Site icon Vistara News

ಮೆಕ್ಸಿಕೋದ ಬಾರ್​​ನಲ್ಲಿ ಗುಂಡಿನ ದಾಳಿ; 10 ಮಂದಿ ಸಾವು, ಹಲವರಿಗೆ ಗಾಯ

Mexico

ಮೆಕ್ಸಿಕೋದ ಕೇಂದ್ರ ಭಾಗದಲ್ಲಿರುವ ಬಾರ್​ವೊಂದರಲ್ಲಿ ಗುಂಡಿನ ದಾಳಿಗೆ 10 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೇ ವರ್ಷ ಮೇ ತಿಂಗಳಲ್ಲಿ ಮೆಕ್ಸಿಕೋದ ಸೆಲ್ಯಾ ಎಂಬ ನಗರದಲ್ಲಿ ಒಂದು ಹೋಟೆಲ್​ ಮತ್ತು ಒಂದು ಬಾರ್​ನಲ್ಲಿ ಗುಂಡಿನ ದಾಳಿ ನಡೆದಿತ್ತು. ಆಗಲೂ ಒಟ್ಟು 10 ಜನ ಸಾವನ್ನಪ್ಪಿದ್ದರು. ಮಾರ್ಚ್​ ತಿಂಗಳಲ್ಲಿ ಇದೇ ಮೆಕ್ಸಿಕೋದ ಕೇಂದ್ರ ಭಾಗದಲ್ಲಿ ಫೈರಿಂಗ್​ ಆಗಿತ್ತು. ಅದರಲ್ಲಿ 19 ಜನರು ಬಲಿಯಾಗಿದ್ದರು.

ಇಂದು ನಡೆದ ಗುಂಡಿನ ದಾಳಿಯ ವಿಡಿಯೋ ಕೂಡ ವೈರಲ್ ಆಗಿದೆ. ಏಕಾಏಕಿ ಫೈರಿಂಗ್ ಆಗುತ್ತಿದ್ದಂತೆ ಜನರು ಗಾಬರಿಯಿಂದ ಕೂಗಿದ್ದಾರೆ. ಕೆಲವರು ಜೀವ ಹೋಗುವ ನೋವಲ್ಲಿ ಅರಚಾಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಗುಂಡಿನ ದಾಳಿಗೆ ಕಾರಣವೇನು? ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಹಾಗಿದ್ದಾಗ್ಯೂ ಇದೊಂದು ಪ್ರತೀಕಾರಕ್ಕಾಗಿ ನಡೆಸಲಾದ ಗುಂಡಿನ ದಾಳಿ ಎಂದು ಪೊಲೀಸರು ಹೇಳಿದ್ದು, ತನಿಖೆ ನಡೆಸುತ್ತಿದ್ದಾರೆ. ಆದರೂ ಮೆಕ್ಸಿಕೋದಲ್ಲಿ ಪದೇಪದೆ ಹೀಗೆ ಸಾಮೂಹಿಕ ಹತ್ಯೆ ನಡೆಯುತ್ತಿರುವುದು ಆತಂಕ ತಂದೊಡ್ಡಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ವಲಸೆ ಕಾರ್ಮಿಕನನ್ನು ಕೊಂದ ಉಗ್ರರು; ಮಧ್ಯರಾತ್ರಿ ಗುಂಡಿನ ದಾಳಿ

Exit mobile version