ಯಲ್ಲಾಪುರ: ವೇದಗಳು ನಮ್ಮ ಧರ್ಮದ ಮೂಲವಾಗಿದೆ. ಅವು ಎಲ್ಲ ವಿಷಯಗಳ ಮೇಲೂ ಬೆಳಕು ಬೀರುವಂತಹ ಜ್ಞಾನಗಳ ಆಗರ. ಅವುಗಳ ರಕ್ಷಣೆ ಮಾಡಿಕೊಂಡು ಹೋಗುವುದು ಅಗತ್ಯ ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಯಲ್ಲಾಪುರ ತಾಲೂಕಿನ ಆನಗೊಡ ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ರಾಷ್ಟ್ರ ಕ್ಷೇಮವನ್ನು ಸಂಕಲ್ಪಿಸಿ ನಡೆಯುತ್ತಿರುವ ಚತುರ್ವೇದ ಪಾರಾಯಣ, ಪುರಾಣಗಳ ಪಾರಾಯಣ ಮತ್ತು ಗುರು ಪಾದುಕಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗುರು ಪಾದುಕಾ ಪೂಜೆಯ ನಂತರ ಆಶೀರ್ವಚನ ನೀಡಿದರು.
ಇದನ್ನೂ ಓದಿ: Maddur: ಬಿಜೆಪಿ ಎಸ್.ಎಂ. ಕೃಷ್ಣ ಹೇಳಿದವರಿಗೆ ಕಾಂಗ್ರೆಸ್ ಟಿಕೆಟ್?: ಮದ್ದೂರು ಟಿಕೆಟ್ ಬಗ್ಗೆ ಡಿಕೆಶಿ ನಿರ್ಧಾರ
“ಈ ರೀತಿಯ ಪಾರಾಯಣಗಳು ನಡೆಯುವ ಕ್ಷೇತ್ರವು ಪವಿತ್ರ ಕ್ಷೇತ್ರವಾಗಿ ಬದಲಾಗುತ್ತದೆ. ರಾಷ್ಟ್ರ ಎಂಬುದು ಕೇವಲ ಜನರಿಂದ ಅಥವಾ ಆಳುವ ವ್ಯಕ್ತಿಗಳಿಂದ ನಿಂತಿಲ್ಲ. ಅವರ ಹಿಂದೆ ದೇವತಾ ಶಕ್ತಿಗಳಿವೆ. ದೇಶದೊಳಗಿನ ಸಮಸ್ಯೆ, ದೇಶದ ಹೊರಗಿನ ಸಮಸ್ಯೆ, ಇಷ್ಟೆಲ್ಲ ವೈವಿಧ್ಯತೆಯನ್ನು ಹೊಂದಿರುವ ಭಾರತದಂತಹ ರಾಷ್ಟ್ರ ಬೇರೆ ಇಲ್ಲ. ಆದಾಗ್ಯೂ ಭಾರತ ಅಚಲವಾಗಿ ನಿಂತಿದೆ. ಮತಾಂತರಿಗಳ ಆಗಮನದ ಹೊರತಾಗಿಯೂ ನಮ್ಮ ದೇಶ ಇಂದಿಗೂ ಹಿಂದು ರಾಷ್ಟ್ರವಾಗಿ ಉಳಿದಿದೆ. ಇವೆಲ್ಲವುಗಳ ಹಿಂದೆ ದೇವರ ಅನುಗ್ರಹವೇ ಮುಖ್ಯ ಕಾರಣವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಮದ್ರಾಸ್ ಐಐಟಿಯಿಂದ ನಾಲ್ಕು ವರ್ಷಗಳ ಆನ್‌ಲೈನ್ ಬಿಎಸ್ ಪದವಿ ಶುರು
“ನಮ್ಮಲ್ಲಿರುವ ಈಗಿನ ವೇದಗಳ ಪೈಕಿ ಬಹುಭಾಗವನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. ಅವುಗಳನ್ನು ಓದುವ ಅಷ್ಟೇ ಅಲ್ಲದೆ, ಓದುವವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ರಾಷ್ಟ್ರದಲ್ಲಿಯೇ ಅತಿ ಹೆಚ್ಚು ವೇದಾಭ್ಯಾಸ ಮಾಡುವ ವಿದ್ಯಾರ್ಥಿಗಳಿದ್ದರೆ ಅಂತಹ ಕ್ಷೇತ್ರ ಯಲ್ಲಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶವಾಗಿದೆ” ಎಂದರು.
ಇದನ್ನೂ ಓದಿ: Lokayukta Raid : ಮಾಡಾಳ್‌ಗೆ ಮಧ್ಯಂತರ ಜಾಮೀನು ಸಿಕ್ಕರೂ 48 ಗಂಟೆಯೊಳಗೆ ಲೋಕಾಯುಕ್ತ ಮುಂದೆ ಹಾಜರಿ ಕಡ್ಡಾಯ