಬಿಕೆ ಇದೆ. ಬೇಗ ಶ್ರೀಮಂತರಾಗಲು ಇದು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನಿಪ್ಲಾಂಟ್‌ಗೆ ವಿಶೇಷವಾದ ಸ್ಥಾನಮಾನವಿದೆ. ಮನೆಯಲ್ಲಿ ಮನಿ ಪ್ಲಾಂಟ್‌ಗಳನ್ನು ಇಟ್ಟುಕೊಳ್ಳುವುದು ಹಣ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಮನಿ ಪ್ಲಾಂಟ್, ಬಿದಿರಿನ ಸಸ್ಯ ಮತ್ತು ರಬ್ಬರ್ ಸಸ್ಯಗಳಂತಹ ಸಸ್ಯಗಳು ಜೀವನದಲ್ಲಿ ಸಂತೋಷವನ್ನು ಆಕರ್ಷಿಸಲು ಸಹಾಯಕವಾಗಿವೆ.
ಧೂಪದ್ರವ್ಯ
ಧೂಪದ್ರವ್ಯದ ತುಂಡುಗಳು ಜೀವನದಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ. ಮನೆಯಲ್ಲಿ ಅಗರಬತ್ತಿಯನ್ನು ಸುಡುವುದು ವಾಸ್ತು ಪ್ರಕಾರ ಒಳ್ಳೆಯ ಅಭ್ಯಾಸ. ಧೂಪದ್ರವ್ಯದ ತುಂಡುಗಳಿಂದ ಹೊರ ಬರುವ ಹೊಗೆ ಮತ್ತು ಹೋಮ ಹವನದ ಹೊಗೆ ಪರಿಸರವನ್ನು ಶುದ್ಧೀಕರಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಪವಿತ್ರ ವಾತಾವರಣವನ್ನು ಸೃಷ್ಟಿಸುತ್ತದೆ. ಧೂಪದ್ರವ್ಯದ ಪರಿಮಳಯುಕ್ತ ಹೊಗೆಯು ಗಾಳಿಯನ್ನು ಶುದ್ಧೀಕರಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ.
ಸ್ವಚ್ಛವಾದ ಪ್ರವೇಶ ದ್ವಾರ
ಮನೆಯಲ್ಲಿ ಸಕಾರಾತ್ಮಕತೆ ಮತ್ತು ಕ್ಷೇಮವನ್ನು ಆಕರ್ಷಿಸಲು ಉತ್ತಮವಾದ ಮತ್ತು ಸ್ವಚ್ಛವಾದ ಪ್ರವೇಶದ್ವಾರವು ಮುಖ್ಯವಾಗಿದೆ. ವಾಸ್ತು ಪ್ರಕಾರ, ನಿಮ್ಮ ಪ್ರವೇಶ ದ್ವಾರವು ಮನಸ್ಸನ್ನು ಹರ್ಷಗೊಳ್ಳುವಂತೆ ಮಾಡಬೇಕು. ಇದಕ್ಕಾಗಿ ನಿತ್ಯವೂ ಮನೆಯ ಪ್ರವೇಶ ದ್ವಾರವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕುವುದು, ಹೂವುಗಳಿಂದ ದ್ವಾರವನ್ನು ಅಲಂಕರಿಸುವುದು ಒಳ್ಳೆಯದು.
ನೀರಿನ ಸೋರಿಕೆ
ವಾಸ್ತು ಪ್ರಕಾರ ಮನೆಯೊಳಗೇ ನೀರು ಸೋರಿಕೆಯಾಗುತ್ತಿದ್ದರೆ ಕೂಡಲೇ ಅದನ್ನು ಸರಿಪಡಿಸಬೇಕು. ಮನೆಯ ಸುತ್ತಲೂ ನೀರಿನ ಸೋರಿಕೆ ಇದ್ದರೆ ಅದನ್ನು ಸರಿಪಡಿಸಿ. ಯಾಕೆಂದರೆ ನೀರು ಸೋರಿಕೆಯು ಮನೆಮಂದಿಯ ಜೀವನದ ಬೆಳವಣಿಗೆಗೆ ಅಡ್ಡಿಯಾಗಬಹುದು ಮತ್ತು ಹಣದ ಹರಿವಿಗೆ ತೊಂದರೆ ಉಂಟು ಮಾಡಬಹುದು.
ಇದನ್ನೂ ಓದಿ: Vastu Tips: ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂತೋಷ, ಸಮೃದ್ಧಿ, ನೆಮ್ಮದಿ ಸಿಗುತ್ತವೆ!
ತಾಮ್ರ ಸ್ವಸ್ತಿಕ
ಮನೆಯಲ್ಲಿ ತಾಮ್ರದ ಸ್ವಸ್ತಿಕವು ವಾಸ್ತು ಪ್ರಕಾರ ಜೀವನದಲ್ಲಿ ಹಣ, ಸಂತೋಷ ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಉತ್ತಮ ಮಾರ್ಗವಾಗಿದೆ. ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಪೂಜಾ ಸ್ಥಳದಲ್ಲಿ ಇವನ್ನು ಇರಿಸುವುದು ಶುಭ ಎಂದು ಪರಿಗಣಿಸಲಾಗಿದೆ. ಸ್ವಸ್ತಿಕವು ಶಕ್ತಿ ಮತ್ತು ಶಾಂತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಮನೆಯ ಮುಖ್ಯ ಬಾಗಿಲ ಬಳಿ ತಾಮ್ರದ ಸ್ವಸ್ತಿಕ ಇಟ್ಟರೆ ದಾರಿದ್ರ್ಯವೂ ಶಾಶ್ವತವಾಗಿ ದೂರವಾಗುತ್ತದೆ ಎನ್ನಲಾಗುತ್ತದೆ.