ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೋರಬಂಡಾ ಗ್ರಾಮದ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಶುಕ್ರವಾರ 101 ದಂಪತಿಗಳಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ (Yadgiri News) ನೆರವೇರಿತು.
ಶ್ರಾವಣ ಮಾಸದ ಅಂಗವಾಗಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ ನಡೆಸಲಾಯಿತು. ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಂಘದ ವ್ಯವಸ್ಥಾಪಕ ನರೇಂದ್ರ ರಾಠೋಡ ಅವರ ನೇತೃತ್ವದಲ್ಲಿ ಪೂಜೆ ಕಾರ್ಯಕ್ರಮ ನಡೆಸಲಾಯಿತು. ವಿವಿಧ ಭಾಗದಿಂದ ಆಗಮಿಸಿದ ದಂಪತಿಗಳು ಶ್ರೀ ಲಕ್ಷ್ಮಿ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: 7th pay commission: ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಶ್ರೇಣಿ ಪ್ರಕಟ; ಯಾರಿಗೆ ಎಷ್ಟು ಏರಿಕೆ?
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಗುರುಮಠಕಲ್‌ನ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಆಶೀರ್ವಚನ ನೀಡಿ ಮಾತನಾಡಿ, ಶ್ರಾವಣ ಮಾಸದ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಮ್ಮಿಕೊಂಡಿದ್ದು ಉತ್ತಮ ಧಾರ್ಮಿಕ ಕಾರ್ಯ ಇದಾಗಿದೆ ಎಂದರು.
ಮಹಾ ನೈವೇದ್ಯ, ಮಹಾಮಂಗಳಾರತಿ ವಿವಿಧ ಪೂಜಾ ಕಾರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಜಿಲ್ಲೆಯ ವಿವಿಧ ಭಾಗದಿಂದ ಭಕ್ತರು ಆಗಮಿಸಿ, ಶ್ರೀ ಲಕ್ಷ್ಮಿ ದೇವಿಯ ದರ್ಶನ ಪಡೆದರು.
ಇದನ್ನೂ ಓದಿ:UPSC Exam calendar: UPSC ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್ ರಿಲೀಸ್; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಕಾರ್ಯಕ್ರಮದಲ್ಲಿ ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಅನಂತಪ್ಪ ಯದ್ಲಾಪುರ, ಕಾಶಿನಾಥ ರಾಠೋಡ, ವಿರೇಶ್ ಆವಂಟಿ, ಗುರು ತಲಾರಿ, ಶಂಕರ ನಾಯಕ, ಶರಣು, ಸಂಜೀವ್ ಚಂದಾಪುರ, ಅಯ್ಯಪ್ಪ ರಾಠೋಡ, ಮನೋಹರ್ ರಾಠೋಡ, ರಾಮು ಪವಾರ್, ರವಿಕುಮಾರ ಹಾಗೂ ಇನ್ನಿತರರು ಇದ್ದರು.