Site icon Vistara News

Krishan Das: ಕೃಷ್ಣ ದಾಸ್‌ ಕೀರ್ತನೆ ಆಲಿಸಿ ಲೋಕವನ್ನೇ ಮರೆತ ವಿರಾಟ್‌ ಕೊಹ್ಲಿ

virat kohli

ಲಂಡನ್‌: ರನ್‌ ಮಾಂತ್ರಿಕ ವಿರಾಟ್‌ ಕೊಹ್ಲಿಯ ಫಾರ್ಮ್‌ ಬಗ್ಗೆ ಜಗತ್ತೇ ಚರ್ಚೆ ನಡೆಸುತ್ತಿರುವ ಹೊತ್ತಲ್ಲಿ, ವಿರಾಟ್‌ ಕೊಹ್ಲಿ ಕೀರ್ತನೆಗಳನ್ನು ಗುನುಗುತ್ತಾ ಕೆಲ ಹೊತ್ತು ಜಗತ್ತನ್ನೇ ಮರೆತಿದ್ದಾರೆ. ಈ ವಿಷಯ ಕೃಷ್ಣ ದಾಸ್‌ (Krishan Das) ಭಕ್ತರೊಬ್ಬರ ಮೂಲಕ ಜಗತ್ತಿಗೇ ಗೊತ್ತಾಗಿದೆ.

ಟೀಮ್‌ ಇಂಡಿಯಾ ಸದ್ಯ ಇಂಗ್ಲೆಂಡ್‌ ಪ್ರವಾಸದಲ್ಲಿದ್ದು, ಏಕದಿನ ಸರಣಿಯ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಈ ನಡುವೆ ಟೆಸ್ಟ್‌ ಸರಣಿಯ ಪಂದ್ಯ ಹಾಗೂ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ವಿರಾಟ್‌ ಕೊಹ್ಲಿಯ ಬಗ್ಗೆ ಎಲ್ಲರೂ ಚರ್ಚೆ ನಡೆಸುತ್ತಿದ್ದಾರೆ. ಈ ಎಲ್ಲ ಟೀಕಾಸ್ತ್ರಗಳಿಂದ ಪಾರಾಗಲು ಮಾರ್ಗ ಕಂಡುಕೊಂಡ ವಿರಾಟ್‌ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮ ಜತೆ ಕೃಷ್ಣ ದಾಸ್‌ ಅವರ ಕೀರ್ತನೆ ಆಲಿಸಿದ್ದಾರೆ.

ಕೃಷ್ಣ ದಾಸ್‌ ಅವರ ಅನುಯಾಯಿಯಾಗಿರುವ ಹನುಮಾನ್‌ ದಾಸ್‌ ಎಂಬುವರು ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಜತೆ ಫೋಟೋ ತೆಗಿಸಿಕೊಂಡಿರುವ ಅವರು ಇನ್‌ಸ್ಟಾಗ್ರಾಮ್‌ನಲಿ ಅದನ್ನು ಹಂಚಿಕೊಂಡಿದ್ದಾರೆ. “ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮ ಹಾಗೂ ನನ್ನನ್ನು ಒಂದೆಡೆ ಸೇರುವಂತೆ ಮಾಡಿದ್ದಾರೆ ಮಹರಾಜ್‌ಜೀ,ʼʼ ಎಂದು ಹನುಮಾನ್‌ ದಾಸ್‌ ಬರೆದುಕೊಂಡಿದ್ದಾರೆ.

ಕೃಷ್ಣ ದಾಸ್‌ ಅವರ ಕೀರ್ತನೆ ಕಾರ್ಯಕ್ರಮ ಜುಲೈ ೧೪ ಹಾಗೂ ೧೫ರಂದು ಲಂಡನ್‌ನ ಯೂನಿಯನ್‌ ಚಾಪೆಲ್‌ನಲ್ಲಿ ನಡೆದಿತ್ತು. ಕೊಹ್ಲಿಗೆ ಅಲ್ಲಿಗೆ ಭೇಟಿ ಕೊಟ್ಟಿದ್ದರು.

ಯಾರಿವರು ಕೃಷ್ಣದಾಸ್‌

ಕೃಷ್ಣ ದಾಸ್‌ ಅಮೆರಿಕ ಮೂಲದ ಕೃಷ್ಣನ ಭಕ್ತ. ಅವರು ಕೃಷ್ಣ ಕೀರ್ತನೆಗಳ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅವರ ಕಾರ್ಯಕ್ರಮಗಳಿಗೆ ಸಾವಿರಾರು ಭಕ್ತರು ಜಮಾಯಿಸುತ್ತಾರೆ. ಅಂತೆಯೇ ೧೯೯೬ರಿಂದ ಒಟ್ಟಾರೆ ೧೭ ಆಲ್ಬಮ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಇವರು ೨೦೧೩ರ ಗ್ರ್ಯಾಮಿ ಅವಾರ್ಡ್‌ ವೇದಿಕೆಯಲ್ಲಿ ಹಾಡಿದ್ದಾರೆ ಹಾಗೂ ಅವರ ಲೈವ್‌ ಆನಂದ (೨೦೧೨) ಗ್ರ್ಯಾಮಿಯ ಉತ್ತಮ ಆಧುನಿಕ ಯುಗದ ಸಂಗೀತ ಆಲ್ಬಮ್‌ ಪಟ್ಟಿಯಲ್ಲಿ ನಾಮ ನಿರ್ದೇಶನಗೊಂಡಿತ್ತು.

ಇದನ್ನೂ ಓದಿ | Windis Tour | ಕೆರಿಬಿಯನ್‌ ನಾಡಿಗೂ ಹೋಗಲ್ಲ ವಿರಾಟ್‌ ಕೊಹ್ಲಿ, ಬುಮ್ರಾಗೂ ರೆಸ್ಟ್

Exit mobile version