Site icon Vistara News

ಬೆನ್-ಫರ್‌ 2.0! ಮತ್ತೆ ಒಂದಾದ ಬೆನ್‌ & ಜೆನಿಫರ್

ನವದೆಹಲಿ: ʼಒಂದು ವಿಶೇಷ ಘೋಷಣೆ ಮಾಡುತ್ತಿದ್ದೇನೆ. ನಿಮ್ಮೊಂದಿಗೆ ಸಂತಸದ ಸುದ್ದಿ ಹಂಚಿಕೊಳ್ಳುವುದಿದೆʼ ಎಂದು ಹಾಲಿವುಡ್‌ ನಟಿ ಜೆನಿಫರ್‌ ಲೊಪೆಜ್‌ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿದ ವಿಡಿಯೋ ಇದೀಗ ವೈರಲ್‌ ಆಗಿದೆ. ಅಲ್ಲದೆ, ನಟಿ jennifer lopez ತಮ್ಮ ಫ್ಯಾನ್‌ ನ್ಯೂಸ್ ಲೆಟರ್‌ On the JLo.com ನಲ್ಲಿ ಬೆನ್ ಆಲ್ಫೆಕ್‌ ಜತೆ ಎಂಗೇಜ್‌ (Engage) ಆಗಿರುವ ವಿಷಯವನ್ನು ಖಾತ್ರಿಗೊಳಿಸಿದ್ದಾರೆ.

ಈ ಹಿಂದೆ ನಟಿ ಜನಿಫರ್‌ ಲೊಪೆಜ್‌ ಹಾಗೂ ನಟ ಬೆನ್‌ ಆಲ್ಫಕ್‌ ಒಟ್ಟಿಗೆ ಗಿಗ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು 2002ರಲ್ಲಿ ಇಬ್ಬರೂ ಎಂಗೇಜ್‌ ಆಗಿದ್ದರು. ಆದರೆ, ಎರಡೇ ವರ್ಷದಲ್ಲಿ ಅವರಿಬ್ಬರ ಬ್ರೇಕ್‌ಅಪ್‌ ಆಗಿತ್ತು. ನಂತರದಲ್ಲಿ ‌, ಜೆನಿಫರ್‌ ಲೊಪೆಜ್‌ ಮಾರ್ಕ್‌ ಅಂಥೊನಿಯನ್ನು ಮದುವೆ ಆಗಿದ್ದರು. ಹಾಗೂ ಬೆನ್‌ ಆಲ್ಫೆಕ್‌ ಜೆನಿಫರ್‌ ಗಾರ್ನೆರ್‌ ಮದುವೆ ಆಗಿದ್ದರು. ಆದರೆ ಕಳೆದ ವರ್ಷ ಈ ಎರಡೂ ಜೋಡಿಗಳು ಬೇರೆ ಬೇರೆಯಾಗಿದ್ದರು. ಈಗ ಮತ್ತೊಮ್ಮೆ 52 ವರ್ಷದ ನಟಿ ಜೆನಿಫರ್‌ ಲೊಪೆಜ್ ಹಾಗೂ 49 ವರ್ಷದ ನಟ ಬೆನ್‌ ಜೋಡಿ ಹಕ್ಕಿಗಳಾಗಿ ಒಟ್ಟಿಗೆ ಸೇರಿರುವುದು ಫ್ಯಾನ್ಸ್‌ಗಳಿಗೆ ಅಚ್ಚರಿ ಹಾಗೂ ಸಂತಸ ಮೂಡಿಸಿದೆ.

ಜೆನಿಫರ್‌ ಹಾಗೂ ಬೆನ್‌ ಆಲ್ಫೆಕ್‌ ಕಳೆದ ಒಂದು ವರ್ಷದಿಂದ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮೆಟ್‌ ಗಾಲಾ ಸೇರಿದಂತೆ ಹಲವು ರೆಡ್‌ ಕಾರ್ಪೆಟ್‌ ಕಾರ್ಯಕ್ರಮಗಳಲ್ಲಿ ಇಬ್ಬರೂ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದ್ದು ಫ್ಯಾನ್ಸ್‌ಗಳಿಗೆ ಹೊಸ ಸುದ್ದಿಯ ನಿರೀಕ್ಷೆ ಮೂಡಿಸಿತ್ತು.

ಈಗ‌ ನಟಿ ಜೆನಿಫರ್‌ ಲೊಪೆಜ್‌ಗೆ ನಟ ಬೆನ್‌ ಆಲ್ಫೆಕ್ ಮತ್ತೊಮ್ಮೆ ಎಂಗೇಜ್‌ ಆಗಿರುವ ಸುದ್ದಿಯನ್ನು ಖುದ್ದಾಗಿ ಜೆನಿಫರ್‌ ಬಹಿರಂಗ ಪಡಿಸಿದ್ದಾರೆ. ನಟಿ ಜೆನಿಫರ್ ಬೆನ್‌ ಆಲ್ಫೆಕ್‌ಗೆ ʼಯು ಆರ್‌ ಪರ್ಫೆಕ್ಟ್‌ʼ‌ ಎಂದು ಹೇಳಿದ ವಿಡಿಯೋ ಸೊಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಹೆಚ್ಚಿನ ಓದಿಗಾಗಿ: ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿರೂಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
Exit mobile version