Site icon Vistara News

Turkey Earthquake: ನಡುಗಿದ ಭೂಮಿಯ ಹೊಡೆತದಿಂದ ಇನ್ನೂ ಸುಧಾರಿಸಿಕೊಳ್ಳದ ಟರ್ಕಿಯಲ್ಲಿ ಮತ್ತೆ ಭೂಕಂಪ

Another Earthquake hits Turkey no casualties report

#image_title

ನವ ದೆಹಲಿ: ಫೆ.6ರ ಭೂಕಂಪದಿಂದಲೇ ಇನ್ನೂ ಸುಧಾರಿಸಿಕೊಳ್ಳದ ಟರ್ಕಿಯಲ್ಲಿ ಇಂದು ಮತ್ತೊಮ್ಮೆ ಭೂಮಿ ನಡುಗಿದೆ (Turkey Earthquake). ಟರ್ಕಿಯ ಕೇಂದ್ರ ಭಾಗದಲ್ಲಿರುವ ನಿಗ್ಡೆ ಪ್ರಾಂತ್ಯದಲ್ಲಿ ಇಂದು ಭೂಕಂಪವಾಗಿದ್ದು, ರಿಕ್ಟರ್​ ಮಾಪಕದಲ್ಲಿ 5.3 ತೀವ್ರತೆ ದಾಖಲಾಗಿದೆ. ಈ ಸಲದ ಭೂಕಂಪದಲ್ಲಿ ದೊಡ್ಡಮಟ್ಟದ ಹಾನಿಯೇನೂ ಆಗಿಲ್ಲ ಎನ್ನಲಾಗಿದೆ.

20ದಿನಗಳ ಹಿಂದೆ ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪವಾಗಿ, ಮೃತರ ಸಂಖ್ಯೆ 50 ಸಾವಿರ ದಾಟಿದೆ. ಟರ್ಕಿಯೊಂದರಲ್ಲೇ ಸಾವಿನ ಸಂಖ್ಯೆ 44 ಸಾವಿರಕ್ಕೂ ಹೆಚ್ಚು. ಲಕ್ಷಾಂತರ ಮನೆಗಳು ಕುಸಿದುಬಿದ್ದಿವೆ. ಆಸ್ಪತ್ರೆಗಳು ಧರೆಗೆ ಉರುಳಿವೆ. ಅಂದು ನಡೆದಿದ್ದ ಭೂಕಂಪದ ಹಾನಿ, ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ಕಾರ್ಯಾಚರಣೆಯೇ ಇನ್ನೂ ಸಂಪೂರ್ಣಗೊಂಡಿಲ್ಲ. ಹೀಗಿರುವಾಗ ಮತ್ತೊಂದು ಭೂಕಂಪ ಆಗಿದ್ದು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Operation Dost: ಟರ್ಕಿ ಭೂಕಂಪಪೀಡಿತ ಪ್ರದೇಶದಲ್ಲಿ ಭಾರತದ ಆಸ್ಪತ್ರೆ, ಗಾಯಾಳುಗಳಿಗೆ ಚಿಕಿತ್ಸೆ

ಟರ್ಕಿಯಲ್ಲಿ ಕೆಲವೇ ತಿಂಗಳಲ್ಲಿ ಜನರಲ್ ಎಲೆಕ್ಷನ್​ ಇದೆ. ಇನ್ನೊಂದೆಡೆ ಲಕ್ಷಾಂತರ ಜನರು ನಿರ್ಗತಿಕರಾಗಿದ್ದಾರೆ. ಒಂದು ವರ್ಷದೊಳಗೆ ಜನರಿಗೆ ಮನೆ ಕಟ್ಟಿಸಿಕೊಡುವುದಾಗಿ ಟರ್ಕಿಶ್​ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಹೇಳಿದ್ದಾರೆ. ಆರಂಭಿಕವಾಗಿ 15 ಬಿಲಿಯನ್ ಡಾಲರ್​ ವೆಚ್ಚದಲ್ಲಿ 2 ಲಕ್ಷ ಮನೆಗಳನ್ನು ಅಪಾರ್ಟ್​ಮೆಂಟ್ ರೂಪದಲ್ಲಿ ಮತ್ತು 70 ಸಾವಿರಗಳಷ್ಟು ಸಾಮಾನ್ಯ ಮನೆಗಳನ್ನು ಕಟ್ಟಲು ಯೋಜನೆ ರೂಪಿಸಲಾಗಿದೆ. ಆದರೆ ತಜ್ಞರು ಹೇಳೋದೇ ಬೇರೆ. ನೀವು ವೇಗವಾಗಿ ಮನೆಗಳನ್ನು ಕಟ್ಟುವುದಕ್ಕಿಂತಲೂ ಮುಖ್ಯವಾಗಿ, ಜನರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು, ಗಟ್ಟಿಮುಟ್ಟಾದ ಮನೆಗಳನ್ನು ಕಟ್ಟಿಸಿ ಎನ್ನುತ್ತಿದ್ದಾರೆ.

Exit mobile version