ಬೀಜಿಂಗ್ : ಕೋವಿಡ್-19 ವೈರಸ್ನಿಂದ ತತ್ತರಿಸಿ ಸುಧಾರಿಸಿಕೊಳ್ಳುತ್ತಿರುವ ಚೀನಾದಲ್ಲಿ ಹೊಸ ಮಾದರಿಯ ಜ್ವರ (Flue) ಕಾಣಿಸಿಕೊಂಡಿದೆ. ಹೀಗಾಗಿ ಅಲ್ಲಿ ಕೊರೊನಾ ಮಾದರಿಯ ಲಾಕ್ಡೌನ್ (Covid Lockdown) ಹೇರಲಾಗುತ್ತಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ. ಚೀನಾದ ಆಗ್ನೇಯ ನಗರವಾಗಿರುವ ಕ್ಸಿಯಾನ್ನಲ್ಲಿ ಜನರು ಹೊಸ ಮಾದರಿಯ ಜ್ವರದಿಂದ ತತ್ತರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅದರ ಪಾಸಿಟಿವ್ ರೇಟ್ ಶೇ. 41.6 ರಷ್ಟಿದೆ. ಕಳೆದ ವಾರ ಅದರ ಪ್ರಮಾಣ 25.1 ರಷ್ಟಿತ್ತು. ಹೀಗಾಗಿ ಪ್ರಕರಣಗಳ ಏರಿಕೆ ಕಂಡಿರುವ ಕಾರಣ ಚೀನಾದ ಕಮ್ಯುನಿಷ್ಟ್ ಸರಕಾರ ಲಾಕ್ಡೌನ್ ಮೊರೆ ಹೋಗಿದೆ.
ಇದನ್ನೂ ಓದಿ : Coronavirus: ಶುಭ ಸುದ್ದಿ, ಕೊರೊನಾದಿಂದ ಇನ್ನು ಅಪಾಯವಿಲ್ಲ! ಸಿಡಿಸಿ ಇಂಡಿಯಾ ಮುಖ್ಯಸ್ಥೆ ಹೇಳಿದ್ದೇನು?
ಕೊರನಾ ಸಂದರ್ಭದಲ್ಲಿಯೂ ಚೀನಾ ಸರಕಾರ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಲಾಕ್ಡೌನ್ ಹಾಗೂ ಅಂತರ ಕಾಪಾಡಿಕೊಳ್ಳುವ ನಿಯಮವನ್ನು ನಾಲ್ಕು ವರ್ಷಗಳ ಕಾಲ ಚಾಲ್ತಿಯಲ್ಲಿಟ್ಟುತ್ತು. ಇದೀಗ ಕೊರೊನಾ ಸೋಂಕಿನ ಪ್ರಮಾಣ ಶೇ. 3.8ಕ್ಕೆ ಇಳಿಕೆಯಾಗಿದೆ. ಹೀಗಾಗಿ ಲಾಕ್ಡೌನ್ ತೆಗೆಯಲಾಗುತ್ತಿದೆ. ಇದೇ ವೇಳೆ ಹೊಸ ವೈರಲ್ ಜ್ವರ ಆ ದೇಶದಲ್ಲಿ ವ್ಯಾಪಿಸುತ್ತಿದೆ. ಇದಕ್ಕೆ ಹೆದರಿದ ಅಲ್ಲಿನ ಸರಕಾರ ಮತ್ತೆ ಲಾಕ್ಡೌನ್ ಹೇರಿಕೆ ಮಾಡಿದೆ.
2021ರಲ್ಲಿ ಕ್ಸಿಯಾನ್ ನಗರದಲ್ಲಿ ಕೊರೊನಾ ಲಾಕ್ಡೌನ್ ಹೇರಲಾಗಿತ್ತು. 1.3 ಕೋಟಿ ಜನಸಂಖ್ಯೆ ಹೊಂದಿರುವ ಆ ನಗರ ಪದೇ ಪದೇ ಹೇರಲಾಗುವ ಲಾಕ್ಡೌನ್ನಿಂದ ತತ್ತರಿಸಿ ಹೋಗಿತ್ತು. ಅಲ್ಲದೆ ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆಗಳೂ ನಡೆದಿದ್ದವು. ಇದೀಗ ಮತ್ತೆ ಮಳಿಗೆಗಳನ್ನು, ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ.
ಹೊಸ ಲಾಕ್ಡೌನ್ ಬಗ್ಗೆಯೂ ಅಲ್ಲನ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲಾಕ್ಡೌನ್ಗಿಂತ ಎಲ್ಲರಿಗೂ ವ್ಯಾಕ್ಸಿನ್ ನೀಡುವುದು ಉತ್ತಮ ಎಂಬುದಾಗಿ ಅಲ್ಲಿನ ಜನರು ಅಭಿಪ್ರಾಯಪಟ್ಟಿದ್ದಾರೆ.