ಮನೆ (home) ಮಂದಿಯ ಆರೋಗ್ಯ (health) ಮತ್ತು ಸಮೃದ್ಧಿಯ (wealth) ಗುಟ್ಟು ಅಡುಗೆ ಮನೆಯಲ್ಲಿ (kitchen room) ಇರುತ್ತದೆ ಎಂದು ಮನೆಯ ಹಿರಿಯರು ಆಗಾಗ ಹೇಳುವುದನ್ನು ನಾವು ಕೇಳಿರುತ್ತೇವೆ. ವಾಸ್ತು ಶಾಸ್ತ್ರವು (Vastu Tips) ಕೂಡ ಇದನ್ನೇ ಹೇಳುತ್ತದೆ. ಹೀಗಾಗಿ ಅಡುಗೆ ಮನೆಗೆ ಸಂಬಂಧಿಸಿ ವಾಸ್ತು ಶಾಸ್ತ್ರದಲ್ಲಿ ವಿಶೇಷ ನಿಯಮಗಳಿವೆ. ಅದರಲ್ಲೂ ಒಲೆಯ (stove) ದಿಕ್ಕಿಗೆ ವಿಶೇಷ ಸ್ಥಾನವಿದೆ.
ವಾಸ್ತು ಶಾಸ್ತ್ರದಲ್ಲಿ ಶಕ್ತಿಗೆ ವಿಶೇಷ ಮಹತ್ವವಿದೆ. ಅಡುಗೆ ಮನೆಗೆ ಸಂಬಂಧಿಸಿ ವಾಸ್ತು ನಿಯಮಗಳನ್ನು ಪಾಲಿಸದೇ ಇದ್ದರೆ ಮನೆಗೆ ನಕಾರಾತ್ಮಕ ಶಕ್ತಿ ಬರಬಹುದು ಎನ್ನಲಾಗುತ್ತದೆ.
ಮನೆಯ ಪ್ರತಿಯೊಂದು ಮೂಲೆಗೂ ನಿರ್ದಿಷ್ಟ ದಿಕ್ಕನ್ನು ಸೂಚಿಸಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಗೆ ಸಂಬಂಧಿಸಿ ಹಲವು ಪ್ರಮುಖ ವಿಷಯಗಳನ್ನು ಹೇಳಲಾಗಿದೆ. ಅಡುಗೆ ಮನೆಯಲ್ಲಿ ಯಾವುದೇ ದೋಷವಿದ್ದರೆ ಅದರ ಪರಿಣಾಮ ಅಡುಗೆ ಮಾಡುವವರ ಮೇಲೆ ಹಾಗೂ ಇಡೀ ಕುಟುಂಬದ ಮೇಲೆ ಬೀಳುತ್ತದೆ.
ಅಡುಗೆ ಮನೆಯಲ್ಲಿ ಇಟ್ಟಿರುವ ಒಲೆಯ ದಿಕ್ಕು ತಪ್ಪಿದರೆ ಮನೆಯ ನೆಮ್ಮದಿ ಕೆಡುತ್ತದೆ. ಹೀಗಾಗಿ ಒಲೆಯ ದಿಕ್ಕಿಗೆ ವಿಶೇಷ ಗಮನ ನೀಡಬೇಕು.
ಯಾವ ದಿಕ್ಕಿನಲ್ಲಿ ಒಲೆ ಇಡಬಾರದು?
ಒಲೆಯನ್ನು ಉತ್ತರ ದಿಕ್ಕಿನಲ್ಲಿ ಇಡಬಾರದು. ಈ ದಿಕ್ಕು ಲಕ್ಷ್ಮಿ ದೇವಿಯ ಪ್ರತೀಕವಾಗಿದೆ. ಈ ದಿಕ್ಕಿನಲ್ಲಿ ಒಲೆ ಇಡುವುದರಿಂದ ಸಂಪತ್ತು ಕಡಿಮೆಯಾಗಬಹುದು ಎಂದು ನಂಬಲಾಗಿದೆ. ಪಶ್ಚಿಮ ದಿಕ್ಕು ಪಿತೃ ದೇವತೆಗಳ ಸಂಕೇತವಾಗಿದೆ. ವಾಸ್ತು ಪ್ರಕಾರ, ಈ ದಿಕ್ಕಿನಲ್ಲಿ ಒಲೆ ಇಡುವುದರಿಂದ ಕುಟುಂಬದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
ನೈಋತ್ಯ ದಿಕ್ಕು ರಾಹು ಗ್ರಹದ ಸಂಕೇತವಾಗಿದೆ. ಈ ದಿಕ್ಕಿನಲ್ಲಿ ಒಲೆ ಇಡುವುದರಿಂದ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸಬಹುದು. ಇದು ಮನಸ್ಸಿನಲ್ಲಿ ಅಶಾಂತಿ ಮತ್ತು ತೊಂದರೆಗಳನ್ನು ಉಂಟುಮಾಡಬಹುದು. ಈಶಾನ್ಯ ಮೂಲೆಯು ದೇವರ ಸಂಕೇತವಾಗಿದೆ. ಈ ದಿಕ್ಕಿನಲ್ಲಿ ಒಲೆ ಇಡುವುದರಿಂದ ಪೂಜೆಗೆ ಅಡ್ಡಿಯಾಗುತ್ತದೆ ಮತ್ತು ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ.
ಇದನ್ನೂ ಓದಿ: Vastu Tips: ಉದ್ಯೋಗದಲ್ಲಿ ಪ್ರಗತಿ ಸಾಧಿಸಬೇಕೆ? ಹೀಗೆ ಮಾಡಿ
ಯಾವ ದಿಕ್ಕು ಒಳ್ಳೆಯದು?
ಆಗ್ನೇಯ ದಿಕ್ಕು ಅಗ್ನಿ ದೇವರ ಸಂಕೇತವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಒಲೆಯ ಬಾಯಿಯನ್ನು ಈ ದಿಕ್ಕಿನಲ್ಲಿ ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕತೆಯ ಹರಿವನ್ನು ಹೆಚ್ಚಿಸುತ್ತದೆ.
ಒಲೆಯನ್ನು ಪೂರ್ವ ದಿಕ್ಕಿಗೆ ಇಡುವುದು ಕೂಡ ಮಂಗಳಕರ. ಈ ದಿಕ್ಕು ಸೂರ್ಯ ದೇವರ ಸಂಕೇತವಾಗಿದೆ. ಈ ದಿಕ್ಕಿಗೆ ಒಲೆ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಗ್ರಹಗಳ ಸ್ಥಾನವನ್ನು ಬಲಪಡಿಸುತ್ತದೆ. ಇದರ ಶುಭ ಪರಿಣಾಮದಿಂದಾಗಿ ಕುಟುಂಬ ಸದಸ್ಯರ ಆರೋಗ್ಯವು ಉತ್ತಮವಾಗಿರುತ್ತದೆ.