ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಪಾಕಿಸ್ತಾನವೇ ಹಣಕಾಸು ಬಿಕ್ಕಟ್ಟಿನಿಂದ ಬಳಲುತ್ತಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನ ಪರದಾಡುವಂತಾಗಿದೆ. ದೇಶದ ಬಹುತೇಕ ಜನ ಜೀವನ ನಡೆಸುವುದೇ ಕಷ್ಟವಾಗಿದೆ. ತಮ್ಮ ದೇಶದ ಪರಿಸ್ಥಿತಿಯೇ ಹೀಗಿರುವಾಗ ಭೂಕಂಪದಿಂದ ನಲುಗಿಹೋಗಿರುವ ಟರ್ಕಿ ಹಾಗೂ ಸಿರಿಯಾಗೆ ಪಾಕಿಸ್ತಾನದ ವ್ಯಕ್ತಿಯೊಬ್ಬ ೨೪೮ ರೂ. (೩೦ ದಶಲಕ್ಷ ಡಾಲರ್) ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದಕ್ಕೆ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಸಂತಸ ವ್ಯಕ್ತಪಡಿಸಿದ್ದಾರೆ.
“ಅಪರಿಚಿತ ವ್ಯಕ್ತಿಯೊಬ್ಬರು ಟರ್ಕಿ ಹಾಗೂ ಸಿರಿಯಾಗೆ ೨೪೮ ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅಮೆರಿಕದಲ್ಲಿರುವ ಟರ್ಕಿ ರಾಯಭಾರ ಕಚೇರಿಯಲ್ಲಿ ಅವರು ಎರಡೂ ದೇಶಗಳ ನೆರವಿಗಾಗಿ ದೇಣಿಗೆ ನೀಡಿದ್ದಾರೆ. ಇಂತಹ ಪರೋಪಕಾರದ ನಡೆಯು ಎಲ್ಲ ವಿಕೋಪಗಳು, ಅಪಸವ್ಯಗಳನ್ನು ಮೀರಿ ಮಾನವೀಯತೆಯ ಗೆಲುವಿಗೆ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.
ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಪಾಕಿಸ್ತಾನ ಸರ್ಕಾರವು ಕೂಡ ಟರ್ಕಿ ಹಾಗೂ ಸಿರಿಯಾಗೆ ನೆರವು ನೀಡಲು ಮುಂದಾಗಿದೆ. ಸಂತ್ರಸ್ತರ ನೆರವಿಗಾಗಿ ಸರ್ಕಾರ ಕೂಡ ಸಮಿತಿ ರಚಿಸಿದೆ ಎಂದು ಶೆಹಬಾಜ್ ಮಾಹಿತಿ ನೀಡಿದ್ದಾರೆ. ಟರ್ಕಿ ಹಾಗೂ ಸಿರಿಯಾದಲ್ಲಿ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ೩೪ ಸಾವಿರ ದಾಟಿದೆ.
ಇದನ್ನೂ ಓದಿ: Pakistan economic crisis : ಪಾಕಿಸ್ತಾನ 2024ರ ಮಾರ್ಚ್ ವೇಳೆಗೆ ದಿವಾಳಿ ಸಂಭವ : ವರದಿ